www.karnatakatv.net :ವಿಶ್ವದ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಯನ್ನು ಶ್ಲಾಘಿಸಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಹೌದು, ವಿಶ್ವದಲ್ಲೇ ಶ್ರೀಮಂತ ವ್ಯಕ್ತಿಯಲ್ಲೊಬ್ಬರಾದ ಬಿಲ್ ಗೇಟ್ಸ್ ಭಾರತ ಸರ್ಕಾರದ “ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ಭಾರತದಲ್ಲಿ ನ್ಯಾಯಸಮ್ಮತ ಆರೋಗ್ಯ ರಕ್ಷಣೆ ಖಚಿತಪಡಿಸುತ್ತದೆ. ಆದ್ದರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದವನ್ನು ಹೇಳಬೇಕು” ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಭಾರತದ ಆರೋಗ್ಯ ಪ್ರಗತಿ ವೇಗಗೊಳ್ಳಲಿದೆ ಎಂದರು.
“ಆರೋಗ್ಯ ಮೂಲಸೌಕರ್ಯದ ಸುಧಾರಣೆಗಾಗಿ ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಅಪಾರವಾದ ಅವಕಾಶ ಇಲ್ಲಿದೆ. ಅದನ್ನು ಸಾಧಿಸಲು ಭಾರತ ಶ್ರಮಿಸುತ್ತಿದೆ,” ಎಂದು ಮೋದಿ ಬಿಲ್ ಗೆಟ್ಸ್ ಗೆ ಹೇಳಿದರು.
ಈ ಯೋಜನೆಯನ್ನು ಮೋದಿ ಇತ್ತೀಚೆಗಷ್ಟೇ ಚಾಲನೆಯನ್ನು ನೀಡಿ ಇದರಿಂದ ಪ್ರತಿಯೋಬ್ಬ ನಾಗರಿಕರಿಗೂ ಆರೋಗ್ಯ ಐಡಿ ದೊರೆತು ಅದನ್ನು ಅವರ ಆರೋಗ್ಯ ಖಾತೆಯಾಗಿ ಬಳಸಲಾಗುತ್ತದೆ. ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ವೈದ್ಯಕೀಯ ಚಿಕಿತ್ಸೆ ಸಮಸ್ಯೆಗಳು ನಿವಾರಣೆಯಾಗಲಿವೆ ಎಂಧು ಹೇಳಿದರು.