ಸಾಧನೆ ಮಾಡ್ಬೇಕು ಅನ್ನೊ ಛಲ ಇದ್ರೆ ಸಾಕು ಏನ್ ಬೇಕಾದ್ರೂ ಸಾಧಿಸಬಹುದು ಅನ್ನೋ ಮಾತಿದೆ. ಇಲ್ಲೋಬ್ಬ ವ್ಯಕ್ತಿ ತಿಂಗಳಿಗೆ 6 ಲಕ್ಷ ರೂಪಾಯಿ ಬರ್ತಿದ್ದ ಕೆಲಸವನ್ನು ಬಿಟ್ಟು, ಈಗ ಎರಡೂ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.. ಹೌದು ವೀಕ್ಷಕರೇ.. ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ. ನಾವ್ ವರ್ಷಕ್ಕೆ 6 ಲಕ್ಷ ರೂಪಾಯಿ ದುಡಿಯೋದಿಲ್ಲ. ಅಂತಹದ್ರಲ್ಲಿ ತಿಂಗಳನಿಗೆ 2 ಕೋಟಿ ಆದಾಯ ಹೇಗೆ ಗಳಿಸ್ತಿದ್ದಾನೆ ಅಂತ ಅನ್ನೋ ಪ್ರಶ್ನೆ ನಿಜಕ್ಕೂ ನಿಮ್ಮನ್ನು ಕಾಡ್ತಿರುತ್ತೆ. ಹಾಗಾದ್ರೆ, ಈ ವ್ಯಕ್ತಿ ತಿಂಗಳಿಗೆ 2 ಕೋಟಿ ಆದಾಯ ಹೇಗೆ ಗಳಿಸ್ತಿದ್ದಾರೆ? ಅದಕ್ಕೆ ಸ್ಫೂರ್ತಿಯಾದ್ರೂ ಏನು?
ಇವರು ಹೆಸರು ಡಾ. ಅಕ್ರಮ್ ಅಹ್ಮದ್.. ಉತ್ತರ ಪ್ರದೇಶದ ಕುಗ್ರಾಮವೊಂದರಲ್ಲಿ ಜನಿಸಿದ ಅಕ್ರಮ್ ಅಹ್ಮದ್, ಮೂಲತಃ ರೈತ ಕುಟುಂಬದಿಂದ ಬಂದವರು. ಡಿ ಫಾರ್ಮ್ ಪದವೀಧರರಾಗಿದ್ದು, ಊರಲ್ಲಿ ಒಂದು ಮೆಡಿಕಲ್ ಶಾಪ್ ತೆರೆಯುವ ಕನಸು ಕಂಡಿದ್ದರು. ಆದ್ರೆ, ಅಕ್ರಮ್ ಅವರ ಪ್ರತಿಭೆ ಗಮನಿಸಿದ ಅವರ ತಂದೆ, ವೈದ್ಯಕೀಯ ಶಿಕ್ಷಣ ಪೂರೈಸುವಂತೆ ಪ್ರೋತ್ಸಾಹಿಸಿದ್ರು. ಹೀಗಾಗಿ, ಅಣ್ಣಾಮಲೈ ವಿವಿಯಲ್ಲಿ ಡಾಕ್ಟರ್ ಆಫ್ ಫಾರ್ಮಸಿ ಮುಗಿಸಿದ ಅಕ್ರಮ್ ಅಹ್ಮದ್, ಉದ್ಯೋಗಕ್ಕಾಗಿ ಮಲೇಷ್ಯಾಕ್ಕೆ ತೆರಳಿದ್ರು. ಅಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ರು. ನಂತರ ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಯಲ್ಲಿ ಪ್ರಾಧ್ಯಾಪಕರಾಗಿ, ಪಿಎಚ್ಡಿಯನ್ನು ಪೂರೈಸಿದ್ರು.
