Bidar News: ಬೈಕ್‌ ಮೇಲೆ ಗಾಂಜಾ ಸಾಗಣೆ: 38 ಕೆಜಿ 950 ಗ್ರಾಂ ಗಾಂಜಾ ಸಂತಪುರ ಪೊಲೀಸರ ವಶಕ್ಕೆ

Bidar News: ಸಂತಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಜಂಬಗಿ ಗ್ರಾಮದ ಬಳಿ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಜಂಬಗಿ ಗ್ರಾಮದ ಶ್ರೀ ದತ್ತ ಮಂದಿರದ ಸಮೀಪ ವಾಹನ ತಪಾಸಣೆ ನಡೆಸಿದ ವೇಳೆ ಬೈಕ್ ಮೇಲೆ ಇಬ್ಬರು ವ್ಯಕ್ತಿಗಳು ಚೀಲಗಳಲ್ಲಿ ಸುಮಾರು 38 ಕೆಜಿ 950 ಗ್ರಾಂ ಗಾಂಜಾ ಸಾಗಿಸುತ್ತಿರುವುದು ಪತ್ತೆಯಾಗಿದೆ. ಮತ್ತು ಪತ್ತೆಯಾದ 38 ಗಾಂಜಾವನ್ನ ಸಂತಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನು ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ 19 ಲಕ್ಷ 47 ಸಾವಿರ 500 ರೂಪಾಯಿ ಎಂದು ತಿಳಿದುಬಂದಿದ್ದು, ಗಾಂಜಾ ಸಾಗಾಟಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 19 ಲಕ್ಷ 77 ಸಾವಿರ 500 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಸಂತಪೂರ ಪೊಲೀಸ್ ಠಾಣೆಯಲ್ಲಿ NDPS ಆಕ್ಟ್ ಅಡಿ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಎಸ್ಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ನಡೆದ ಈ ಭರ್ಜರಿ ಕಾರ್ಯಾಚರಣೆಯಿಂದ ಈಗ ಗಾಂಜಾ ಮಾಫಿಯಾಗೆ ದೊಡ್ಡ ನಡುಕ ಶುರುವಾಗಿದೆ.”

About The Author