Bidar News: ಬೀದರ್: ಬೀದರ್ನಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿರುವ ಅವರು, ಆಪರೇಷನ್ ಕಮಲ ಪ್ರಾರಂಭವಾಗಿದ್ದೆ ಕರ್ನಾಟಕದಲ್ಲಿ. ಆಪರೇಷನ್ ಕಮಲದಲ್ಲಿ ಮೋದಿ, ಶಾ ಅವರು ಪಿಹೆಚ್ಡಿ ಮಾಡಿದ್ದಾರೆ. ಗುಜರಾತ್, ಅಸ್ಸಾಂ, ಗೋವಾ, ಮಹಾರಾಷ್ಟ್ರ, ಕರ್ನಾಟಕ ಎಲ್ಲಾ ಕಡೆಗೂ ಆಪರೇಷನ್ ಕಮಲ ಹೇಗಾಯ್ತು? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನ ಜೈಲಿಗೆವ ಹಾಕಿದ್ದಾಯ್ತು, ಐಟಿ, ಇಡಿ ಎಲ್ಲವೂ ಆಯ್ತು ಇನ್ನೇನು ಮಾಡ್ತಾರೆ. ಐಟಿ, ಇಡಿ ಎಲ್ಲವೂ ಕೇಂದ್ರ ಸರ್ಕಾರದ ಟೂಲ್ಸ್ಗಳು. ಬಿಜೆಪಿಯವ್ರು ಕಾಂಗ್ರೆಸ್ನವರಿಗೆ ತೊಂದರೆಯಂತೂ ಕೊಡುವವರೇ ಎಂದು ಪ್ರಿಯಾಂಕ್ ಹೇಳಿದ್ದಾರೆ.
ಇನ್ನು ಸಿಎಂ ಬದಲಾವಣೆ ಬಗ್ಗೆ ಮಾತನಾಡಿರುವ ಪ್ರಿಯಾಂಕ್, ಯಾವಾಗ ಏನಾಗ್ಬೇಕು? ಅದು ಆಗುತ್ತೆ ಅದನ್ನ ಹೈಕಮಾಂಡ್ ತೀರ್ಮಾನಿಸುತ್ತೆ. ಸಿಎಂ ಬದಲಾವಣೆ ಬಗ್ಗೆ ಬೀದರ್ನಿಂದ ಚಾಮರಾಜನಗರವರೆಗೆ ಕ್ಯಾಮೆರಾ ಮುಂದೆ ಯಾರೇ ಮಾತನಾಡುವುದು ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.




