Big boss: ಅಶ್ವಿನಿ ಗೌಡ ಮೇಲೆ ಕ್ರಷ್! ಟಿವಿಲಿ ತೋರ್ಸೋದೆಲ್ಲ ನಿಜವಲ್ಲ: RJ Amith Podcast

Big boss: ಆರ್‌ಜೆಯಾಗಿದ್ದ ಅಮಿತ್ ಅವರು ಈ ಬಾರಿ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಅವರು ಪ್ರಥಮ ವಾರವೇ ಮನೆಯಿಂದ ಆಚೆ ಬಂದಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಂಗ್ ಆನ್ಸರ್ ನಲ್ಲಿ ಸಖತ್ ಮಜವಾಗಿ ಉತ್ತರಿಸಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಇದ್ದು, ಮೂರು ಜನ ಬಿಗ್‌ಬಾಸ್ ಮನೆಗೆ ಹೋಗೋದಾದ್ರೆ ನಿಮ್ಮ ಪ್ರಕಾರ ಯಾರು ಹೋಗ್ಬೇಕು ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಅಮಿತ್, ಹುಚ್ಚ ವೆಂಕಟ್, ಲಾಯರ್ ಜಗದೀಶ್, ಪ್ರಥಮ್ ಎಂದಿದ್ದಾರೆ.

ಎರಡನೇಯದಾಗಿ ಬಿಗ್‌ಬಾಸ್ ಸ್ಪರ್ಧಿಗಳನ್ನು ಹಾಕಿ ಸಿನಿಮಾ ಮಾಡಿದ್ರೆ ಯಾವ ಹೆಸರಿಡಬಹುದು ಅಂತಾ ಕೇಳಿದ್ದಕ್ಕೆ ಉತ್ತರಿಸಿದ ಅಮೀತ್, ಯಾರದ್ದೋ ದುಡ್ಡು ಎಲ್ಲಮ್ಮನ್ ಜಾತ್ರೆ, ನಂದೆಲ್ಲಿಡ್ಲಿ..?, ಮಾನವನಿಂದ ಮಂಗ ಅಂತಾ ಹೆಸರಿಡಬಹುದು ಅಂತಾ ಫನ್ನಿಯಾಗಿ ಉತ್ತರಿಸಿದ್ದಾರೆ.

ಇನ್ನು ಬಿಗ್‌ಬಾಸ್‌ನಲ್ಲಿ ನಿಮ್ಮ ಜಂಟಿ ಯಾರಾಗಿದ್ದರು ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅಮೀತ್, ಸ್ಪಂದನಾ ಅಂತಾ ಹೇಳಿದ್ದಾರೆ. ಬಿಗ್‌ಬಾಸ್ 12 ಯಾರು ವಿನ್ ಆಗ್ತಾ ಅಂತಾ ಕೇಳಿದ್ದಕ್ಕೆ, ಸೂರಜ್ ಸಿಂಗ್ ಆಗ್ತಾರೆ ಅಂದ್ರು ಅಮೀತ್.

ಬಿಗ್‌ಬಾಸ್ ಮನೆ ಸೆಟ್ ಶಿಫ್ಟ್ ಮಾಡ್ತಾರೆ ಅಂದ್ರೆ ಯಾವ ಜಾಗದಲ್ಲಿ ಶಿಫ್ಟ್ ಮಾಡಬೇಕು ಅನ್ನೋ ಪ್ರಶ್ನೆಗೆ, ಮೈಸೂರು ಜೂ ಅಂತಾ ಉತ್ತರಿಸಿದ್ದಾರೆ ಅಮೀತ್. ಇಂಥ ಫನ್ನಿ ಪ್ರಶ್ನೆಗಳಿಗೆ ಅಮೀತ್ ಏನೇನು ಉತ್ತರಿಸಿದ್ದಾರೆಂದು ತಿಳಿಯಲು ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author