Sunday, October 5, 2025

Latest Posts

ಶರವೇಗದ ಚಿನ್ನ ನೋಡಕಷ್ಟೇ ಚೆನ್ನ!

- Advertisement -

ಚಿನ್ನ ಪ್ರಿಯರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ಸಿಕ್ಕಿದೆ. ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದು, ಸಾವಿರ ರೂ.ಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಸೆಪ್ಟೆಂಬರ್‌ 29ರಂದು 24 ಕ್ಯಾರೆಟ್‌ನ 1 ಗ್ರಾಂನ ಚಿನ್ನದ ಬೆಲೆ 11,689 ರೂ. ಇತ್ತು. ಒಂದೇ ದಿನಕ್ಕೆ 142 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, 11,831 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ, ನಿನ್ನೆ 1,16,890 ರೂ. ಇತ್ತು. ರಾತ್ರಿ ಕಳೆದು ಬೆಳಗಾಗುವುದರೊಳಗೆ 1,420 ರೂಪಾಯಿ ಏರಿಕೆಯಾಗಿದೆ. ಆ ಮೂಲಕ 10 ಗ್ರಾಂಗೆ 1 ಲಕ್ಷದ 18 ಸಾವಿರ 310 ರೂ. ಆಗಿದೆ.

ಇನ್ನು, 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ, ನಿನ್ನೆ 10,715 ರೂ. ಇತ್ತು. 130 ರೂ. ಏರಿಕೆಯೊಂದಿಗೆ ಇಂದು 10,845 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 1,07,150 ರೂಪಾಯಿ ಇತ್ತು. ಇಂದು ಬರೋಬ್ಬರಿ 1,300 ರೂಪಾಯಿ ಏರಿಕೆಯೊಂದಿಗೆ, 1,08,450 ರೂ. ಆಗಿದೆ. ಇಷ್ಟು ದಿನ 1, 2, ಅಥವಾ 3 ಡಿಜಿಟ್ನಲ್ಲಿ ಏರಿಕೆಯಾಗ್ತಿತ್ತು. ಆದ್ರೀಗ ಸಾವಿರ ಲೆಕ್ಕದಲ್ಲೇ ಹೆಚ್ಚಳವಾಗ್ತಿದ್ದು, ಆಭರಣ ಪ್ರಿಯರಿಗೆ ಶಾಕ್‌ ಕೊಟ್ಟಿದೆ.

ಡಾಲರ್‌ ಬೆಲೆ ದುರ್ಬಲಗೊಂಡಿದ್ದು, ಚಿನ್ನದ ಬೆಲೆ ಏರಿಕೆಯಾಗಿದೆ. ಈ ವರ್ಷ ಅಮೆರಿಕಾದ ಫೆಡರಲ್‌ ರಿಸರ್ವ್‌ ಬ್ಯಾಂಕ್‌, ಬಡ್ಡಿ ದರಗಳನ್ನು ಮತ್ತಷ್ಟು ಕಡಿಮೆ ಮಾಡಲಿದೆ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ. ಹೀಗಾಗಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಒಟ್ನಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗಲಿದೆಯಂತೆ. ಆದ್ರೆ, ಚಿನ್ನದ ಹೂಡಿಕೆ ಮೇಲೆ ಇನ್ವೆಸ್ಟ್‌ ಮಾಡೋರಿಗೆ ಇದು ಸುವರ್ಣಾವಕಾಶ ಆಗಿದೆ.

- Advertisement -

Latest Posts

Don't Miss