Thursday, December 12, 2024

Latest Posts

ಮೋದಿ, ಅಮಿತ್ ಶಾ ಬಂದ್ರೂ ಬಿಜೆಪಿಗೆ ಈ ಎರಡೂ ಕ್ಷೇತ್ರಗಳಲ್ಲಿ ಠೇವಣಿ ಬರಲ್ಲ.!

- Advertisement -

ನರೇಂದ್ರ ಮೋದಿ, ಬಿಜೆಪಿ ಚಾಣಾಕ್ಯ ಅಮಿತ್ ಶಾ ಎಷ್ಟೇ ಪ್ರಬಲರಾಗಿದ್ರು ದೇಶದಲ್ಲಿ ಎಲ್ಲೇ ಬಿಜೆಪಿ ಗೆಲುವಿನ ಬಾವುಟ ಹಾರಿಸಿದ್ರು ಈ ಎರಡು ಕ್ಷೇತ್ರದಲ್ಲಿ ಬಿಜೆಪಿ ಠೇವಣಿ ಬರೋದು ಡೌಟು. ಹೌದು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬಹುದು. ಮೂವರು ಡಿಸಿಎಂ ರಾಜ್ಯಾಬಾರ ಮಾಡ್ತಿರಬಹುದು ಆದ್ರೆ, ಈ ಕ್ಷೇತ್ರಗಳ ಜನ ಬಿಜೆಪಿಗೆ ಕ್ಯಾರೆ ಅನ್ನೋದಿಲ್ಲ.. ಹೀಗಾಗಿ ರಾಜ್ಯದಲ್ಲಿ ಅನರ್ಹ ಶಾಸಕರ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮಿಷನ್ 13ಕ್ಕೆ ಇಳಿಸಿಕೊಂಡು ಚುನಾವಣೆ ಎದುರಿಸುತ್ತಿದೆ.

