Bigg Boss Kannada: ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಕಳೆದ ವಾರ ಆಚೆ ಬಂದ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಯಾಕೆ ಇಷ್ಟು ಬೇಗ ಆಚೆ ಬಂದರು ಅನ್ನೋ ಬಗ್ಗೆ ಹೇಳಿದ್ದಾರೆ.
ಜಾನ್ವಿ ಶಾಕಿಂಗ್ ಎಲಿಮಿನೇಷನ್ ಬಗ್ಗೆ ಮಾತನಾಡಿದ್ದು, ನಾನು ಬಿಗ್‌ಬಾಸ್‌ಗೆ ಹೋದಾಗ ಅಲ್ಲಿನ ಸಿಬ್ಬಂದಿ ಬಳಿ ಯಾಕೆ ಎಕ್ಸ್‌ಪೆಕ್ಟ್ ಅನ್‌ಎಕ್ಸಪೆಕ್ಟೆಡ್ ಅನ್ನೋ ಕಾನ್ಸೆಪ್ಟ್ ಇಟ್ಟಿದ್ದೀರಾ ಅಂತಾ ಕೇಳಿದ್ದರಂತೆ. ಆಗ ಅವರು ಉತ್ತರಿಸಿರಲಿಲ್ಲ. ಆದರೆ ಈಗ ಅವರು ನನ್ನನ್ನು ಸಡನ್ ಆಗಿ ಆಚೆ ಕಳಿಸುವ ಮೂಲಕ ಉತ್ತರಿಸಿದ್ದಾರೆಂದು ಹೇಳಿದ್ದಾರೆ ಜಾನ್ವಿ.
ಅಲ್ಲದೇ ನಾನು ನನ್ನ ಪ್ರಯತ್ನ ಮಾಡಿದ್ದೇನೆ. ಟಾಸ್ಕ್ ಚೆನ್ನಾಗಿ ಆಡಲು ಪ್ರಯತ್ನಿಸಿದ್ದೇನೆ. ಆದರೂ ಯಾಕೆ ಆಚೆ ಬಂದೆ ಅನ್ನೋದು ನನಗೂ ತಿಳಿದಿಲ್ಲ ಎಂದಿದ್ದಾರೆ ಜಾನ್ವಿ. ಅಲ್ಲದೇ ಅದೇ ವಾರ ರಜತ್ ಮತ್ತು ಚೈತ್ರ ಬಂಂದಿದ್ದನ್ನು ನೋಡಿ, ಏನೋ ಪ್ಲಾನ್ ಮಾಡಿಯೇ ಅವರು ಬಂದಿದ್ದಾರೆಂದು ನನಗನ್ನಿಸಿತು. ಹಾಗಾಗಿ ನಾನು ಹೋಗುತ್ತೇನೋ, ಇರುತ್ತೇನೋ ಎನ್ನುವ ಯಾವ ಅಂದಾಜು ನನಗಿರಲಿಲ್ಲ ಅಂತಾರೆ ಜಾನ್ವಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

