BIGG BOSS SCRIPTED? D BOSS ಬಾಕ್ಸ್ ಆಫೀಸ್ ಸುಲ್ತಾನ್: Vishwa Comedy Actor Podcast

Sandalwood: ಭಾರತದ ಪ್ರಸಿದ್ಧ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ಬಾಸ್. ಇನ್ನು ಕೆಲ ದಿನಗಳಲ್ಲೇ ಕನ್ನಡದಲ್ಲೂ ಬಿಗ್‌ಬಾಸ್ ಶುರುವಾಗುತ್ತಿದೆ. ಅಂಥದ್ರಲ್ಲಿ ಹಾಸ್ಯನಟ ತರಂಗ ವಿಶ್ವ ಬಿಗ್‌ಬಾಸ್ ಬಗ್ಗೆ ಮಾತನಾಡಿದ್ದಾರೆ. ಬಿಗ್‌ಬಾಸ್ ಸ್ಕ್ರಿಪ್ಟೆಡ್ ಅಥವಾ ಸತ್ಯನಾ ಅಂತಾ ಉತ್ತರಿಸಿದ್ದಾರೆ.

ಬಿಗ್‌ಬಾಸ್ ಬಗ್ಗೆ ಮಾತನಾಡಿರುವ ವಿಶ್ವ, ಅಲ್ಲಿ ಸ್ಪರ್ಧೆಗೆ ಬಂದವರು ಇರುವ ರೀತಿ ಸ್ಕ್ರಿಪ್ಟ್ ಅಲ್ಲಾ. ಆದರೆ ಎಡಿಟಿಂಗ್ ಸ್ಕ್ರಿಪ್ಟ್. ಅದರಲ್ಲಿ ನಿಮ್ಮನ್ನು ಹೇಗೆ ಬೇಕಾದ್ರೂ ತೋರಿಸಬಹುದು. ಹಾಗಾಗಿ ಬಿಗ್‌ಬಾಸ್ ಸ್ಕ್ರಿಪ್ಟೆಡ್ ಅಲ್ಲಾ, ಎಡಿಟಿಂಗ್ ಅಷ್ಟೇ ಸ್ಕ್ರಿಪ್ಟ್ ಎನ್ನಬಹುದು ಅಂತಾರೆ ವಿಶ್ವ.

ನಾನು ಬಿಗ್‌ಬಾಸ್‌ಗೆ ಹೋದಾಗ ಅಲ್ಲಿ ತುಂಬ ಮತನಾಡಿದ್ದೆ. ಆದರೆ ಅದರಲ್ಲಿ ಹಲವನ್ನು ಟಿವಿಯಲ್ಲಿ ತೋರಿಸಿರಲಿಲ್ಲ. ಎಡಿಟ್ ಮಾಡುವಾಗ ಕಟ್ ಮಾಡಿರುತ್ತಾರೆ ಎಂದು ವಿಶ್ವ ಹೇಳಿದ್ದಾರೆ.

ಇನ್ನು ಮೀಟೂ ಪ್ರಕರಣದ ಬಗ್ಗೆ ಮಾತನಾಡಿರುವ ವಿಶ್ವ. ನಾನು ನಟಿಸಿರುವ ಸಿನಿಮಾದಲ್ಲಿ ಅಂಥದ್ದೇನು ಇರಲಿಲ್ಲ. ಹಾಗಾಗಿ ನಾನು ನೋಡದ ವಿಷಯವನ್ನು ನಾನು ಮಾತನಾಡುವುದಿಲ್ಲ. ಸುಮ್ಮ ಸುಮ್ಮನೆ ಆರೋಪ ಮಾಡುವುದಿಲ್ಲವೆಂದು ವಿಶ್ವ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author