Friday, December 6, 2024

Latest Posts

ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯ

- Advertisement -

Hubli News: ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಆಪರೇಷನ್ ಕಮಲ ವಿಚಾರಕ್ಕೆ ಕಿಡಿಕಾರಿದ್ದಾರೆ.

ಬಿಜೆಪಿ ಅವರು 2019 ರಲ್ಲಿ ಖರೀದಿ ಮಾಡಿ ಅಧಿಕಾರ ಮಾಡಿದ್ರು. ದೇಶದಲ್ಲಿ 450 ಕ್ಕಿಂತ ಹೆಚ್ಚು ಶಾಸಕರು, ಎಂಪಿಗಳನ್ನ ಆಪರೇಷನ್ ಮಾಡಿ ಬಿಜೆಪಿ ಗೆ ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ 250 ಕ್ಕೂ ಹೆಚ್ಚು ಜನ ಪ್ರತಿನಿಧಿಗಳನ್ನು ಬಿಜೆಪಿ ಗೆ ಕರೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ಪ್ರಯತ್ನ ಮಾಡಿದ್ರು, ಸಕ್ಸಸ್ ಆಗ್ಲಿಲ್ಲ. ಕಾಂಗ್ರೆಸ್ ನ ಯಾವ ಶಾಸಕರು ಹೋಗಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸಿಎಂ ರೇಸ್ ನಲ್ಲಿರೋ ಸಚಿವರೇ 50 ಕೋಟಿ ಕೊಡಲು ಮುಂದಾಗಿದ್ದಾರೆ ಅನ್ನೋ ಬೊಮ್ಮಾಯಿ ಹೇಳಿಕೆಗೆ ಕಿಡಿ ಕಾರಿದ ಸಚಿವರು, ಬಿಜೆಪಿಯವರು ಬರೀ ಸುಳ್ಳನ್ನೇ ಹೇಳ್ತಾರೆ ಎಂದಿದ್ದಾರೆ.

ಕೋವಿಡ್ ಹಗರಣ ಎಸ್ ಐ ಟಿ ಗೆ ಕೊಡೊ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ,  ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ, ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಶ್ರೀನಿವಾಸ ಮೂರ್ತಿ ವರದಿಯಲ್ಲಿನ ಒಳ್ಳೆಯ ಅಂಶಗಳನ್ನು ಅಂಗಿಕರಿಸ್ತೇವೆ. ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ಇಲಾಖೆಯಲ್ಲಿ 5900 ಕೋಟಿ ಸಾಲ ಮಾಡಿಟ್ಟು ಹೋಗಿದ್ದರು. ಈಗ ಸುಧಾರಣೆ ತರ್ತೀದ್ದೇವೆ. ನಷ್ಟದಲ್ಲಿರೋ ವಾಯುವ್ಯ ಸಾರಿಗೆಗೆ ನೆರವು ನೀಡುವಂತೆ ಸಿಎಂ ಗೆ ಮನವಿ ಮಾಡಿದ್ದೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇನ್ನು ಪುರುಷರಿಗೂ ಉಚಿತ ಪ್ರಯಾಣ ಪ್ರಸ್ತಾವನೆ ಬಗ್ಗೆ ಮಾತನಾಡಿದ ಸಚಿವರು, ಆ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಲಾಗಿದೆ. ಪುರುಷರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಇಲ್ಲ. ಸಂವಾದವೊಂದರಲ್ಲಿ ಡಿಸಿಎಂ ಡಿ.ಕೆ.‌ಶಿವಕುಮಾರ ಈ ವಿಷಯ ಹೇಳಿದ್ದಾರೆ. ಅವರನ್ನು ಭೇಟಿ ಮಾಡಿದಾಗ ಈ ಕುರಿತು ವಿಚಾರಿಸುತ್ತೇನೆ. ಆದರೆ ನಮ್ಮ ಬಳಿ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ಲಾಭ ನಷ್ಟದ ವಿಚಾರ ಮಾಡಲು ಬರಲ್ಲ. ನಷ್ಟವಾದರೂ ಪ್ರಯಾಣಿಕರ ಅನುಕೂಲಕ್ಕೆ ಬಸ್ ಓಡಿಸುತ್ತೇವೆ. ಇಡೀ ವಿಶ್ವದಲ್ಲಿ ಸಾರಿಗೆ ನಿಗಮಗಳು ಲಾಭದ ಲೆಕ್ಕ ಇಟ್ಟುಕೊಂಡಿಲ್ಲ. ಶೇ 40 ರಷ್ಟು ಬಸ್ ಗಳು ನಷ್ಟದಲ್ಲಿಯೇ ಅಡ್ಡಾಡುತ್ತೆ ಶೇ 30 ರಷ್ಟು ಬಸ್ ಗಳು ನೋ ಲಾಸ್ ನೋ ಪ್ರಾಫಿಟ್ ನಲ್ಲಿ ನಡೆಯುತ್ತೆ
ಖಾಸಗಿ ಬಸ್ ಗಳನ್ನು ಲಾಭವಿದ್ದರಷ್ಟೇ ಓಡಿಸುತ್ತೆ. ಲಾಭ – ನಷ್ಟ ಏನೇ ಇದ್ದರೂ ನಾವು ಓಡಿಸ್ತೇವೆ. ನಿವೃತ್ತ ನೌಕರರಿಗೆ ನಿವೃತ್ತಿ ವೇತನ, ಗ್ರ್ಯಾಚುಟಿ ಇತ್ಯಾದಿ ಲಾಭಗಳು ಸಿಕ್ಕಿಲ್ಲ ಅನ್ನೋ ಮಾತಿದೆ. ಬಿಜೆಪಿ ಸರ್ಕಾರ 5900 ಕೋಟಿ ಬಾಕಿ ಇಟ್ಟು ಹೋಗಿದ್ರಂದ ಈ ತೊಂದರೆ ಆಗಿದೆ. ಇದೆಲ್ಲವನ್ನು ಪರಿಶೀಲಿಸುತ್ತೇವೆ. ಸಿಎಂ ಜೊತೆ ಮಾತನಾಡಿ ಅಗತ್ಯ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇನೆ. ಶಕ್ತಿ ಯೋಜನೆಗಾಗಿ 5500 ಕೊಟಿ ಬಜೆಟ್ ಇಡಲಾಗಿದೆ. ಅದಕ್ಕಿಂತಲೂ ಹೆಚ್ಚು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

- Advertisement -

Latest Posts

Don't Miss