ಕನ್ನಡದ ಬಿಗ್ ರಿಯಾಟಿ ಶೋ ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಯಾವಾಗ ಶುರುವಾಗುತ್ತೋ ಅಂತ ವೀಕ್ಷಕರು, ಅಭಿಮಾನಿಗಳು ಕಾದು ಕುಳಿತಿರೋದು ಸತ್ಯ. ‘ಬಿಗ್ ಬಾಸ್ ಕನ್ನಡ 12’ ಪ್ರೀಮಿಯರ್ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಆದರೆ, ಸೆಪ್ಟೆಂಬರ್ ತಿಂಗಳಲ್ಲಿ ಹೊಸ ಬಿಗ್ ಬಾಸ್ ಕನ್ನಡ ಸೀಸನ್ ಶುರುವಾಗುವುದು ಖಚಿತ ಅಂತ ಹೇಳಲಾಗುತ್ತಿದೆ. ಈ ಮಧ್ಯೆ ‘ಬಿಗ್ ಬಾಸ್’ ಫ್ಯಾನ್ಸ್‌ಗೆ ಇಂದು ಬಿಗ್ ಅಪ್‌ಡೇಟ್ ಕೊಟ್ಟಿದೆ.
ಅದೇನಪ್ಪಾ ಅಂದ್ರೆ… ಇಂದು ಆಗಸ್ಟ್ 15. ಸ್ವಾತಂತ್ರ್ಯ ದಿನಾಚರಣೆ. 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಗ್ ಬಾಸ್ ಅಭಿಮಾನಿಗಳಿಗೆ ಅತೀ ದೊಡ್ಡ ಸರ್‌ಪ್ರೈಸ್ ನೀಡಲು ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್ ಮಿಡಿಯಾದಲ್ಲಿ ಬಿಗ್‌ಬಾಸ್ 12ರ ಲೋಗೋ ಲಾಂಚ್ ಮಾಡಿದ್ದೆ. ಅಷ್ಟೆ ಅಲ್ಲದೆ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಬಿಗ್ ಬಾಸ್ ಕನ್ನಡ 12’ ಶೋದ ಕಣ್ಣಿನ ಲೋಗೋ ಬಿಡುಗಡೆಯಾಗಿ ರಾರಾಜಿಸುತ್ತಿದೆ.
ಇವತ್ತು ಲೋಗೋ ಲಾಂಚ್ ಆಗಿದ್ದು, ಈ ಬಾರಿಯ ಲೋಗೋ ಡಿಫೆರೆಂಟ್ ಆಗಿದೆ. ಕಣ್ಣಿನ ಸುತ್ತಾ ಗೋಲ್ಡ್ ಜೊತೆ ಡೈಮೆಂಡ್‌ಗಳನ್ನು ಹಾಕಲಾಗಿದೆ. ಇದರಿಂದ ಈ ಬಾರಿ ಬಿಗ್ ಬಾಸ್ ದೊಡ್ಡದಾಗಿ, ರಿಚ್ ಆಗಿ ಬರಲಿದೆ ಎಂಬಂತೆ ಅನಿಸುತ್ತಿದೆ. ಇನ್ನು ಲೋಗೋವನ್ನು ನೋಡಿದ ಜನರು ಮೆಚ್ಚಿಕೊಂಡಿದ್ದಾರೆ ಮತ್ತು ಅದರ ಬಗ್ಗೆ ಕಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ.
ಈಗಾಗಲೇ ಲೋಗೋ ಲಾಂಚ್ ಆಗಿರುವುದರಿಂದ , ಬಿಗ್ ಬಾಸ್ 12 ಪ್ರಾರಂಭವಾಗುವ ಡೇಟ್ ಕೂಡ ಯಾವಗ ಅನೌನ್ಸ್ ಆಗುತ್ತೆ ಅಂತ ಕಾದುನೋಡಬೇಕಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




