ನವದೆಹಲಿ: 2022ರ ಎಂಸಿಡಿ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಕ್ಷ ಡಿಸೆಂಬರ್ 7 ರಂದು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ನಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು.ಎಎಪಿಯಿಂದ ಎಂಸಿಡಿ ಮೇಯರ್ ಆಯ್ಕೆಯಾಗುತ್ತಾರೆ ಮತ್ತು ಬಿಜೆಪಿ ‘ಪ್ರಬಲ ವಿರೋಧ’ ಪಾತ್ರವನ್ನು ವಹಿಸುತ್ತದೆ ಎಂದು ಘೋಷಿಸಿದ ಎರಡು ದಿನಗಳ ನಂತರ ಗುಪ್ತಾ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಎಂಸಿಡಿ ಚುನಾವಣೆಯಲ್ಲಿ ಸೋತರೂ ಮೇಯರ್ ಸ್ಥಾನದ ಮೇಲೆ ಬಿಜೆಪಿ ಹಕ್ಕು ಸಾಧಿಸುವ ಊಹಾಪೋಹಗಳಿಗೆ ಈ ಘೋಷಣೆ ಅಂತ್ಯವಾಗಿದೆ.
ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 250 ವಾರ್ಡ್‌ಗಳಲ್ಲಿ 134 ಅನ್ನು ಗೆಲ್ಲುವ ಮೂಲಕ ಎಂಸಿಡಿ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿತ್ತು ಮತ್ತು ಬಿಜೆಪಿ 104 ಅನ್ನು ಗೆದ್ದುಕೊಂಡಿತು. ದೆಹಲಿ ಎಂಸಿಡಿ ಚುನಾವಣೆಯಲ್ಲಿ ಕಾಂಗ್ರೆಸ್ ಒಂಬತ್ತು ವಾರ್ಡ್‌ಗಳನ್ನು ಗೆದ್ದುಕೊಂಡಿತು. 40ರಷ್ಟು ಮತಗಳನ್ನು ಬಿಜೆಪಿ ಪಡೆದುಕೊಂಡಿದೆ.
ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಆಭರಣಗಳನ್ನು ಹಿಂದಿರುಗಿಸಿದ ಆಟೋ ಚಾಲಕ