ಸರ್ಕಾರದಿಂದ ಬಿಗ್ ಗ್ರೀನ್ ಸಿಗ್ನಲ್: 4500 ಪೊಲೀಸ್ ಉದ್ಯೋಗಗಳು!

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಭಾರಿ ಬದಲಾವಣೆಯಾಗಿದೆ. 4500 ಕಾನ್‌ಸ್ಟೆಬಲ್ ನೇಮಕ—ಫೈನಲಿ ಅಪ್ರೂವ್ ಆಗಿದೆ. ಹೌದು ರಾಜ್ಯ ಪೊಲೀಸ್ ಇಲಾಖೆಯಲ್ಲಿ 4,500 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಒಳಮೀಸಲಾತಿ ಜಟಿಲತೆಗಳಿಂದ ಕಾನ್ಸ್ಟೇಬಲ್ ನೇಮಕಾತಿ ಸೇರಿದಂತೆ 75 ಸಾವಿರಕ್ಕೂ ಹೆಚ್ಚು ಹುದ್ದೆಗಳು ತುಂಬದೆ ಬಾಕಿ ಉಳಿದಿದ್ದವು.

ಇದೀಗ ಈ ಸಮಸ್ಯೆ ಪರಿಹಾರ ಹಂತಕ್ಕೆ ಬಂದಿದ್ದು, ಮುಂದಿನ 2ನೇ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಶುಕ್ರವಾರ ಬೆಂಗಳೂರಿನಲ್ಲಿ, ರಾಜ್ಯ ಪೊಲೀಸ್ ಹಾಗೂ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ & ಬಿಸಿನೆಸ್ ಸೆಂಟರ್ ಇಂಡಿಯಾ ವತಿಯಿಂದ ನಗರ ಪೊಲೀಸ್ ಘಟಕಕ್ಕೆ ‘ಹೈಜಿನ್ ಆನ್ ಗೋ’ ವಾಹನಗಳ ಹಸ್ತಾಂತರ ಮತ್ತು ‘ಪ್ರಗತಿಸ್ಥಂಭಗಳು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಭ್ರಷ್ಟಚಾರ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಕರ್ನಾಟಕ ಪೊಲೀಸರು ನಾಗರಿಕರಿಗೆ ನ್ಯಾಯ ಒದಗಿಸುವುದರಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ವಿವಿಧ ಮಾನದಂಡ ಇಟ್ಟುಕೊಂಡು ಇಂಡಿಯಾ ಜಸ್ಟೀಸ್ ರಿಪೋರ್ಟ್ ಸಮೀಕ್ಷಾ ವರದಿ ನೀಡಿದೆ. 10 ಅಂಕಗಳಲ್ಲಿ ಕರ್ನಾಟಕಕ್ಕೆ 6.78 ಅಂಕ ಪಡೆದು ಮೊದಲನೆಯ ಸ್ಥಾನ ಗಳಿಸಿದೆ ಎಂದರು.

ರಾಜ್ಯದಲ್ಲಿ ಸೈಬರ್ ಅಪರಾಧ ನಿಯಂತ್ರಿಸಲು ದೇಶದಲ್ಲಿ ಮೊದಲ ಬಾರಿಗೆ ಸೈಬರ್ ವಿಭಾಗಕ್ಕೆ ಡಿಜಿಪಿ ಜಿಲ್ಲೆಗೊಂದು ನೇಮಿಸಲಾಗಿದೆ. ಸೈಬರ್ ಕೈಂ ಪೊಲೀಸ್ ಠಾಣೆ ಸ್ಥಾಪಿಸಿದ ಬಳಿಕ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. 2022ರಲ್ಲಿ 12,550 ಸೈಬರ್ ಪ್ರಕರಣಗಳು ದಾಖಲಾಗಿವೆ. ಸೈಬರ್ ಕೈಂಗೆ ಪ್ರತ್ಯೇಕ ಪೊಲೀಸ್ ಠಾಣೆಗಳು ಸ್ಥಾಪನೆಯಾದ ಬಳಿಕ 2023ರಲ್ಲಿ 21,903 ಪ್ರಕರಣಗಳು, 2024ರಲ್ಲಿ 21,995 ಪ್ರಕರಣಗಳು ದಾಖಲಾಗಿವೆ.

2025ರ ಇಲ್ಲಿಯವರೆಗೆ 1,300 ಪ್ರಕರಣಗಳು ವರದಿಯಾಗಿವೆ. ಹಾಗಾದ್ರೆ 4500 ಕಾನ್‌ಸ್ಟೆಬಲ್ ನೇಮಕಾತಿ—ಈ ಬಾರಿ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗುತ್ತದೆಯೇ? ಭ್ರಷ್ಟಾಚಾರ ವಿರೋಧಿ ಕ್ರಮಗಳು ಪೊಲೀಸ್ ಇಲಾಖೆ ಇಮೇಜ್ ಬದಲಾಯಿಸುತ್ತಿದೆಯಾ? ಅಥವಾ ಅದು ಕೇವಲ ಹೇಳಿಕೆಗಳ ಮಟ್ಟಕ್ಕೆ ಮಾತ್ರ ಸೀಮಿತ ಆಗಿದ್ಯಾ? ನೀವೇನಂತೀರಿ ಕಾಮೆಂಟ್ ಮಾಡಿ.

ವರದಿ : ಲಾವಣ್ಯ ಅನಿಗೋಳ

About The Author