ಕಾವೇರಿ ವಿಚಾರವಾಗಿ ದೆಹಲಿಗೆ ತೆರಳಿರುವ ಕರವೇ ನಾರಾಯಣಗೌಡರು ಪ್ರಹ್ಲಾದ್ ಜೋಷಿಯವನ್ನು ಭೇಟಿ ಮಾಡಿದರು. ಜೋಷಿಯವರು ಪ್ರಧಾನ ಮಂತ್ರಿಯವರ ಜೊತೆ ನಿಮ್ಮನ್ನ ಭೇಟಿ ಮಾಡಿಸುತ್ತೆನೆ ಎಂಬ ಭರವಸೆ ನೀಡಿದರು.
ಇನ್ನು ಈ ಕುರಿತು ಮಾತನಾಡಲು ಪ್ರಧಾನಿ ಮೋದಿಯವರ ಜೊತೆ ಭೇಟಿ ಮಾಡಿಸುತ್ತೇನೆ ಎಂದಿದ್ದಾರೆ. ಹಾಗಾಗಿ ನಾನು ಇವತ್ತು ದೆಹಲಿಯಲ್ಲೇ ಉಳಿಯುತ್ತೇನೆ. ನಾಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದೇನೆ. ‘ಪ್ರಧಾನಿ ಮೋದಿಯವರು ಕಾವೇರಿ ವಿಚಾರವಾಗಿ ಶಾಶ್ವತ ಪರಿಹಾರ ಕೊಡೋದು ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ, ನಾವೆಲ್ಲ ಮೋದಿ ಪರವಾಗಿ ನಿಲ್ಲುತ್ತೆವೆ. ಪಕ್ಷದ ಪರವಾಗಿ ಅಲ್ಲ, ಮೋದಿ ಪರವಾಗಿ ನಾವು ನಿಲ್ಲುತ್ತೇವೆ ಎಂದರು.
ನನಗೆ ಬಹಳ ಬೇಸರದ ಸಂಗತಿ ಅಂದ್ರೆ, ಮೋದಿಯವರನ್ನ ಸಿದ್ದರಾಮಯ್ಯ ಅವರು ಭೇಟಿ ಮಾಡೋಕೆ ಬಂದಾಗ, ಅವರನ್ನ ಕೇವಲವಾಗಿ ಕಂಡು, ಅವರಿಗೆ ಭೇಟಿ ಮಾಡೋಕೆ ಅವಕಾಶ ಕೊಡದೆ ಇರುವುದು. ಸಿದ್ದರಾಮಯ್ಯ ರಿಗೆ ಮಾಡಿದ ಅವಮಾನ ಅಲ್ಲ, ಅದು ಏಳೂವರೆ ಕೋಟಿ ಜನರಿಗೆ ಮಾಡಿದ ಅವಮಾನ ಎಂದರು. ಮತ್ತೊಂದು ಭಾರತ ಕಟ್ಟುವ ತಾಕತ್ತು ಇರುವುದು ನಮ್ಮ ಕರ್ನಾಟಕಕ್ಕೆ ಮಾತ್ರ, ಕೇವಲ ಉತ್ತರ ಭಾರತ ಮಾತ್ರ ಅಲ್ಲ, ದಕ್ಷಿಣ ಭಾರತವನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು. ನಮ್ ಟ್ಯಾಕ್ಸ್ ನ್ನು ತಂದು ಬಿಹಾರ ಸೇರಿದಂತೆ ಬೇರೆ ರಾಜ್ಯಗಳಿಗೆ ಸುರಿತಾರೆ. ಈ ಎಲ್ಲಾ ಬಗ್ಗೆ ನಾನು ನಾಳೆ ಪ್ರಧಾನಿ ಬಳಿ ಮಾತಾಡುತ್ತೇನೆ ಎಂದರು.
ನವರಾತ್ರಿ ಬನ್ನಿ ಪೂಜೆಗೆ ತೆರಳುವ ಮಹಿಳೆಯರನ್ನು ಟಾರ್ಗೆಟ್ ಮಾಡಿದ ಕಳ್ಳರು..!
ರಾಜ್ಯ ಸರ್ಕಾರಕ್ಕೆ ತಲೆನೋವಾದ ಛಲುವಾದಿ ಮಹಾಸಭಾ ಪ್ರತಿಭಟನೆ: ಬೆಂಗಳೂರು ಚಲೋ..!