Wednesday, September 18, 2024

Latest Posts

ಆನಂದ್ ಮಹಿಂದ್ರಾ ಬಳಸೋ ಸಿಂಪಲ್ ಕಾರ್ ಇದೇ ನೋಡಿ

- Advertisement -

ದುಡ್ಡಿದ್ದೋರು ಲಕ್ಷ ಲಕ್ಷ, ಕೋಟಿ ಕೋಟಿ ಬೆಲೆಯ ಕಾರ್​​ನಲ್ಲಿ ಓಡಾಡ್ತಾರೆ. ಅಂತ ಕೋಟಿ ಕೋಟಿ ಬೆಲೆಯ ಕಾರ್​​ಗಳನ್ನೇ ತಯಾರಿಸೋ ಕಂಪನಿಯ ಓನರ್​​ ಇನ್ನೆಷ್ಟು ಬೆಲೆಯ ಕಾರ್​​​ನಲ್ಲಿ ಓಡಾಡ್ಬೋದು ಅಲ್ವಾ? ಮಹೀಂದ್ರ ಥಾರ್, ಎಕ್ಸ್​​ಯುವಿ 700, ಇಂಥಾ ಹೈಫೈ ಕಾರ್​​ಗಳನ್ನೇ ತಯಾರಿಸಿರೋ ಕಂಪನಿ ಓನರ್​ ಆನಂದ್ ಮಹಿಂದ್ರಾ ಅವ್ರು ಯಾವ ಕಾರ್​​ನಲ್ಲಿ ಓಡಾಡ್ತಿದ್ದಾರೆ ಗೊತ್ತಾ?

ಟಾಟಾ ಕಂಪನಿ ಓನರ್ ರತನ್ ಟಾಟಾ ಅವ್ರ ಸರಳತೆ ನಿಮಗೆಲ್ಲಾ ಗೊತ್ತು. ಹಾಗೇ ಭಾರತದ ಇನ್ನೊಂದು ದೈತ್ಯ ಕಾರ್ ಕಂಪನಿ ಅಂದ್ರೆ ಅದು ಮಹೀಂದ್ರ.. ಮಹಿಂದ್ರಾ ಕಂಪನಿಯ ಕಾರುಗಳು ಕೂಡ ಸುರಕ್ಷತೆಯಲ್ಲಿ ಟಾಪ್ ಸ್ಥಾನದಲ್ಲಿದೆ.. ಭಾರತದಲ್ಲಿ ಮಾರಾಟವಾಗೋ ಟಾಪ್​​ ಲಿಸ್ಟ್​​ನಲ್ಲಿದೆ.. ಇಂಥಾ ಟಾಪ್ ಕಾರು ಕಂಪನಿಯ ಓನರ್ ಆನಂದ್ ಮಹಿಂದ್ರಾ ಅವ್ರು ಈಗ ತಾವು ಓಡಾಡೋ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ

ಆನಂದ್ ಮಹಿಂದ್ರಾ ಅವ್ರು ತಮಗಾಗಿ ಬಳಸ್ತಿರೋದು ಜಸ್ಟ್ 15 ಲಕ್ಷದ ಕಾರು ಅಷ್ಟೇ.. ಆನಂದ್ ಅವ್ರು ಮಹಿಂದ್ರಾ ಸ್ಕಾರ್ಪಿಯೋ-ಎನ್​​ ಕಾರ್​​ ಅನ್ನು ತಮ್ಮ ಓಡಾಟಕ್ಕೆ ಬಳಸ್ತಾರೆ. ಈ ಸ್ಕಾರ್ಪಿಯೋ ಎನ್​ ಕಾರಿನ ಬೆಲೆ 13 ಲಕ್ಷದಿಂದ 25 ಲಕ್ಷದವರೆಗೂ ಇದೆ. ಇದ್ರಲ್ಲಿ ಆನಂದ್ ಮಹಿಂದ್ರಾ ಅವ್ರು 15 ಲಕ್ಷ ಬೆಲೆ ಬಾಳೋ ಕೆಂಪು ಬಣ್ಣದ ಕಾರ್ ಬಳಸ್ತಿದ್ದಾರೆ.. ಇದ್ರಲ್ಲೆ ಗೊತ್ತಾಗುತ್ತೆ ಅವ್ರ ಸಿಂಪ್ಲಿಸಿಟಿ

ಆನಂದ್ ಮಹಿಂದ್ರಾ ಅವ್ರು ಈ ಮೊದಲು ಕಂಪನಿಯಲ್ಲಿ ಹಿಂದೂಸ್ತಾನ್ ಮೋಟಾರ್ಸ್​​ನ ಕಾಂಟೆಸ್ಸಾ ಕಾರು ಬಳಸ್ತಿದ್ರಂತೆ. ಇದಾದ್ಮೇಲೆ ಮಹಿಂದ್ರಾ ಕಂಪನಿಯದ್ದೇ ಓಲ್ಡ್ ಮಾಡೆಲ್ ಅರ್ಮಡಾ ಬಳಸ್ತಿದ್ರು. ಬಳಿಕ ಬೊಲೆರೋ, ಸ್ಕಾರ್ಪಿಯೋ, ಎಕ್ಸ್​​ಯುವಿ 500 ಅನ್ನೂ ಬಳಸಿದ್ದಾರೆ. ದುಬಾರಿ ಕಾರುಗಳನ್ನ ಉತ್ಪಾದಿಸೋ ಕಂಪನಿಯ ಓನರ್ ಆಗಿದ್ರೂ ಇವರು ಓಡಾಡೋ ಕಾರಿನ ಬೆಲೆ 20 ಲಕ್ಷ ದಾಟಿಲ್ಲ. ಆನಂದ್ ಮಹಿಂದ್ರಾ ಅವ್ರ ಪತ್ನಿ ಎಕ್ಸ್​​ಯುವಿ 700 ಕಾರನ್ನ ಬಳಸ್ತಿದ್ದಾರೆ.. ಆನಂದ್ ಅವ್ರು ಕಾರ್ ಓಡಿಸೋದನ್ನ ಕಲಿತಿದ್ದು ಕೂಡ ಹಳೇ ಪ್ರೀಮಿಯರ್ ಪದ್ಮಿನಿಯಿಂದ ಅಂತೆ.. ಈವರೆಗೂ ಆನಂದ್ ಮಹಿಂದ್ರಾ ಅವ್ರು ತಮ್ಮದೇ ಕಂಪನಿಯ ಕಾರನ್ನು ತಮ್ಮ ಸ್ವಂತಕ್ಕೆ ಬಳಸಿದ್ದಾರೆಯೇ ಹೊರತು ಬೇರೆ ಕಾರನ್ನು ಬಳಸಿಯೇ ಇಲ್ಲ.

- Advertisement -

Latest Posts

Don't Miss