www.karnatakatv.net : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆ ಸಂಬಂಧ ಬಿಜೆಪಿ ಅಚ್ಚರಿ ಅಭ್ಯರ್ಥಿಗಳನ್ನ ಪ್ರಕಟಿಸಿದೆ.. ರಾಜ್ಯಸಭೆ ಕನಸೂ ಕಾಣದ ಅರ್ಜಿಯೂ ಸಲ್ಲಿಸದ ನಿಷ್ಠಾವಂತ ಕಾರ್ಯಕರ್ತರಿಗೆ ಬಿಜೆಪಿ ಹೈಕಮಾಂಡ್ ರಾಜ್ಯಸಭೆ ಟಿಕೆಟ್ ನೀಡಿದೆ. ಹಾಲಿ ಸಂಸದ ಪ್ರಭಾಕರ್ ಕೋರೆ, ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರು ರಾಜ್ಯಸಭಾ ಅಭ್ಯರ್ಥಿಗಳ ವಿಚಾರದಲ್ಲಿ ಚರ್ಚೆಯಲ್ಲಿತ್ತು. ರಮೇಶ್ ಕತ್ತಿಗೆ ಟಿಕೆಟ್ ಕೊಡದಿದ್ದರೆ ಬಂಡಾಯ ಏಳುವ ಮುನ್ಸೂಚನೆಯನ್ನ ಉಮೇಶ್ ಕತ್ತಿ ನೀಡಿದ್ರು.. ಯಡಿಯೂರಪ್ಪ ಸಹ ರಮೇಶ್ ಜತ್ತಿ ಹಾಗೂ ಪ್ರಭಾಕರ್ ಕೋರೆ ಪರವಾಗಿ ಲಾಭಿ ಮಾಡಿದ್ರು. ಆದ್ರೆ ಬಿಜೆಪಿ ಹೈಕಮಾಂಡ್ ಈರಣ್ಣ ಕಡಾಡಿ ಹಾಗೂ ಅಶೊಕ್ ಗಸ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿದೆ.
ಯಾರು ಈ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ..?
ಈರಣ್ಣ ಕಡಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದವರು. ಈ ಹಿಂದೆ ಬಿಜೆಪಿ ಬೆಳಗಾವಿ ಗ್ರಾಮೀಣ ಬಿಜೆಪಿ ಅಧ್ಯಕ್ಷರಾಗಿದ್ರು. ಬೆಳಗಾವಿ ಜಿ.ಪಂ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ರು.. ಇನ್ನು ಅಶೋಕ್ ಗಸ್ತಿ ಬಿಜೆಪಿ ಓಬಿಸಿ ಮೋರ್ಚಾದ ಪ್ರಧಾನಕಾರ್ಯದರ್ಶಿಯಾಗಿದ್ರು. ಈ ಹಿಂದೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು.. ಸದ್ಯ ಬಳ್ಳಾರಿ ವಿಭಾಗದ ಪ್ರಭಾರಿಯಾಗಿ ಕಾರ್ಯನಿರ್ವಹಣೆ ಮಾಡ್ತಿದ್ದಾರೆ.. ಇಬ್ಬರು ಪ್ರಭಾವಿ ನಾಯಕರಲ್ಲ.. ಶಾಸಕ, ಸಂಸದರಾಗಿ ಆಯ್ಕೆಯಾಗಿಲ್ಲ, ಚುನಾವಣೆಗೆ ಸ್ಪರ್ಧೇ ಮಾಡಿಲ್ಲ. ಇದೀಗ ಬಿಜೆಪಿ ಹೈಕಮಾಂಡ್ ಇವರ ನಿಸ್ವಾರ್ಥ ಸೇವೆ ಗುರುತಿಸಿ ರಾಜ್ಯಸಭೆ ಟಿಕೆಟ್ ನೀಡಿದೆ. ರಮೇಶ್ ಕತ್ತಿ, ಪ್ರಭಾಕರ್ ಕೋರೆ ಇಬ್ಬರೂ ಟಿಕೆಟ್ ಮಿಸ್ ಮಾಡ್ಕೊಂಡಿರೋದು ಕಮಲ ಪಾಳಯದಲ್ಲಿ ಭಿನ್ನಮತ ತಲೆದೋರುವ ಸಾಧ್ಯತೆ ಇದ್ದು ಇದನ್ನ ಯಡಿಯೂರಪ್ಪ ಯಾವ ರೀತಿ ನಿಭಾಯಿಸ್ತಾರೆ ಕಾದು ನೋಡ್ಬೇಕಿದೆ. ಇತ್ತ ಈಗಾಗಲೇ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಲಿದ್ದು, ಜೆಡಿಎಸ್ ನಿಂದ ದೇವೇಗೌಡರು ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ.
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