Wednesday, April 23, 2025

Latest Posts

ಸರ್ಕಾರಿ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ..!

- Advertisement -

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅನ್ನೋ ಅದ್ಭುತ ಕನ್ ಸೆಪ್ಟ್ ಸಿನಿಮಾ ಕಟ್ಟಿ ಕೊಟ್ಟವರು ನಿರ್ದೇಶಕ, ನಟ ರಿಷಬ್ ಶೆಟ್ಟಿ. ಸರ್ಕಾರಿ ಶಾಲೆಗಳ ದುಸ್ಥಿತಿ ಹೇಗಿದೆ ಅನ್ನೋದನ್ನ ಬೆಳ್ಳಿ ತೆರೆ‌ಮೇಲೆ ಕಟ್ಟಿ ಕೊಟ್ಟಿದ್ರು.

ಸರ್ಕಾರಿ ಶಾಲೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿ, ಚಿತ್ರ ಸೂಪರ್ ಡೂಪರ್ ಹಿಟ್ ಆದ್ರೂ ಸೈಲೆಂಟ್ ಆಗದ ರಿಷಬ್ ಅದೇ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.

ಚಿತ್ರೀಕರಣ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಶಾಲೆ ಮುಚ್ಚುವ ಸ್ಥಿಯಲ್ಲಿರೋ ವಿಚಾರ ಗೊತ್ತಾಗುತ್ತಿದ್ದಂತೆ ರಿಷಬ್ ದತ್ತು ಪಡೆದು, ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ.

ಶೂಟಿಂಗ್ ಟೈಮ್ ನಲ್ಲಿ 42 ಮಕ್ಕಳು ಇದ್ದರಂತೆ. ಆ ಬಳಿಕ ಶಾಲೆಯಲ್ಲಿ ಉಳಿದಿದ್ದು ಮಾತ್ರ 17 ಮಂದಿ. ಇನ್ನೇನು ಶಾಲೆ‌ ಮುಚ್ಚಿಯೇ ಬಿಡ್ತು ಅನ್ನುವಷ್ಟರಲ್ಲಿ ರಿಷಬ್ ಶೆಟ್ಟಿ ಶಾಲೆಯನ್ನ ದತ್ತು ಪಡೆದಿದ್ದಾರೆ.

ಇನ್ನು ಶಾಲೆಗೆ ಬಣ್ಣ ಬಳಿಸಿ‌ ಸಂಪೂರ್ಣವಾಗಿ ನವೀಕರಿಸಿದ್ದಾರೆ. ಇದರ ಜೊತೆಗೆ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್ , ಉತ್ತಮ ಶಿಕ್ಷಕರ ವ್ಯವಸ್ಥೆ ಒದಗಿಸಿದ್ದಾರೆ ರಿಷಬ್.

- Advertisement -

Latest Posts

Don't Miss