Political News: ಪ್ರಧಾನಿ ಮೋದಿ ಅವರ ಅಮ್ಮನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಬಾಯಿಗೆ ಬಂದಂತೆ ಮಾತನಾಡಿದ್ದ. ಅದಾದ ಬಳಿಕ ಬಿಜೆಪಿ ನಾಯಕರ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಬಳಿಕ, ಪ್ರಧಾನಿ ಮೋದಿ ಭಾಷಣದಲ್ಲಿ ನನ್ನ ತಾಯಿಯನ್ನು ರಾಜಕೀಯ ವಿಷಯದಲ್ಲಿ ಎಳೆದು ತಂದಿದ್ದು, ನನಗೆ ತುಂಬಾ ಬೇಸರವಾಯಿತು ಎಂದು ಹೇಳಿದ್ದರು.
ಇದೀಗ ಬಿಹಾರ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಎಐ ವೀಡಿಯೋವನ್ನು ಹರಿಬಿಟ್ಟಿದ್ದು, ಬಿಜೆಪಿ ನಾಯಕರು ಇಂಥ ಮನಸ್ಥಿತಿ ಇರುವ ನಾಯಕರು ಬಿಹಾರಕ್ಕೆ ಬೇಕೆ ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ, ಈ ಎಐ ವೀಡಿಯೋದಲ್ಲಿ ಪ್ರಧಾನಿ ಮೋದಿ, ಇಂದಿನ ವೋಟ್ ಕದ್ದಿದ್ದಾಯ್‌ತು. ಈಗ ಹೋಗಿ ಮಲಗುತ್ತೇನೆ ಎಂದು ಹೇಳುತ್ತಾರೆ.
ಆಗ ಅವರ ಕನಸ್ಸಿನಲ್ಲಿ ಅವರ ತಾಯಿ ಬಂದು, ಮಗನೇ ನೀನು ನನ್ನನ್ನು ನೋಟ್ ಬ್ಯಾನ್ ಮಾಡಿ, ಅದೆಷ್ಟು ಸಮಯ ಲೈನ್‌ನಲ್ಲಿ ನಿಲ್ಲುವ ಹಾಗೆ ಮಾಡಿದೆ..? ಅದಾದ ಬಳಿಕ ನನ್ನ ಸೇವೆ ಮಾಡುವ ಹಾಗೆ ರೀಲ್ಸ್ ಮಾಡಿದೆ. ಇದೀಗ ಬಿಹಾರದಲ್ಲಿ ನನ್ನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಿ. ಇನ್ನೆಷ್ಟು ತುಚ್ಛನಾಗುತ್ತಿ..? ಎಂದು ಪ್ರಶ್ನಿಸುತ್ತಾರೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಬಿಜೆಪಿ ನಾಯಕರು, ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು ಈ ವೀಡಿಯೋಗೆ ಕಾಮೆಂಟ್ ಮಾಡಿರುವ ಜನರು, ಈ ವೀಡಿಯೋ ವೈರಲ್ ಆದ ಬಳಿಕ ಬಿಹಾಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಗೆಲ್ಲಲು ಸಾಧ್ಯವೇ ಇಲ್ಲ. ತುಂಬಾ ಕೆಟ್ಟ ರೀತಿಯಲ್ಲಿ ಅವಮಾನ ಅನುಭವಿಸಲಿದೆ ಎಂದಿದ್ದಾರೆ.
साहब के सपनों में आईं "माँ"
देखिए रोचक संवाद 👇 pic.twitter.com/aA4mKGa67m
— Bihar Congress (@INCBihar) September 10, 2025