Bigboss News:
ಬಿಗ್ ಬಾಸ್ ಓಟಿಟಿಯಲ್ಲಿ ಪ್ರೀತಿ ಸಂಬಂಧ ಗಲಾಟೆಗಳ ಅಧ್ಯಾಯ ಮುಗಿಯಿತು ಈಗ ಹೊಸ ಆಟ ಶುರುವಾಗಿದೆ. ಒಬ್ಬೊಬ್ಬರನ್ನು ಮನೆಯಿಂದ ಹೊರ ನಡೆಸಲು ಒಳ ಸಂಚು ಶುರುವಾಗಿದೆ.
ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಅಭಿಮಾನಿ ವರ್ಗ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ವ್ಯಕ್ತಿತ್ವ ಅನೇಕರಿಗೆ ಇಷ್ಟವಾಗುತ್ತಿದೆ. ಮನೆಯಿಂದ ಅವರನ್ನು ಹೊರಗೆ ಕಳಿಸಲು ತಂತ್ರಗಳು ನಡೆಯುತ್ತಿವೆ. ಆದರೆ, ಅಭಿಮಾನಿ ಬಳಗ ಹೆಚ್ಚುತ್ತಿರುವುದರಿಂದ ಮನೆಯವರ ತಂತ್ರ ವಿಫಲವಾಗುವ ಸೂಚನೆ ಸಿಕ್ಕಿದೆ.
ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಈ ವಿಚಾರ ಇಟ್ಟುಕೊಂಡು ಮನೆಯಲ್ಲಿ ಅನೇಕರು ಟೀಕೆ ಮಾಡಿದ್ದಾರೆ. ಸೋಮಣ್ಣ ಮಾಚಿಮಾಡ ಅವರು ಈ ವಿಚಾರವನ್ನು ಪದೇಪದೇ ಎತ್ತುತ್ತಿದ್ದಾರೆ. ಈ ಮೂಲಕ ವೀಕ್ಷಕರಿಗೆ ಇವರ ಮೇಲೆ ಬೇರೆಯ ರೀತಿಯ ಭಾವನೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ.
ಟಾಸ್ಕ್ ವಿಚಾರದಲ್ಲೂ ರೂಪೇಶ್ ಅವರನ್ನು ಟೀಕೆ ಮಾಡಲಾಗುತ್ತಿದೆ. ರಾಕೇಶ್ ಅವರು ಕೆಲ ಟಾಸ್ಕ್ ಗೆದ್ದಿದ್ದಾರೆ. ಆದರೆ, ಟಾಸ್ಕ್ ಗೆದ್ದಿಲ್ಲ ಎಂಬ ವಿಚಾರವನ್ನು ಕೆಲವರು ಹೈಲೈಟ್ ಮಾಡಿದ್ದರು. ಈ ಕಾರಣಕ್ಕೆ ಈ ಬಾರಿ ರೂಪೇಶ್ ನಾಮಿನೇಟ್ ಆದರು. ‘ರೂಪೇಶ್ ಎಂಟರ್ಟೇನ್ ಮಾಡುತ್ತಾರೆ. ಆದರೆ, ಟಾಸ್ಕ್ನಲ್ಲಿ ಫೇಲ್ ಆಗುತ್ತಿದ್ದಾರೆ’ ಎಂದು ಅವರನ್ನು ನಾಮಿನೇಟ್ ಮಾಡಲಾಯಿತು ಎನ್ನಲಾಗಿದೆ.
ರೂಪೇಶ್ ಅವರು ಟಾಸ್ಕ್ ವಿಚಾರದಲ್ಲಿ ಸ್ವಲ್ಪ ಡಲ್ ಇರಬಹುದು. ಆದರೆ, ಅವರು ಸಖತ್ ಆಗಿ ಎಂಟರ್ಟೇನ್ಮೆಂಟ್ ನೀಡುತ್ತಿದ್ದಾರೆ. ಕೆಲವರು ಅವರನ್ನು ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೂ ಅವರಿಗೆ ಅಭಿಮಾನಿ ಬಳಗ ಹೆಚ್ಚುತ್ತಿದೆ.
ಅರ್ಜುನ್-ರೂಪೇಶ್ ನಡುವೆ ಬಿಗ್ ಫೈಟ್: ಬಿಗ್ ಬಾಸ್ ಮನೆಯೊಳಗೆ ನಡೆದದ್ದೇನು…!