ಹೌದು, 17 ಶಾಸಕರು ರಾಜೀನಾಮೆ ಕೊಟ್ಟ ಹಿನ್ನೆಲೆ ಕುಮಾರಸ್ವಾಮಿ ಸರ್ಕಾರ ಪತನವಾಗಿ ಯಡಿಯೂರಪ್ಪ ನಾಲ್ಕನೇ ಬಾರಿ ಸಿಎಂ ಆದ್ರು.. ಅನರ್ಹ ಶಾಸರನ್ನ ನಾನು ಸಿಎಂ ಆದ 24 ಗಂಟೆಯಲ್ಲಿ ಮಿನಿಸ್ಟರ್ ಮಾಡ್ತೀನಿ ಅಂತ ಮಾತು ಕೊಟ್ಟಿದ್ದ ಯಡಿಯೂರಪ್ಪ ಬಿಜೆಪಿ ಚಾಣಾಕ್ಯ ಕೊಟ್ಟ ಶಾಕ್ ಗೆ ಪತರುಗುಟ್ಟಿ ಹೋಗಿದ್ದಾರೆ.. ಇದೀಗ 15 ಕ್ಷೇತ್ರಗಳ ಉಪಚುನಾವಣೆ ಘೋಷಣೆ ಯಡಿಯೂರಪ್ಪ ಕನಸಲ್ಲೂ ಕಂಗೆಡುವಂತೆ ಮಾಡಿದೆ.. ಯಾಕಂದ್ರೆ 15 ಕ್ಷೇತ್ರಗಳಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕು. ಇಲ್ಲವಾದರೆ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.. 15 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದೇ ಗೆಲ್ತೀವಿ ಅಂತ ಹೇಳೋಕೆ ಸಾಧ್ಯವಿಲ್ಲ. ರಮೇಶ್ ಜಾರಕಿಹೊಳಿ ಕ್ಷೇತ್ರ ಗೋಕಾಕ್, ಮಹೇಶ್ ಕುಮಟಳ್ಳಿ ಪ್ರತಿನಿಧಿಸುವ ಅಥಣಿ, ಶ್ರೀಮಂತ್ ಪಾಟೀಲರ ಕಾಗವಾಡ ಕ್ಷೇತ್ರಗಳು ಕಳೆದ ಬಾರಿಯ ಬಿಜೆಪಿ ಪರಾಜಿತ ಅಭ್ಯರ್ಥಿಗಳು ಸಪೋರ್ಟ್ ಮಾಡಿದ್ರೆ ಗೆಲುವು ಸಾಧಿಸಬಹುದು.. ಇನ್ನು ಬಿ.ಸಿ ಪಾಟೀಲ್ ರ ಹೀರೇಕೆರೂರು, ಆರ್ ಶಂಕರ್ ಪ್ರತಿನಿಧಿಸುವ ರಾಣೆಬೆನ್ನೂರು, ಶಿವರಾಂ ಹೆಬ್ಬಾರ್ ಪ್ರತಿನಿಧಿಸುವ ಯಲ್ಲಾಪುರದಲ್ಲಿ 2018ರಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿಗಳು ಸಾಥ್ ನೀಡಿದ್ರೆ ಭಾರೀ ಬಹುಮತದಲ್ಲಿ ಗೆಲುವು ಗ್ಯಾರಂಟಿ.. ಇನ್ನು ಆನಂದ್ ಸಿಂಗ್ ರ ವಿಜಯನಗರ ಕ್ಷೇತ್ರದಲ್ಲಿ ಸಂತೋಷ್ ಲಾಡ್ ಅಥವಾ ಸೂರ್ಯನಾರಾಯಣ ರೆಡ್ಡಿ  ಕಾಂಗ್ರೆಸ್ ಅಭ್ಯರ್ಥಿಯಾದ್ರೆ ಬಿಜೆಪಿ ಗೆಲುವು ಸುಲಭವಲ್ಲ.. ಇನ್ನು ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಕ್ಯಾಂಡಿಡೇಟ್ ಆಗಿ ಯಡಿಯೂರಪ್ಪ ಸಚಿವ ಸ್ಥಾನ ಕೊಡ್ತೀನಿ ಅಂತ ಪ್ರಚಾರ ಮಾಡಿದ್ರೆ ಬಿಜೆಪಿ ಚಿಕ್ಕಬಳ್ಳಾಪುರದಲ್ಲಿ ಖಾತೆ ತೆರೆಯೋದು ಗ್ಯಾರಂಟಿ. ಇನ್ನು ಹೊಸಕೋಟೆ ಸುಲ್ತಾನ್ ಎಂ.ಟಿ.ಬಿ ನಾಗರಾಜ್ ಅಥವಾ ಅವರ ಪುತ್ರ ಸ್ಪರ್ಧೇ ಮಾಡೋದು ಗ್ಯಾರಂಟಿ. ಈ ಕ್ಷೇತ್ರದಲ್ಲಿ ಬಚ್ಚೇಗೌಡರು ವಿರೋಧ ಮಾಡದಿದ್ರೆ ಬಿಜೆಪಿ ಅಭ್ಯರ್ಥಿ ಕನಿಷ್ಠ 50 ಸಾವಿರ ಲೀಡ್ ನಲ್ಲಿ ಗೆಲುವು ಸಾಧಿಸ್ತಾರೆ. ಬೆಂಗಳೂರು ನಗರ ವ್ಯಾಪ್ತಿಯ ಕೆ.ಆರ್ ಪುರಂನ ಬಸವರಾಜು, ಯಶವಂತಪುರದ ಎಸ್.