Sunday, September 8, 2024

Latest Posts

ಹುಡುಗರು ತುಂಬಾ ಒಳ್ಳೆವ್ರು, ಟೈಂ ಬೇಕು ಒಂಚೂರು: ಆಲ್ಬಂ ಸಾಂಗ್ ನಲ್ಲಿ ಕುಣಿದು ಕುಪ್ಪಳಿಸಿ ಬಿಗ್ ಬಾಸ್ ಚೈತ್ರಾ ಕೋಟೂರು..!

- Advertisement -

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಮೂಲತಃ ರಂಗಭೂಮಿ ಪ್ರತಿಭೆ. ಬರವಣಿಯನ್ನು ಪ್ರೀತಿಸುವ ಚೈತ್ರಾ ‘ಸೂಜಿದಾರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಬಿಗ್ ಬಾಸ್ ಮೂಲಕ ಕರುನಾಡಿಗೆ ಚಿರಪರಿಚಿತರಾದರು ಈ ಕೋಲಾರದ ಹುಡ್ಗಿ. ಆ ನಂತರ ಕಿರುತೆರೆ ಲೋಕಕ್ಕೂ ಎಂಟ್ರಿ ಕೊಟ್ಟು ಅಲ್ಲಿಯೂ ಸೈ ಎನಿಸಿಕೊಂಡರು. ಇದೀಗ ಈ ಚೈತ್ರಾ ಹುಡುಗರು ತುಂಬಾ ಒಳ್ಳೆವ್ರು, ಟೈಂ ಬೇಕು ಒಂಚೂರು ಅಂತಾ ಹೊಸ ವರಸೆ ಶುರು ಮಾಡಿದ್ದಾರೆ.

ಅಷ್ಟಕ್ಕೂ ಚೈತ್ರಾ ಹೀಗೆ ಹೇಳ್ತೀರೋದು ಯಾಕೆ ಗೊತ್ತಾ..? ಇದು ಅವರ ರ್ಯಾಪ್ ಸಾಂಗ್. ಬರವಣಿಗೆ, ನಟನೆಯಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕೋಟೂರು ತಾವೇ ಸಾಹಿತ್ಯ ಬರೆದು, ಮ್ಯೂಸಿಕ್ ಕಂಪೋಸ್, ನಿರ್ಮಾಣ ಮಾಡಿ, ಹಾಡಿರುವ ಹುಡುಗರು ತುಂಬಾ ಒಳ್ಳೆವ್ರು ರ್ಯಾಪ್ ಸಾಂಗ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.

 ಹುಡುಗರನ್ನು ಹಾಡಿ ಹೊಗಳಿರುವ ಈ ಸಾಂಗ್ ಗೆ ಸೂಪರ್ ರೆಸ್ಪಾನ್ಸ್ ಸಿಕ್ತಿದ್ದು, ಹಾಡಿನಲ್ಲಿ ಚೈತ್ರಾ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

- Advertisement -

Latest Posts

Don't Miss