Bigg Boss Kannada Season 12: ಬಿಗ್ ಬಾಸ್ ಪಾಠ ಅಲ್ಲ! | Jhanvi R

Bigg Boss Kannada Season 12: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ, ಸಂದರ್ಶನದಲ್ಲಿ ಮಾತನಾಡಿದ್ದು, ಬಿಗ್‌ಬಾಸ್ ಅಂದ್ರೆ ಏನು ಅಂತಾ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಾನ್ವಿ, ಬಿಗ್‌ಬಾಸ್ ಅಂದ್ರೆ ಬರೀ ಆಟ ಅಲ್ಲ, ಜೀವನ ಪಾಠ ಅಂತಾ ಕೆಲವರು ಹೇಳ್ತಾರೆ. ಆದರೆ ನಾನು ಹಾಗೇ ಹೇಳುವುದಿಲ್ಲ. ಬಿಗ್‌ಬಾಸ್ ಅಂದ್ರೆ ಸುಂದರವಾದ ಮತ್ತು ಬೇರೆಯದ್ದೇ ಆದ ಪ್ರಂಪಚ. ಅಲ್ಲಿ ಹೋದವರಿಗೆ ಸುಂದರ ಅನುಭವಗಳಾಗೋದು ಸತ್ಯ. ನಾವು ಸಾಯುವವರೆಗೂ ಇಂಥದ್ದ“ಂದು ಎಕ್ಸ್‌ಪಿರಿಯನ್ಸ್ ನಮಗೆ ಸಿಗಲು ಸಾಧ್ಯವಿಲ್ಲ ಅಂತಾರೆ ಜಾನ್ವಿ.

ಅಲ್ಲದೇ ನಾವು ಆಚೆ ಇದ್ದಾಗ ಸೆಲ್ ಫೋನ್ ಇಲ್ಲದೇ, ಜೀವನವೇ ಇಲ್ಲ ಅನ್ನುವಷ್ಟು ಅಡಿಕ್ಟ್ ಆಗಿರ್ತೀವಿ. ಆದರೆ ಬಿಗ್‌ಬಾಸ್ ಮನೆಯಲ್ಲಿ ಬರೀ ಸೆಲ್‌ಫೋನ್ ಮಾತ್ರವಲ್ಲ. ಬೇರೆ ಏನೂ ನೆನಪಿಗೆ ಬರುತ್ತಿರಲಿಲ್ಲ. ಆಟದಲ್ಲಿ ನಾವು ಅಷ್ಟು ಮಗ್ನರಾಗಿರುತ್ತೇವೆ ಅಂತಾರೆ ಜಾನ್ವಿ.

ಅಲ್ಲಿ ಕೆಲವರದ್ದು ಕೆಲವು ರೀತಿಯ ವ್ಯಕ್ತಿತ್ವ. ಕೆಲವರು ರೂಡ್ ಆಗಿ ಮಾತನಾಡುತ್ತಾರೆ. ಕೆಲವರು ಮನಸ್ಸಿನಲ್ಲೇ ಉಪಾಯ ಮಾಡುತ್ತಾರೆ. ಆದರೆ ಯಾವುದಕ್ಕೂ ನಾವು ಕುಗ್ಗಬಾರದು. ಮತ್ತು ನಾವು ತಪ್ಪು ಮಾಡಬಾರದು ಅನ್ನೋ ಮನಸ್ಥಿತಿ ನಮ್ಮಲ್ಲಿರಬೇಕು. ಶಕ್ತಿ-ಯುಕ್ತಿ ಇರಬೇಕು ಅಂತಾರೆ ಜಾನ್ವಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author