Saturday, December 21, 2024

Latest Posts

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರಂತೆ ಸ್ಪೂರ್ತಿ….!

- Advertisement -

Bigboss inside storry:

ಬಿಗ್ ಬಾಸ್ ಮನೆಯಂಗಳದಲ್ಲಿ ಈಗ ಟಫ್ ಟಾಸ್ಕ್ ಗಳು ಶುರುವಾಗಿದೆ.ಇದರ ಜೊತೆ ಮುನಿಸು ಮನಸ್ತಾಪಗಳು ಶುರುವಾಗಿದೆ. ಕೆಲವೊಂದು ಸ್ಪರ್ಧಿಗಳು ಭಯ ಪಡಲು ಶುರು ಮಾಡಿದ್ದಾರೆ.ಈ ಬಾರಿ ಕಳಪೆ ತಮಗೆ ಬರಬಹುದು ಎಂಬ ಭಯ ಸ್ಫೂರ್ತಿ ಅವರನ್ನು ಕಾಡುತ್ತಿದೆ. ಈ ಕಾರಣಕ್ಕೆ ಅವರು ಜಯಶ್ರೀ ಜತೆಗೆ ಈ ವಿಚಾರ ಮಾತನಾಡಿದ್ದಾರೆ. ‘ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಲ್ಲ. ಎಲ್ಲರೂ ನನ್ನನ್ನು ಕಳಪೆ ಎಂದು ಹೇಳಿದರೆ ನಾನು ಜೈಲಿಗೆ ಹೋಗಲ್ಲ’ ಎಂದರು.

‘ಕಳಪೆ ಅನ್ನೋದು ಮನೆಯವರ ನಿರ್ಧಾರ. ಅದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಕಳಪೆ ಎಂದು ಬಂದರೆ ಹೊರಗೆ ಕೂರೋಕೆ ಸಾಧ್ಯವಿಲ್ಲ’ ಎಂಬ ಉತ್ತರ ಜಯಶ್ರೀ ಕಡೆಯಿಂದ ಬಂತು. ಆ ಮಾತನ್ನು ಕೇಳಿ ತುಂಬಾನೇ ಬೇಸರಗೊಂಡರು ಸ್ಫೂರ್ತಿ.

ಇನ್ನು, ಬಿಗ್ ಬಾಸ್ ಮನೆಯಲ್ಲಿ ಸಮಯ ಕಳೆಯೋಕೆ ಸ್ಫೂರ್ತಿ ಬಳಿ ಸಾಧ್ಯವಾಗುತ್ತಿಲ್ಲ. ‘ದಿನ ಕಳೆದಂತೆ ನಾನು ಡೌನ್ ಆಗುತ್ತಿದ್ದೇನೆ ಅನಿಸಿತು. ಹೀಗಾಗಿ, ಮನೆಯಿಂದ ಹೊರ ಹೋಗಬೇಕು ಅನಿಸುತ್ತಿದೆ’ ಎಂದಿದ್ದಾರೆ. ಈ ವಾರ ಅವರು ನಾಮಿನೇಟ್ ಆಗಿದ್ದಾರೆ. ಅವರು ಮನೆಯಿಂದ ಹೊರ ಹೋದರು ಯಾವುದೇ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.

 

ಬಿಗ್ ಬಾಸ್ ಫಟಾಫಟ್ ಸ್ಟೋರಿ:

 

‘ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದ ಸಾನ್ಯಾ ಅಯ್ಯರ್

- Advertisement -

Latest Posts

Don't Miss