Thursday, August 7, 2025

Latest Posts

ಡೆವಿಲ್‌ ಆದ ಬಿಗ್‌ಬಾಸ್‌ ಸಿಂಹಿಣಿ! : ಹಾರರ್‌ ಸ್ಟೋರಿಯಲ್ಲಿ ಸಂಗೀತಾ !

- Advertisement -

ಇಷ್ಟು ದಿನ ಸೈಲೆಂಟ್‌ ಆಗಿದ್ದ ಚಾರ್ಲಿ 777 ಸಿನಿಮಾದ ಬೆಡಗಿ ಮತ್ತ ಬಿಗ್ ಬಾಸ್‌ 10ರ ಖ್ಯಾತಿಯ ಸಿಂಹಿಣಿ ಸಂಗೀತ ಶೃಂಗೇರಿ ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಈವರೆಗೂ ಹೊಸತನವಿಲ್ಲದ ಸಿನಿಮಾಗಳಿಗೆ ನೋ ಎನ್ನುತ್ತಿದ್ದ ಸಂಗೀತಾ ಈಗ ಹೊಸ ಸಿನಿಮಾ ಒಂದಕ್ಕೆ ಯೆಸ್‌ ಎಂದಿದ್ದಾರೆ. ಇದೇ ಮೊದಲ ಬಾರಿಗೆ ಹಾರರ್‌ ಸಿನಿಮಾಗೆ ನಾಯಕಿಯಾಗಿದ್ದಾರೆ.

ಭಯ ಬೀಳಿಸುವ ಈ ಸಿನಿಮಾದಲ್ಲಿ ಮುದ್ದಾದ ಹಾರರ್‌ ಕಥೆಯಿದ್ದು, ಸಂಗೀತಾ ಶೃಂಗೇರಿ ಇದರಲ್ಲಿ ಆಪ್ತಮಿತ್ರ ಚಿತ್ರದಲ್ಲಿದ್ದ ನಟಿ ಸೌಂದರ್ಯ ಪಾತ್ರಕ್ಕೆ ಹೋಲಿಸಬಹುದಾದ ಪಾತ್ರವಿದೆಯಂತೆ. ತಮಿಳು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಶೂಟಿಂಗ್‌ ಆಗುತ್ತಿರುವ ಇದರ ಚಿತ್ರೀಕರಣ ಸದ್ದಿಲ್ಲದೆ ಶುರುವಾಗಿದೆ. ಈ ಸಿನಿಮಾಗೆ ಸಂಗೀತಾ ಓಕೆ ಎಂದ ಮರುದಿನವೇ ರಿಹರ್ಸಲ್‌ ನಡೆಸಿ ಎರಡೇ ದಿನಗಳಲ್ಲಿ ಹಾಡೊಂದರ ಶೂಟಿಂಗ್‌ ಮುಗಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಗೀತಾ ಶೃಂಗೇರಿ, ಮೊದಲ ಬಾರಿಗೆ ಲವರ್‌ ಗ‌ರ್ಲ್‌ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದರ ನಿರ್ಮಾಪಕರು ಪಾತ್ರಕ್ಕೆ ಅಪ್ರೋಚ್‌ ಮಾಡಿದ ವಿಧಾನ ಇಷ್ಟವಾಗಿ ಓಕೆ ಹೇಳಿದೆ. ಬಜೆಟ್‌ ಕೇಳಿದ ತಕ್ಷಣ ಬೇರೆ ಹಿರೋಯಿನ್‌ ಹುಡುಕುವ ಸಿನಿಮಾ ತಂಡಗಳ ನಡುವೆ ನಾನೇ ನಟಿಸಬೇಕೆಂದು ಬಂದ ತಂಡವಿದು. ಕನ್ನಡ ಹಾಗೂ ತಮಿಳಿನಲ್ಲಿ ನಾನೇ ನಾಯಕಿ. ಆದರೆ ಕನ್ನಡದಲ್ಲಿ ಗಂಟುಮೂಟೆ ಖ್ಯಾತಿಯ ನಿಶ್ಚಿತ್‌ ನನಗೆ ಜೋಡಿಯಾಗಿದ್ದರೆ, ತಮಿಳಿನಲ್ಲಿ ಖ್ಯಾತ ಹಾಸ್ಯ ನಟ ನಾಗೇಶ್‌ ಮೊಮ್ಮಗ ಗಜೇಶ್‌ ಹೀರೋ ಆಗಿದ್ದಾರೆ. ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ನಟಿಸುವುದೇ ನನಗಿರುವ ಚಾಲೆಂಜ್‌. ಚಿಕ್ಕಮಗಳೂರಿನಲ್ಲಿ ಇದರ ಶೂಟಿಂಗ್‌ ನಡೆಯುತ್ತಿದೆ ಎಂದಿದ್ದಾರೆ.

ಈ ಥರದ ಹಾರರ್‌ ಸಿನಿಮಾ ಇತ್ತೀಚೆಗೆ ಬಂದಿಲ್ಲ. ಇದು ಹಾರರ್‌ ಆದರೂ ನನ್ನನ್ನು ವಿಕಾರವಾಗಿ ತೋರಿಸಲ್ಲ. ಅದೇ ಇದರ ವಿಶೇಷತೆ. ಭಯ ಮೂಡಿಸುವ ಸಿನಿಮಾದಲ್ಲೂ ನನ್ನನ್ನು ಮುದ್ದಾಗಿ ತೋರಿಸಲಿದ್ದಾರೆ. ಈ ಸಿನಿಮಾಗೆ ಒಟ್ಟು 45 ದಿನಗಳ ಶೂಟಿಂಗ್‌ ನಡೆಯಲಿದೆ. ‘ರಂಗನಾಯಕಿ’, ‘ಎಟಿಎಂ’ ಸಿನಿಮಾ ಮಾಡಿರುವ ನಾರಾಯಣ್‌ ಈ ಚಿತ್ರ ಮಾಡುತ್ತಿದ್ದು, ಜಗನ್‌ ಅಲೋಶಿಯಸ್‌ ನಿರ್ದೇಶನ ಮಾಡುತ್ತಿದ್ದಾರೆ. ವರ್ಷಾಂತ್ಯಕ್ಕೆ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ ಸಂಗೀತಾ ಶೃಂಗೇರಿ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss