Friday, August 29, 2025

Latest Posts

ನಟಿ ಮೋಕ್ಷಿತಾಗೆ ಬಿಗ್‌ಬಾಸ್ ಬಂಪರ್ ಗಿಫ್ಟ್: ಮನೆಯಿಂದ ವೀಡಿಯೋ ಕಾಲ್

- Advertisement -

Bigg Boss Kannada: ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿದ್ದು, ಇದು ಟಾಸ್ಕ್ ವಿಚಾರಕ್ಕಿಂತ, ಜಗಳ, ರಂಪಾಟದ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದೆ. ಇನ್ನು ಸ್ಪರ್ಧಿಗಳು ಮನೆಗೆ ಬಂದು ಹಲವು ದಿನಗಳು ಕಳೆದಿದ್ದು, ಮನೆಯವರನ್ನೆಲ್ಲ ತುಂಬ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಕೆಲ ಟಾಸ್ಕ್ ಕೊಟ್ಟು, ಗೆದ್ದವರಿಗೆ ಮನೆಯವರ ಪತ್ರ ಪಡೆಯುವ, ಮನೆಯವರೊಂದಿಗೆ ಮಾತನಾಡುವ, ಮನೆಯವರನ್ನು ನೋಡುವ ಅವಕಾಶ ಮಾಡಿಕೊಡುತ್ತಿದ್ದಾರೆ.

ಇದೀಗ ದೀಪಾವಳಿ ಬಂದಿದ್ದು, ಕೆಲವು ಟಾಸ್ಕ್ ಪೂರ್ಣಗೊಳಿಸಿದರೆ, ಬಿಗ್‌ಬಾಸ್ ಅವರಿಗೆ ಕೆಲವು ಸರ್ಪೈಸ್ ಉಡುಗೊರೆ ನೀಡುತ್ತಾರೆ. ಅದೇ ರೀತಿ ನಟಿ ಮೋಕ್ಷಿತಾ ಪೈಗೂ ಕೂಡ ಬಿಗ್‌ಬಾಸ್ ಸರ್ಪೈಸ್ ಗಿಫ್ಟ್ ನೀಡಿದ್ದು, ಮೋಕ್ಷಿತಾ ಕುಟುಂಬಸ್ಥರು ವೀಡಿಯೋ ಕಾಲ್ ಮಾಡಿದ್ದಾರೆ. ಈ ವೀಡಿಯೋ ಕಾಲ್‌ನಲ್ಲಿ ಮೋಕ್ಷಿತಾ ತನ್ನ ತಂದೆ ತಾಯಿ ತಮ್ಮನೊಂದಿಗೆ ಮಾತನಾಡಿದ್ದಾರೆ.

ಕುಟುಂಬಸ್ಥರೊಂದಿಗೆ ಮಾತನಾಡುವ ವೇಳೆ ಮೋಕ್ಷಿತಾ ಎಮೋಷನಲ್ ಆಗಿದ್ದು, ಕಣ್ಣೀರು ಹಾಕಿದ್ದಾರೆ. ಅಲ್ಲದೇ, ಮನೆಯವರೊಂದಿಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ಸಖತ್ ಖುಷಿಯಾಗಿದ್ದು, ಬಿಗ್‌ಬಾಸ್‌ಗೆ ಧನ್ಯವಾಾದ ಸಲ್ಲಿಸಿದ್ದಾರೆ.

ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಆಟ ಆಡುತ್ತಿದ್ದ ಮೋಕ್ಷಿತಾ, ತ್ರಿವಿಕ್ರಮ್ ವಿಷಯವಾಗಿ ವೈಲೆಂಟ್ ಆಗಿದ್ದಾರೆ. ತ್ರಿವಿಕ್ರಮ್‌ ಉಗ್ರಂ ಮಂಜು ಬಳಿ, ಇವರೆಲ್ಲ 10 ವಾರಕ್ಕೆ ಹೋಗುವವರು, ನೀವು ಇವರೊಂದಿಗೆ ಸೇರಬೇಡಿ ಎಂದಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ, ತ್ರಿವಿಕ್ರಮ್ ಜೊತೆ ಜಗಳವಾಾಡಿರುವ ಮೋಕ್ಷಿತಾ, ಇನ್ಮುಂದೆ ನನ್ನ ಆಟ ಶುರು, ಯಾವ 10 ವಾರ ಇರ್ತಾರೆ, ಯಾರು ಫಿನಾಲೆಗೆ ಹೋಗ್ತಾರೆ ನೋಡೋಣವೆಂದು ಚಾಲೆಂಜ್ ಹಾಾಕಿದ್ದಾರೆ.

- Advertisement -

Latest Posts

Don't Miss