ಪಿಎಚ್ಡಿ ನಂತರ ಒಂದು ಸಂಗತಿಯನ್ನು ಅವರು ಗಮನಿಸಿದ್ರು. ವೈದ್ಯಕೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗಬೇಕಿತ್ತು. ಮತ್ತಷ್ಟು ಜನರು ಶಿಕ್ಷಣ ಮುಗಿದ ಬಳಿಕ ಸರ್ಕಾರಿ ನೌಕರಿ ಹುಡುಕಾಟ ಮಾಡೋದನ್ನೂ ಅಹ್ಮದ್ ಗಮನಿಸಿದ್ರು. ಇದರ ಬೆನ್ನಲ್ಲೇ ಅಕ್ರಮ್ ಅಹ್ಮದ್ ಅವರು, ಯುಟ್ಯೂಬ್ ಮೂಲಕ ವಿದೇಶಗಳಲ್ಲಿ ಇರುವಂತಹ ಉದ್ಯೋಗಾವಕಾಶಗಳಿಗೆ ಸಿದ್ಧವಾಗುವ ರೀತಿ, ಪರೀಕ್ಷೆಗಳನ್ನು ಎದುರಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಮುಂದಾದರು.
ಯುಟ್ಯೂಬ್ನಲ್ಲಿ ಅಕ್ರಮ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯ್ತು. ಇದನ್ನೇ ಪೂರ್ಣಕಾಲಿಕ ಉದ್ಯೋಗವಾಗಿ ಮಾಡಿಕೊಳ್ಳಲು ಮುಂದಾದ್ರು. 2022ರಲ್ಲಿ ತಮಗೆ ಬರುತ್ತಿದ್ದ 6 ಲಕ್ಷ ರೂಪಾಯಿ ಸಂಬಳ ಬಿಟ್ಟು, ಅಕಾಡೆಮಿಕಲಿ ಗ್ಲೋಬಲ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ರು. ಇದು ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವೇದಿಕೆಯಾಗಿದ್ದು, ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೇದಿಕೆ ಮೂಲಕ ವಿದೇಶದಲ್ಲಿ ವೈದ್ಯಕೀಯ ಉದ್ಯೋಗಿಗಳಿಗೆ ಅತ್ಯುನ್ನತ ಸಂಬಳದ ಉದ್ಯೋಗ ಗಳಿಸಲು ಬೇಕಾದ ತರಬೇತಿ ಹಾಗೂ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ನಡೆಸಲು ಕೋಚಿಂಗ್ ನೀಡಲಾಗುತ್ತಿದೆ.
2022ರಲ್ಲಿ 50 ಸಾವಿರ ಅಮೆರಿಕನ್ ಡಾಲರ್ ವೆಚ್ಚದಲ್ಲಿ ತಮ್ಮ ಸ್ಟಾರ್ಟ್ಅಪ್ ಆರಂಭಿಸಿದ ಅಕ್ರಮ್, ಇಂದು ವಿಶ್ವದಲ್ಲೆಡೆ ಖ್ಯಾತಿ ಗಳಿಸಿದ್ದಾರೆ. ಇಂದು ಡಾ. ಅಕ್ರಮ್ ಅಹ್ಮದ್ ಅವರ ಸಂಸ್ಥೆಗೆ ವಿಶ್ವದ 75 ದೇಶಗಳಲ್ಲಿ ವಿದ್ಯಾರ್ಥಿಗಳಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ವಿದೇಶಗಳಲ್ಲಿ ಶಿಕ್ಷಣ ಪಡೆಯುವ ಕುರಿತು, ಉದ್ಯೋಗ ಆರಂಭಿಸುವ ಕುರಿತು, ಸ್ಕಾಲರ್ಶಿಫ್ ಪಡೆಯುವ ಬಗ್ಗೆ ಅಕ್ರಮ್ ಅವರ ಬಳಿ ಸಲಹೆ ಪಡೆಯುತ್ತಿದ್ದಾರೆ. ಇದೀಗ ಇದೇ ಸ್ಟಾರ್ಟ್ಅಪ್ ಮೂಲಕ ಡಾ.ಅಕ್ರಮ್ ಅಹ್ಮದ್ ತಿಂಗಳಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.