Monday, December 11, 2023

Latest Posts

ರಾಜ್ಯಪಾಲರ ಬಾಣ.. ಕಂಗಾಲಾದ ಕುಮಾರಣ್ಣ..!

- Advertisement -

ಕರ್ನಾಟಕ ಟಿವಿ : ವಿಶ್ವಾಸ ಮತ ಸಾಬೀತು ಮಾಡ್ತೀನಿ ಅಂತ ಹೇಳಿ ಇಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ನಾನಾ ತಂತ್ರ ರೂಪಿಸಿ ಮತಕ್ಕೆ ಹಾಕದ ಹೈಡ್ರಾಮಾ ಮಾಡ್ತಿದ್ರು. ಸೋಮವಾರದ ವರೆಗೆ ಕಾಲ ದೂಡಿ ಸರ್ಕಾರವನ್ನ ಸೇಫ್ ಮಾಡಿಕೊಳ್ಳಬೇಕು ಅಂತ ಮೊದಲೇ ತಂತ್ರ ರೂಪಿಸಿದಂತೆ ಜೆಡಿಎಸ್-ಕಾಂಗ್ರೆಸ್ ನಾಯಕರು ಸದನದಲ್ಲಿ ಗೇಮ್ ಶುರು ಮಾಡಿದ್ರು.. ಇಂದು ವಿಶ್ವಾಸಮತ ಸಾಬೀತು ಮಾಡದೆ ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರೆ ಅಂತ ಭಾವಿಸಿದ್ದ ಬಿಜೆಪಿ ನಾಯಕರು ಕಂಗಾಲಾಗಿದ್ರು. ತಕ್ಷಣ ಮಧ್ಯಾಹ್ನವೇ ಬಿಜೆಪಿ ನಿಯೋಗ ರಾಜಭವನಕ್ಕೆ ಭೇಟಿ ನೀಡಿ ಇಂದೇ ವಿಶ್ವಾಸ ಮತ ಸಾಬೀತು ಮಾಡುವಂತೆ ಸ್ಪೀಕರ್ ಗೆ ಸೂಚಿಸಿ ಅಂತ ಕೋರಿಕೊಂಡಿತ್ತು.. ರಾಜ್ಯಪಾಲರ ಭೇಟಿಯಾದ ಕೆಲಹೊತ್ತಿಗೆ ರಾಜ್ಯಪಾಲರು ಸ್ಪೀಕರ್ ಗೆ ಪತ್ರ ಬರೆದು ಇಂದೇ ವಿಶ್ವಾಸಮತ ಸಾಬೀತಿಗೆ ಸಲಹೆ ನೀಡಿದ್ರು. ಆದ್ರೆ, ಸ್ಪೀಕರ್ ರಾಜ್ಯಪಾಲರ ಸಲಹೆಯನ್ನ ಪರಿಗಣಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ನಾಯಕರು ಇಂದು ಮಧ್ಯ ರಾತ್ರಿಯಾದರೂ ಪರವಾಗಿಲ್ಲ ಮತಕ್ಕೆ ಹಾಕುವಂತೆ ಬಿಎಸ್ವೈ ಒತ್ತಾಯಿಸಿದ್ರು. ಆದ್ರೆ, ಸ್ಪೀಕರ್ ರಮೇಶ್ ಕುಮಾರ್ ಮಾತ್ರ ದ್ಯಾವುದಕ್ಕೂ ಕ್ಯಾರೆ ಅನ್ನಲಿಲ್ಲ.

