www.karnatakatv.net : ಹುಬ್ಬಳ್ಳಿ- ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಮೇಲೆ ಬಿಜೆಪಿ ಅಭ್ಯರ್ಥಿಗಳು ಧಮ್ಕಿ ಹಾಕಿ ನಾಮಪತ್ರ ವಾಪಸ್ಸು ತೆಗೆದುಕೊಳ್ಳಲು ಹಣದ ಆಮೀಷ ಒಡಿದ್ದಾರೆ ಅಂತ ಆಮ್ ಆದ್ಮಿಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಾರ್ಡ್ ನಂಬರ್ 36ರ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಕಾರ್ಪೋರೆಟರ್ ರಾಜಣ್ಣ ಕೊರವಿ ಬೆಂಬಲಿಗರು ಎಎಪಿ ಅಭ್ಯರ್ಥಿ ಮಲ್ಲಿಕಾರ್ಜುನ ಹಿರೇಮಠ ಅವರಿಗೆ ಧಮ್ಮಿ ಹಾಕಿದ್ದಾರೆ. ಇದಲ್ಲದೆ 38 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಮಜ್ಜಿಗೆ ಬೆಂಬಲಿಗರು ಎಎಪಿ ಅಭ್ಯರ್ಥಿ ಮಲ್ಲಪ್ಪ ತಡಸದ ಅವರಿಗೆ ನಾಮಪತ್ರ ವಾಪಸ್ ತಗೆದುಕೊಂಡರೆ 25 ಲಕ್ಷ ಹಣ ನೀಡೋದಾಗಿ ಕಿರುಕುಳ ನೀಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ಕೇವಲ ಒಂದೇ ವಾರ್ಡ್ ಅಲ್ಲ, ಎರಡ್ಮೂರ ವಾರ್ಡ್‌ಗಳಲ್ಲಿ ಇದೇ ಸ್ಥಿತಿ ಇದ್ದು, ಈ ಕುರಿತು ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಎಎಪಿ ನಾಯಕರು ದೂರು ನೀಡಿದ್ದಾರೆ.ಬಿಜೆಪಿ ಮುಖಂಡರಿಂದ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದ್ದು, ಬಿಜೆಪಿ ಹುಬ್ಬಳ್ಳಿ-ಧಾರವಾಡವನ್ನ ಬಿಹಾರ ಮಾಡಲು ಹೊರಟಿದೆ ಅಂತ ಇದೇ ವೇಳೆ ಸಂತೋಷ್ ತಡಸದ್ ಆರೋಪಿಸಿದರು.
ಕರ್ನಾಟಕ ಟಿವಿ ಹುಬ್ಬಳ್ಳಿ