ಟಿ ಸೋಮಶೇಖರ್ ಗೆಲುವನ್ನ ಸದ್ಯಕ್ಕೆ ಯಾರೂ ತಡೆಯೋಕೆ ಸಾಧ್ಯವಿಲ್ಲ. ಆದ್ರೆ, ಜೆಡಿಎಸ್ ಅನರ್ಹ ಶಾಸಕ ಗೋಪಾಲಯ್ಯರ ಮಹಾಲಕ್ಷ್ಮಿ ಲೇಔಟ್ ಹಾಗೂ ರೋಷನ್ ಬೇಗ್ ರ ಶಿವಾಜಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿಗಳಾದ ನೆಲ ನರೇಂದ್ರ ಬಾಬು ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಾಥ್ ಕೊಟ್ರೆ ಎರಡರಲ್ಲೂ ಕಮಲ ಅರಳೋದು ಗ್ಯಾರಂಟಿ.   ಈ ಮೇಲ್ಕಂಡ 13 ಕ್ಷೇತ್ರಗಳಲ್ಲಿ 2018ರ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳು ಸಪೋರ್ಟ್ ಮಾಡಿದ್ರೆ 13 ಕ್ಷೇತ್ರಗಳು ಬಿಜೆಪಿ ಪಾಲಾಗುತ್ವೆ. ಆದ್ರೆ, ಮೋದಿ,ಅಮಿತ್ ಶಾ ಬಂದ್ರೂ ಹುಣಸೂರು ಹಾಗೂ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಗೆಲ್ಲೋದಿರಲಿ ಠೇವಣಿ ಉಳಿಸಿಕೊಳ್ಲೋದು ಕಷ್ಟ ಕಷ್ಟ..  ಯಾಕಂದ್ರೆ ಹೆಚ್. ವಿಶ್ವನಾಥ್ ರಾಜೀನಾಮೆ ಕೊಟ್ಟಿರುವ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಮೂರನೇ ಪ್ಲೇಸ್ ಗ್ಯಾರಂಟಿ.. ಠೇವಣಿ ಬಂದ್ರೆ ಪುಣ್ಯ.. 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಸಿದ ಜಿ.ಟಿ ದೇವೇಗೌಡ 2008ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ರು.. ಆ ವೇಳೆ ಜಿ.ಟಿ ದೇವೇಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ರು.. ಕಳೆದು ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಬಿಜೆಪಿಯ ಪ್ರತಾಪ್ ಸಿಂಹಗೆ ಎರಡನೇ ಸ್ಥಾನ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಬಿಜೆಪಿಯಿಂದ ಯಾವೊಬ್ಬ ಅಭ್ಯರ್ಥಿ ಗೆಲುವು ಸಾಧಿಸಿಲ್ಲ. ಜೆಡಿಎಸ್  ಶಾಸಕ ನಾರಾಯಣ ಗೌಡ ರಾಜೀನಾಮೆ ಇಂದ ತೆರವಾಗಿರುವ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೂ ಠೇವಣಿ ಉಳಿಸಿಕೊಂಡಿಲ್ಲ.. ಯಡಿಯೂರಪ್ಪ ಹುಟ್ಟೂರು ಬೂಕನಕೆರೆ ಇದೇ ಕ್ಷೇತ್ರದಲ್ಲಿದ್ರೂ ಬಿಜೆಪಿಗೆ ನೆಲೆ ಇಲ್ಲ. ಹೀಗಾಗಿ ಅನರ್ಹ ಶಾಸಕ ನಾರಾಯಣಗೌಡ ಏನೇ ಸರ್ಕಸ್ ಮಾಡಿದ್ರೂ ಗೆಲುವು ಅಸಾಧ್ಯ. ಠೇವಣಿ ಬಂದ್ರೆ ಅದೇ ಬಿಜೆಪಿಯ ಸಾಧನೆ.

ಯಸ್ ವೀಕ್ಷಕರೇ ನಿಮ್ಮ ಪ್ರಕಾರ 15 ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಷ್ಟು ಸ್ಥಾನಗಳನ್ನ ಗೆಲ್ಲುತ್ತೆ..? ಯಾವ ಕ್ಷೇತ್ರಗಳಲ್ಲಿ ಯಾರು ಗೆಲ್ತಾರೆ ಕಾಮೆಂಟ್ ಮಾಡಿ..

- Advertisement -

Latest Posts

Don't Miss