Health Tips: ಎಲ್ಲರೂ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಅಂತಾ ವೈದ್ಯರು ಹೇಳ್ತಾರೆ. ಆದರೆ ಶುಗರ್ ಇದ್ದವರಂತೂ ಸಮಯಕ್ಕೆ ಸರಿಯಾಗಿ ಊಟ ಮಾಡ್ಲೇಬೇಕು ಅಂತಾ ಸಪರೇಟ್ ಆಗಿ ಹೇಳ್ತಾರೆ. ಹಾಗಾದ್ರೆ ಯಾಕೆ ಶುಗರ್ ಇದ್ದವರು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು..? ಮಾಡದಿದ್ದರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ಶುಗರ್ ಪ್ರಮಾಣ ಹೆಚ್ಚಾದರೂ, ಕಡಿಮೆಯಾದರೂ ಆರೋಗ್ಯ ಹಾಳಾಗುತ್ತದೆ. ಜೀವಕ್ಕೆ ಕುತ್ತು ಬರುತ್ತದೆ. ಹಾಗಾಗಿ ಶುಗರ್ ಬಂದಾಗ, ನಾವು ಆರೋಗ್ಯ ಕಾಳಜಿ ವಹಿಸುವುದು ಅತೀ ಮುಖ್ಯ. ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದಲ್‌ಲಿ, ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುತ್ತದೆ. ಬಳಿಕ ಚೆನ್ನಾಗಿ ಊಟ ಮಾಡಿದಾಗ, ಹಠಾತ್ತನೆ ರಕ್ತದಲ್ಲಿ ಶುಗರ್ ಪ್ರಮಾಣ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಹಾಗಾಗಿ ಶುಗರ್ ಇದ್ದವರು ಸರಿಯಾದ ಸಮಯಕ್ಕೆ ಊಟ ಮಾಡಬೇಕು. ಹಾಾಗಾಗಿಯೇ ಶುಗರ್ ಇದ್ದವರು ಉಪವಾಸ ಮಾಡಬಾರದು ಅಂತಾ ಸಲಹೆ ಕೊಡಲಾಗುತ್ತದೆ.
ಇನ್ನು ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳುವುದರ ಜೊತೆಗೆ, ವೈದ್ಯರು ಹೇಳಿದ ಮಾತ್ರೆಯನ್ನು ಅದೇ ಸಮಯಕ್ಕೆ ತೆಗೆದುಕೊಳ್ಳುವುದು ಕೂಡ ತುಂಬಾ ಮುಖ್ಯ. ಅಲ್ಲದೇ, ಬಿಪಿ-ಶುಗರ್ ಇದ್ದವರು, ಯಾಾವುದೇ ವಿಷಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಹೆಚ್ಚು ಟೆನ್ಶನ್ ತೆಗೆದುಕೊಂಡಾಗಲೇ, ಶುಗರ್ ಹೆಚ್ಚಾಗಿ, ತೊಂದರೆಯಾಗುತ್ತದೆ.