National News : ಅವಕಾಶ ಸಿಕ್ಕರೆ ಕೇಂದ್ರ ಸರ್ಕಾರ ನನನ್ನು ಬಂಧಿಸಬಹುದು ಎಂದು ಮುಖ್ಯಮಂತ್ರಿ ಒಬ್ಬರು ಹೇಳಿದ್ದಾರೆ. ಇಡಿ ದಾಳಿ ವಿಚಾರವಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅವಕಾಶ ಸಿಕ್ಕರೆ ನನ್ನನ್ನು ಕೇಂದ್ರ ಸರ್ಕಾರ ಬಂಧಿಸಬಹುದು ಎಂದು ಛತ್ತಿಸ್ಘಡ ಮುಖ್ಯಮಂತ್ರಿ ಭೂಪೇಶ್ ಬಫೇಲ್ ಹೇಳಿದ್ದಾರೆ. ಹಾಗಿದ್ರೆ ಯಾಕೆ ಅವರು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಈ ಪ್ರಶ್ನೆ ಗೆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಅವಕಾಶ ಸಿಕ್ಕರೇ ಕೇಂದ್ರ ಸರ್ಕಾರ ನನ್ನನ್ನು ಬಂಧಿಸಬಹುದು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರಕ್ಕೆ ನನ್ನ ಬಂಧಿಸಲು ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಇಲ್ಲದಿದ್ದರೆ, ಇಷ್ಟೊತ್ತಿಗೆ ನನ್ನನ್ನು ಬಂಧಿಸುತ್ತಿದ್ದರು.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇಂದ್ರೀಯ ಸಂಸ್ಥೆಯು ಅಧಿಕಾರಿಗಳನ್ನು ಹಿಡಿದಿಟ್ಟುಕೊಂಡು, ತನ್ನ ವಿರೋಧಿಗಳ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ನಿಮ್ಮನ್ನು ಇಡಿ ಬಂಧಿಸುತ್ತದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಭೂಪೇಶ್ ಬಘೇಲ್ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಡಿ ಮೂಲಕ ರಾಜಕೀಯ ಷಡ್ಯಂತ್ರ ಮಾಡುತ್ತಿದೆ. ಷಡ್ಯಂತ್ರದ ಭಾಗವಾಗಿಯೇ ಇಂದು ಅನೇಕ ಕಡೆ ದಾಳಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಸಾರ್ವಜನಿಕ ಯಾವುದೇ ಕಾರ್ಯಕ್ರಮ ಅಥವಾ ಯೋಜನೆಗಳನ್ನು ಬಿಜೆಪಿ ನೀಡಿಲ್ಲ. ಹಾಗಾಗಿ ರಾಜ್ಯದಲ್ಲಿ ಇಂತಹ ಕೆಲಸ ಮಾಡುವ ಮೂಲಕ ರಾಜ್ಯದ ಮಾನಹಾನಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಈಗಾಗಲೇ ರಾಜ್ಯದಲ್ಲಿ ಯಾವುದೇ ಬದಲಾವಣೆಯನ್ನು ತಂದಿಲ್ಲ. ಜತೆಗೆ ರಾಜ್ಯದಲ್ಲಿ ಯಾವುದೇ ಗೆಲುವಿನ ಹಾದಿ ಇಲ್ಲ ಎಂಬುದು ಅವರಿಗೆ ತಿಳಿದಿದೆ. ಈ ಕಾರಣಕ್ಕೆ ಜನರ ಲಾಭ ಪಡೆಯಲು ಹೀಗೆ ಮಾಡುತ್ತಿದ್ದಾರೆ. ಇದರ ಜತೆಗೆ 15 ವರ್ಷದಲ್ಲಿ ಬಿಜೆಪಿ ಜನಪರ ಕೆಲಸಗಳನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡಿದೆ. ಇಲ್ಲಿಯವರೆಗೆ ಬಿಜೆಪಿಗೆ ನಮ್ಮ ಸರ್ಕಾರ ಕೊರತೆಯ ಬಗ್ಗೆ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಇನ್ನು ನವೆಂಬರ್ 1 ರಿಂದ ಪ್ರಾರಂಭವಾಗಲಿರುವ ಭತ್ತ ಖರೀದಿ ಅಭಿಯಾನದ ಮೇಲೆ ಪರಿಣಾಮ ಬೀರುವ ಕ್ರಮವಾಗಿ (ಶುಕ್ರವಾರ) ಅಕ್ಕಿ ಗಿರಣಿಗಾರರ ಮೇಲೆ ಕೇಂದ್ರೀಯ ಸಂಸ್ಥೆ ದಾಳಿ ಮಾಡಿದೆ. ಇದು ಸರ್ಕಾರವನ್ನು ದೋಷಿಸಲು ಮಾಡಿರುವ ಕ್ರಮ ಎಂದು ಹೇಳಿದ್ದಾರೆ. ಬಿಜೆಪಿ ಅಧಿಕಾರ ಹಿಡಿಯಲು ಎಷ್ಟು ಕೀಳುಮಟ್ಟಕ್ಕೆ ಹೋಗಿದೆ ಎಂಬುದು ಇದರಲ್ಲಿ ಗೊತ್ತಾಗುತ್ತದೆ. ಇವರಿಗೆ ರೈತರ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ…………….
ಭಾರತದ ಮಾನವ ಬಾಹ್ಯಾಕಾಶ ಹಾರಾಟ ಪರಿಕ್ಷಾರ್ಥ ಕಾರ್ಯಕ್ರಮ ಅಕ್ಟೊಬರ್ 21 ರಂದು..!




