Bigg Boss Kannada: ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಮತ್ತು ಅಶ್ವಿನಿ ಗೆಳೆತನದ ಬಗ್ಗೆ ಮತ್ತು ರಾಶಿಕಾ ಬಗ್ಗೆ ಮಾತನಾಡಿದ್ದಾರೆ.
ಅಶ್ವಿನಿ ಮತ್ತು ನನ್ನ ಸ್ನೇಹದಿಂದಲೇ ನಾನು ಆಚೆ ಬಂದೆ ಅನ್ನೋದನ್ನು ನಾನು ನಂಬೋದಿಲ್ಲ. ಏಕೆಂದರೆ ನಮ್ಮ ಬಗ್ಗೆ ಹಲವು ಹಾಡುಗಳು, ಮೆಮೆಸ್ ಎಲ್ಲವೂ ಟ್ರೋಲ್ ಆಗಿ, ಫೇಮಸ್ ಆಗಿದೆ. ಜನರಿಗೆ ನಮ್ಮ ಸ್ನೇಹ ಇಷ್ಟವಾಗಿದ್ದಕ್ಕೆ ನಾವು ಫೇಮಸ್ ಆಗಿದ್ದೇವೆ ಅನ್ನೋದು ನನ್ನ ಅನಿಸಿಕೆ ಎಂದಿದ್ದಾರೆ ಜಾನ್ವಿ.
ಇನ್ನು ಜಾನ್ವಿ ಆಚೆ ಬಂದ ಬಳಿಕ ರಾಶಿಕಾ, ನನಗೇನೂ ಬೇಜಾರಾಗಿಲ್ಲ. ನನಗೆ ಖುಷಿನೇ ಆಯ್ತು. ನೆಗೆಟಿವ್ ಎನರ್ಜಿ ಆಚೆ ಹೋದಂತೆ ಆಯ್ತು ಅಂತಾ ಸೂರಜ್ ಬಳಿ ಮಾತನಾಡಿದ್ದರು. ಈ ಬಗ್ಗೆ ಅನಿಸಿಕೆ ಹೇಳಿರುವ ಜಾನ್ವಿ, ನನಗೂ ರಾಶಿಕಾಗೂ ಆಗ್ತಿರಲಿಲ್ಲ. ನಾವು ಹೆಚ್ಚು ಜಗಳವಾಡುತ್ತಿದ್ದೆವು. ಹಾಗಾಗಿ ನಾನು ಹೋಗಿದ್ದು ಅವಳಿಗೆ ಖುಷಿಯಾಗಿರಬಹುದು ಎಂದಿದ್ದಾರೆ ಜಾನ್ವಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

