Hubli News: ಹುಬ್ಬಳ್ಳಿ: 2021ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಡಾ ಹಗರಣ ನಡೆದಿದೆ. ಈ ಹಗರಣ ಮಾಡಿ ಯಾವ ಪುರುಷಾರ್ಥಕ್ಕೆ ಬಿಜೆಪಿ ಈಗ ಪಾದಯಾತ್ರೆ ಮಾಡಿದೆ..? ಎಂದು ಶಾಸಕ ಎನ್.ಹೆಚ್.ಕೋನರೆಡ್ಡಿ ಕಿಡಿಕಾರಿದ್ದಾರೆ.
ನವಲಗುಂದದಲ್ಲಿ ಮಾತನಾಡಿದ ಅವರು, ಸಿದ್ದರಾಮಣ್ಣನ್ನು ಮುಡಾದಲ್ಲಿ ಸಿಗಿಸುವ ಪ್ಲ್ಯಾನ್ ಬಿಜೆಪಿ ಮಾಡಿದೆ. ತಮ್ಮ ಹುಳುಕು ಎಲ್ಲಿ ಹೊರಗೆ ಬರುತ್ತೆ ಅಂತಾ ಬಿಜೆಪಿ ಸದನವನ್ನು ಸರಿಯಾಗಿ ನಡೆಸಲು ಬಿಡಲಿಲ್ಲ. ರಾಜ್ಯದ ಜನ ಸಿದ್ದರಾಮಯ್ಯವರ ಪರ ಇದ್ದಾರೆ. ಪಂಚ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಮ್ಮ ಸಿಎಂ ನಡೆದಿದ್ದಾರೆ. ಏಳನೇ ಗ್ಯಾರಂಟಿಯಾಗಿ ಏಳನೇ ವೇತನ ಆಯೋಗ ಜಾರಿ ಮಾಡಿದ್ದಾರೆ. ಸಿದ್ದರಾಮಯ್ಯವರ ಹೆಸರು ಕೂಡಿಸಲು ಹೋಗಿ ಬಿಜೆಪಿ ತನ್ನ ಚಪಡಿ ಕಲ್ಲನ್ನು ತನ್ನ ಮೇಲೆ ಹಾಕಿಕೊಂಡಿದೆ. ಅ.29ರವರೆಗೆ ನ್ಯಾಯಾಧೀಶರು ಮುಡಾದ ಯಾವುದೇ ಆದೇಶ ಹೊರಡಿಸದಂತೆ ಹೇಳಿದ್ದಾರೆ. ನಮ್ಮಗೆ ಹತ್ತು ದಿನ ರಿಲೀಫ್ ಕೊಟ್ಟಿದ್ದಾರೆ. ಸತ್ಯಕ್ಕೆ ಯಾವು ಜಯ ಇದೆ, ನಮ್ಮಗೆ ಜಯ ಸಿಗುವ ಭರವಸೆ ಇದೆ ಎಂದು ಕೋನರೆಡ್ಡಿ ಹೇಳಿದ್ದಾರೆ.
ಮುಡಾ ಹಗರಣ ಸಿಬಿಐಗೆ ನೀಡುವಂತೆ ಬಿಜೆಪಿಗರ ಆಗ್ರಹ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೋನರೆಡ್ಡಿ, ಬಿಜೆಪಿಯವರಿಗೆ ರಾಜ್ಯ ಪೊಲೀಸ ಮೇಲೆ ನಂಬಿಕೆ ಇಲ್ವಾ..? ಸಿಬಿಐಯವರ ಮೇಲೆ ಬಿಜೆಪಿಗೆ ಉಷ್ಟೋಂದು ಪ್ರೀತಿ ಯಾಕೆ..? ಇವರ ಅಧಿಕಾರದಲ್ಲಿದ್ದಾಗ ಸಿಬಿಐ ಮೇಲೆ ನಂಬಿಕೆ ಇರೋಲ್ಲಾ, ಈಗ ಅವರ ಮೇಲೆ ನಂಬಿಕೆ ಜಾಸ್ತಿ. ಸಿದ್ದರಾಮಯ್ಯ ಸರಿಸಾಟಿ ಯಾರು ಯಾರು ಇಲ್ಲ. ನಮ್ಮ ಸಿದ್ದರಾಮಯ್ಯಾ ಸಿದ್ದರಾಮಯ್ಯಾನೇ. ಜನಪರ ಆಡಳಿತ ಸಿದ್ದರಾಮಯ್ಯನವರ ನೀಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನಪರ ಆಡಳಿತ ನೀಡಬೇಕಿತ್ತು. ನಾವ್ಯಾರು ಇವರನ್ನು ಅಂದು ತಡೆದಿರಲಿಲ್ಲ ಎಂದು ಕೋನರೆಡ್ಡಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಲೇಬೇಕು ಎಂಬ ಬಿಜೆಪಿ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಕೋನರೆಡ್ಡಿ, ನಮ್ಮ ಸಿದ್ದರಾಮಯ್ಯವರು ರಾಜೀನಾಮೆ ನೀಡುವು ಪ್ರಶ್ನೆಯೇ ಇಲ್ಲ. 136 ಜನ ಎಂಎಲ್ಎ ಗಳು ಈಗಾಗಲೇ ತೀರ್ಮಾನ ಮಾಡಿದ್ದೇವೆ. ಅವರು ರಾಜೀನಾಮ ನೀಡುವುದು ಬೇಡಾ ಎಲ್ಲರು ತೀಳಿಸಿದ್ದಾರೆ. ನಮ್ಮ ಪಕ್ಷದ ಸಚಿವರು ಶಾಸಕರು ಎಲ್ಲರು ನಾವು ಸಿಎಂ ಬೆನ್ನಿಗೆ ಇದ್ದೇವೆ. ಬರುವ ಗುರುವಾರ ಸಿಎಲ್ಪಿ ಸಭೆ ನಡೆಯಲಿದೆ. ಸಭೆಯಲ್ಲಿ ಎಲ್ಲರು ಒಮ್ಮತದ ತೀರ್ಮಾಣ ಮಾಡಿ ರೆಸೂಲೇಶನ್ ಮಾಡುತ್ತೇವೆ. ನಮ್ಮಲ್ಲಿ ಒಡಕು ಬಿನ್ನಮತ್ತ ಯಾವುದಕ್ಕೂ ಅವಕಾಶವಿಲ್ಲ. ಎಲ್ಲರ ಸ್ಟ್ಯಾಂಡ್ ಒಂದೇ ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಬಿಜೆಪಿಯವರಿಗೆ ಆಪರೇಷನ್ ಕಮಲ ಮಾಡಿ ರೂಡಿ ಇತ್ತು. ಈಗ ಅದೂ ಆಗೋದಿಲ್ಲಾ ಅನ್ನೋದು ಗೊತ್ತಾಗಿ ಈ ದಾರಿ ಹಿಡಿದಿದ್ದಾರೆ. ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳ ಆಳ್ವಿಕೆ ತರೋ ಯತ್ನ ಬಿಜೆಪಿ ಮಾಡುತ್ತಿದೆ. ರಾಷ್ಟ್ರಪತಿಗಳ ಆಳ್ವಿಕೆ ತರುವುದು ಅಷ್ಟು ಸುಲಭವಲ್ಲ. ಬೊಮ್ಮಾಯಿ ಅವರ ನಂತರ ಯಾವ ರಾಜ್ಯದಲ್ಲಿ ಸಾಧ್ಯವಾಗಿದೆ..? ನಮ್ಮ ಸಿಎಂ ಬೆನ್ನಿಗೆ ಕೆಪಿಸಿಸಿ ಹಾಗೂ ಎಐಸಿಸಿ ಸೇರಿಪಕ್ಷದ ಕಾರ್ಯಕರ್ತರಿದ್ದಾರೆ ಎಂದು ಕೋನರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ ನ ವಿಪ ಸದಸ್ಯ ಐವನ್ಬ ಡಿಸೋಜಾ ಬಾಂಗ್ಲಾದೇಶ ಮಾದರಿಯಲ್ಲಿ ರಾಜ್ಯಪಾಲರ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ನುಗ್ಗುತ್ತಾರೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೋನರೆಡ್ಡಿ, ಐವನ್ ಡಿಸೋಜ್ ಅವರ ಹೇಳಿಕೆ ನಾನು ಗಮನಿಸಿಲ್ಲ. ಅವರು ಯಾಕೆ ಹಾಗೇ ಹೇಳಿದ್ದಾರೋ ನಮ್ಮಗು ಗೊತ್ತಿಲ್ಲ. ನಾನು ಹಾಗೇ ಹೇಳುವುದಿಲ್ಲ, ರಾಷ್ಟ್ರಪತಿಗಳು ರಾಜ್ಯಪಾಲರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮನವಿ ಮಾಡುತ್ತೇನೆ. ಈಗಾಗಲೇ ಮುಡಾ ಹಗರಣ ತಬಿಖೆ ಪ್ರಗತಿಯಲ್ಲಿದೆ. ಸಿಎಂ ಅವರು ಮುಡಾ ತನಿಖೆಯನ್ನು ನಿವೃತ್ತ ನ್ಯಾಯಾಧೀಶ ಹೆಗಲಿಗೆ ನೀಡಿದ್ದಾರೆ. ಹಿಂದನ ಸಿಎಂಗಳ ತಮ್ಮ ಮೇಲೆ ಆರೋಪ ಬಂದಾಗ ನ್ಯಾಯಾಂಗ ತನಿಖೆ ಮಾಡಿಸಿಲ್ಲ. ಆದರೆ ಸಿದ್ದರಾಮಯ್ಯನವರು ಹಾಗಲ್ಲ. ತಮ್ಮ ಮೇಲೆ ಆರೋಪ ಬಂದ ತಕ್ಷಣ ನ್ಯಾಯಾಂಗ ತನಿಖೆಗೆ ನೀಡಿದ್ಧಾರೆ ಎಂದು ಹೇಳಿದ್ದಾರೆ.




