ಎಲ್ಲರೂ ಕುತೂಹಲದಿಂದ ಕಾಯ್ತಾ ಇರುವಂತಹ ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನೇನು ಶುರುವಾಗಲಿದೆ. ಬಿಗ್ ಬಾಸ್ ಪ್ರಾರಂಭವಾಗುವ ಮೊದಲೇ, ಕಲರ್ಸ್ ಕನ್ನಡ ಮೂವರು ಸ್ಪರ್ಧಿಗಳ ಹೆಸರುಗಳನ್ನು ಅಧಿಕೃತವಾಗಿ ಅನಾವರಣ ಮಾಡಿದೆ. ಈ ಬಾರಿ ಸ್ಪರ್ಧಿಗಳಲ್ಲಿ ಕಾಕ್ರೋಚ್ ಸುಧಿ, ಮಾತಿನ ಮಲ್ಲಿ ಮಲ್ಲಮ್ಮ ಮತ್ತು ನಟಿ ಮಂಜು ಭಾಷಿಣಿ ಸೇರಿದಂತೆ ಮೂವರು ಬಿಗ್ ಬಾಸ್ ಮನೆಯ ಪ್ರವೇಶ ನೀಡಲಿದ್ದಾರೆ.
ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ನೀಡಿದವರು ಕಾಕ್ರೋಚ್ ಸುಧಿ. ಬಿಗ್ ಬಾಸ್ 12 ಪ್ರೋಮೋ ಕಲರ್ಸ್ ಕನ್ನಡದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬಿಡುಗಡೆಯಾಗಿದೆ. ಸೆಪ್ಟೆಂಬರ್ 28ರಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ.
ಹಾಗಾದ್ರೆ ಯಾರು ಈ ಕಾಕ್ರೋಚ್ ಸುಧಿ? ಇವರ ಹಿನ್ನಲೆ ಏನು ಗೊತ್ತಾ? ಗೊತ್ತಿಲ್ಲಾ ಅಂದ್ರೆ ಬನ್ನಿ ಅವರ ಬಗ್ಗೆ ಕಂಪ್ಲೇಟ್ ಮಾಹಿತಿ ನೋಡ್ತಾ ಹೋಗೋಣ. ಯೆಸ್ ಕಾಕ್ರೋಚ್ ಸುಧಿ ಬೇರೆ ಯಾರೂ ಅಲ್ಲ. ಸ್ಯಾಂಡಲ್‌ವುಡ್ ನಟ. ಇವರ ಹೆಸರು ಸುಧೀರ್ ಬಾಲರಾಜ್. ನಟ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಸಿನಿಮಾದಲ್ಲಿ ಅವರು ನಟಿಸಿದ ‘ಕಾಕ್ರೋಚ್’ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ‘ಕಾಕ್ರೋಚ್’ ಅನ್ನೋ ಈ ಹೆಸರು ಇವರಿಗೆ ಇದೇ ಚಿತ್ರದ ಮೂಲಕ ಬಂದಿದ್ದು. ಹಾಗಾಗಿ ಕಾಕ್ರೋಚ್ ಸುಧಿ ಅಂತಾನೆ ಫೇಮಸ್ ಆಗಿದ್ದಾರೆ.
ಸದ್ಯ ಅವರು ‘ಚೈಲ್ಲು’ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಇದು ಅವರು ನಾಯಕನಾಗಿ ನಟಿಸುತ್ತಿರುವಂತಹ ಮೂರನೇ ಚಿತ್ರವಾಗಿದೆ. ಸದ್ಯಕ್ಕೆ ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಧೀರ್ ಬಾಲರಾಜ್, ವಿಶೇಷವಾಗಿ ಖಳನಾಯಕನ ಪಾತ್ರಗಳಿಗಾಗಿ ಹೆಚ್ಚು ಪರಿಚಿತರಾಗಿದ್ದಾರೆ.
ಕಾಕ್ರೋಚ್ ಸುಧಿ ಖಡಕ್ ಡೈಲಾಗ್, ವಿಲನ್ ರೋಲ್‌ಗಳು, ಕಾಮಿಕ್ ಟೈಮಿಂಗ್ ಮತ್ತು ಪ್ರಬಲ ಎನರ್ಜಿ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿದ್ದಾರೆ. ‘ಅಲೆಮಾರಿ’ ಸಿನೆಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು, ಟಗರು ಚಿತ್ರದ ಮೂಲಕ ಫೇಮಸ್ ಆಗಿದ್ದಾರೆ. ಸಲಗ, ಭೀಮ ಮುಂತಾದ ಪ್ರಮುಖ ಸಿನಿಮಾಗಳಲ್ಲೂ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದಾರೆ.
ನಾನು ತುಂಬಾ ವೈಲೆಂಟು, ತುಂಬಾ ಆ್ಯರೋಗೆಂಟ್ ಅಂತಾನೆ ಬಿಗ್ಬಾಸ್ಗೆ ಎಂಟ್ರಿ ನೀಡಿರುವ ಇವರು ವೀಕ್ಷಕರ ಕ್ಯೂರಿಯಾಸಿಟಿಯನ್ನ ಹೆಚ್ಚಿಸಿದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಪ್ರೇಕ್ಷಕರು ಈಗಾಗಲೇ ಅವರ ಬಿಗ್ ಬಾಸ್ ಪ್ರವೇಶಕ್ಕೆ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