ಶುಕ್ರವಾರ ಮಧ್ಯಾಹ್ನ 1.30ರ ಒಳಗೆ ಬಹುಮತ ಸಾಬೀತು ಮಾಡಿ

ಸದನವನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಜ್ಯಪಾಲರು ಸ್ಪೀಕರ್ ಗೆ ಯಾವುದೇ ಸೂಚನೆ ನೀಡಿದ್ರು ಪ್ರಯೋಜನವಾಗದ ಕಾರಣ ತನ್ನಅಧಿಕಾರವನ್ನ ಸಿಎಂ ಕುಮಾರಸ್ವಾಮಿ ಮೇಲೆ ಚಲಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ಸಮ್ಮಿಶ್ರ ಸರ್ಕಾರದ 15 ಶಾಸಕರು ರಾಜೀನಾಮೆ ನೀಡಿದ್ದಾರೆ.. ಇನ್ನೂ ವಿಶ್ವಾಸಮತ ಸಾಬೀತು ಮಾಡಲು ಆಗ್ತಿರುವ ವಿಳಂಬಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30 ರ ಒಳಗೆ ವಿಶ್ವಾಸಮತ ಸಾಬೀತು ಮಾಡುವಂತೆ ಕುಮಾರಸ್ವಾಮಿಗೆ ಆದೇಶ ಕೊಟ್ಟಿದ್ದಾರೆ. ವಿಶ್ವಾಸಮತ ಯಾಚನೆಯಲ್ಲಿ ಮತಕ್ಕೆ ಹಾಕಿಸದೆ ಕಾಲಹರಣ ಮಾಡ್ತಿದ್ದ ದೋಸ್ತಿಗಳಿಗೆ ರಾಜ್ಯಪಾಲ ಆದೇಶ ದೊಡ್ಡ ಶಾಕ್ ನೀಡಿದಂತಾಗಿದೆ..

ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ದೋಸ್ತಿಗಳ ನಿರ್ಧಾರ..!

ಇನ್ನು ರಾಜ್ಯಪಾಲರ ನಿರ್ಧಾರದಿಂದ ಕಂಗಾಲಾದ ಕಾಂಗ್ರೆಸ್, ಜೆಡಿಎಸ್ ನಾಯಕರು ಮಧ್ಯಾಹ್ನದ ಒಳಗೆ ಬಹುಮತ ಸಾಬೀತು ಮಾಡದೆ ಇದ್ದರೆ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಲಿದ್ದಾರೆ. ಹೀಗಾಗಿ ಬೆಳಗ್ಗೆಯೇ ರಾಜ್ಯಪಾಲರ ಆದೇಶಕ್ಕೆ ತಡೆ ತರಲು ಮುಂದಾಗಿದ್ದಾರೆ.. ಆದ್ರೆ, ಸುಪ್ರೀಂ ಕೋರ್ಟ್ ಕಳೆದ ವರ್ಷ ಬಿಎಸ್ವೈಗೆ 7 ದಿನ ಕಾಲವಕಾಶ ಕೊಟ್ಟ ರಾಜ್ಯಪಾಲರ ಆದೇಶದ ವಿರುದ್ಧಅರ್ಜಿ ಸಲ್ಲಿಸಿ 24 ಗಂಟೆಯೊಳಗೆ ಬಹುಮತ ಸಾಬೀತು ಮಾಡುವಂತೆ ಇದೇ ಕಾಂಗ್ರೆಸ್, ಜೆಡಿಎಸ್ ವಾದ ಮಾಡಿ ಗೆದ್ದಿದ್ರು.. ಇದೀಗ ರಾಜ್ಯಪಾಲರ  ಇಂದಿನ ಆದೇಶ ವಿರುದ್ಧ ಮೇಲ್ಮನವಿ ಹೋಗ್ತಿದ್ದಾರೆ. ಆದ್ರೆ ದೋಸ್ತಿಗಳ ಮನವಿಯನ್ನ ಸುಪ್ರೀಂ ಕೋರ್ಟ್ ಪುರಸ್ಕರಿಸೋದು ಡೌಟು ಅಂತ ಹೇಳಲಾಗ್ತಿದೆ.

https://www.youtube.com/watch?v=TSwlrZFoSvY
- Advertisement -

Latest Posts

Don't Miss