Thursday, June 13, 2024

Latest Posts

ಮರಾಠಿಗರ ದಿಕ್ಕು ತಪ್ಪಿಸ್ತಿದ್ಯಾ ಎಂಇಎಸ್..?

- Advertisement -

www.karnatakatv.net : ಬೆಳಗಾವಿ: ಪಾಲಿಕೆ ಚುನಾವಣೆಯಲ್ಲಿ ಸಾಕಷ್ಟು ಮಂದಿ ಮರಾಠಿ ಭಾಷಿಕ ನಾಯಕರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ರೆ ಈ ಎಲ್ಲರೂ ಎಂಇಎಸ್ ಅಭ್ಯರ್ಥಿಗಳು ಅಂತ ಪ್ರಚಾರ ಮಾಡಲಾಗ್ತಿದೆ ಅಂತ ಕರವೇ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ನಾಡಿನ ಪರವಿರೋ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ, ಎಲ್ಲಾ ಮರಾಠಿ ಭಾಷಿಕ ಅಭ್ಯರ್ಥಿಗಳು ಎಂಇಎಸ್ ಅಭ್ಯರ್ಥಿಗಳು ಅಂತ ಎಂಇಎಸ್ ನಾಯಕರು ಬಿಂಬಿಸ್ತಿದ್ದಾರೆ. ಈ ಮೂಲಕ ಮರಾಠಿ ಭಾಷಿಕರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಅಂತ ಆರೋಪಿಸಿರೋ ದೀಪಕ್,  ತಾಕತ್ತಿದ್ದರೆ ಎಂಈಎಸ್ ನಾಯಕರು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿ ಅಂತ ಎಂಇಎಸ್ ನಾಯಕರಿಗೆ ಸವಾಲ್ ಹಾಕಿದ್ದಾರೆ.

ಅಲ್ಲದೆ ಪಾಲಿಕೆ ಚುನಾವಣೆಗೆ ಸ್ಪರ್ಧಿಸೋಕೆ ಅಭ್ಯರ್ಥಿಗಳೇ ಸಿಗದೆ ಎಂಇಎಸ್ ಕಂಗಾಲಾಗಿದೆ, ಹೀಗಾಗಿ ಎಲ್ಲಾ ಮರಾಠಿ ಅಭ್ಯರ್ಥಿಗಳನ್ನೂ ತನ್ನ ಪಕ್ಷದ ಅಭ್ಯರ್ಥಿಗಳು ಅಂತ ಸುಳ್ಳು ಹೇಳಿಕೊಂಡು ಎಂಇಎಸ್ ತನ್ನ ಅಸ್ತಿತ್ವ ತೋರ್ಪಡಿಕೆಗೆ ಮುಂದಾಗಿದೆ ಅಂತ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ಮತ್ತೆ ಇದು ಮುಂದುವರಿದ್ರೆ ಕರವೇ ಸುಮ್ಮನಿರಲ್ಲ ಅಂತ ದೀಪಕ್ ಗುಡಗನಟ್ಟಿ ಎಂಇಎಸ್ ಗೆ ಎಚ್ಚರಿಕೆ ನೀಡಿದ್ರು.

ನಾಗೇಶ್ ಕುಂಬಳಿ, ಕರ್ನಾಟಕ ಟಿವಿ – ಬೆಳಗಾವಿ

- Advertisement -

Latest Posts

Don't Miss