Saturday, June 21, 2025

Latest Posts

‘ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದ ಸಾನ್ಯಾ ಅಯ್ಯರ್

- Advertisement -

ಬಿಗ್ ಬಾಸ್ ಮನೆಯಂಗಳದಲ್ಲಿ ದಿನಕ್ಕೊಂದು ಪ್ರೇಮಕಥೆ ರಿಲೇಶನ್ ಶಿಪ್ ಗಳ ಕುರಿತಾಗಿ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಸೋನು ರಾಕೇಶ್ ಸುದ್ದಿಯಾಗಿದ್ದರು. ಇದೀಗ ಅದೇ ಪ್ರಕಾರವಾಗಿ ಜಶ್ವಂತ್  ಸಾನ್ಯ ಸುದ್ದಿಯಲ್ಲಿದ್ದಾರೆ.

ಜಶ್ವಂತ್ ಹಾಗೂ ಸಾನ್ಯಾ ಬಿಗ್ ಬಾಸ್ ಮನೆಯ ಕಿಚನ್​ನಲ್ಲಿ ಇದ್ದರು. ಈ ಸಂದರ್ಭದಲ್ಲಿ ಒಂದು ಡಬ್ಬಿಯ ಮುಚ್ಚಳ ತೆಗೆಯಲು ಜಶ್ವಂತ್ ಪ್ರಯತ್ನಿಸುತ್ತಿದ್ದರು. ಆದರೆ, ಮುಚ್ಚಳ ತೆಗೆಯಲು ಆಗುತ್ತಿರಲಿಲ್ಲ. ಈ ವೇಳೆ ಚಾಕು ತರುವಂತೆ ಸಾನ್ಯಾ ಬಳಿ ಕೋರಿದರು. ಸಾನ್ಯಾ ಚಾಕು ತರುವ ಮೊದಲೇ ಜಶ್ವಂತ್ ಅವರು ಬಾಕ್ಸ್​​ನ ಮುಚ್ಚಳ ತೆಗೆದಿದ್ದರು.

‘ನಾನು ಚಾಕು ತಂದುಬಿಟ್ಟಿದ್ದೀನಿ. ಏನು ಮಾಡ್ಲಿ ಈಗ? ಚಾಕುವಿನಿಂದ ನಿನಗೆ ಚುಚ್ಚಲೇ’ ಎಂದು ಕೇಳಿದರು ಸಾನ್ಯಾ. ‘ಚಾಕುವಿನಿಂದ ಚುಚ್ಚಿ. ಏನೂ ತೊಂದರೆ ಇಲ್ಲ’ ಎಂದರು ಜಶ್ವಂತ್. ‘ನಾನು ಚಾಕುವಿನಿಂದ ಚುಚ್ಚಲ್ಲ. ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದು ಸಾನ್ಯಾ ನಕ್ಕರು.

ಸಾನ್ಯಾ ಹಾಗೂ ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎಂದು ಕೆಲವರು ಊಹಿಸಿದ್ದರು. ಆದರೆ, ಇದನ್ನು ಸಾನ್ಯಾ ಆಗಲಿ ರೂಪೇಶ್ ಆಗಲಿ ಒಪ್ಪಿಕೊಂಡಿಲ್ಲ. ನಮ್ಮಿಬ್ಬರ ನಡುವೆ ಇರೋದು ಗೆಳೆತನ ಮಾತ್ರ ಎಂದು ಹೇಳಿಕೊಂಡಿದ್ದಾರೆ.

ಅರ್ಜುನ್-ರೂಪೇಶ್ ನಡುವೆ ಬಿಗ್ ಫೈಟ್: ಬಿಗ್ ಬಾಸ್ ಮನೆಯೊಳಗೆ ನಡೆದದ್ದೇನು…!

ಸಾನ್ಯಾ ಅಯ್ಯರ್ ವಾಷ್ ರೂಂ ನಲ್ಲಿ ಕಿರುಚಾಡಿದ್ಯಾಕೆ…! ಯಾರನ್ನು ಕಂಡು ಭಯ ಪಟ್ಟರು ಸಾನ್ಯಾ…!

- Advertisement -

Latest Posts

Don't Miss