Wednesday, May 29, 2024

Latest Posts

ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದು, ಸಾವನ್ನ ಹಬ್ಬವನ್ನಾಗಿ ನೋಡುತ್ತಿದೆ: ಸಂತೋಷ್ ಲಾಡ್

- Advertisement -

Hubli News: ಹುಬ್ಬಳ್ಳಿ: ಸಿಎಂ ಹಾಗೂ ಡಿಸಿಎಂ ಸೂಚನೆ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಚುನಾವಣೆ ಕಣದಿಂದ ಹಿಂದಕ್ಕೆ ಸರಿಸಲು ಮನವೊಲಿಸುವ ಪ್ರಯತ್ನ ಫಲ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಅವರು ನಮ್ಮ ಮನವಿಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರನ್ನು ಬೆಂಬಲ ಕೊಡಿ ಎಂದು ಕೇಳಿಲ್ಲ, ಅವರು ಯಾರಿಗೆ ಬೆಂಬಲ ಕೊಡುತ್ತಾರೆಂಬುದು ತಿಳಿದಿಲ್ಲ, ಅವರಿಂದ ನಿರೀಕ್ಷೆ ಮಾಡಿಲ್ಲ. ಸ್ವಾಮೀಜಿ ಕಣದಿಂದ ಹಿಂದೆ ಸರಿದಿದ್ದರ ಲಾಭ ನಷ್ಟ ಚುನಾವಣೆ ಬಳಿಕವೇ ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್ ಸ್ವಾಮೀಜಿ ಮೇಲೆ ಅವಲಂಬನೆ ಆಗಿಲ್ಲ, ಸ್ವಾಮೀಜಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಆದರೆ ಅವರ ನಿರ್ಧಾರ ಏನೆಂಬುದು ನಮಗೆ ತಿಳಿಸಿಲ್ಲ ಎಂದು ಹೇಳಿದರು.

ನೇಹಾ ಪ್ರಕರಣದಲ್ಲಿ ಮುಸ್ಲಿಂ ಸಮೂದಾಯ ಅವರ ಕುಟುಂಬದ ಪರವಾಗಿ ನಿಂತಿದೆ. ಇದಕ್ಕಾಗಿ ಅವರು ಅಂಗಡಿಮುಂಗಟ್ಟು ಕೂಡಾ ಬಂದ್ ಮಾಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದು, ಸಾವನ್ನ ಹಬ್ಬವನ್ನಾಗಿ ನೋಡುತ್ತಿದೆ ಎಂದರು.

ನಿರಂಜನಯ್ಯ ಹಿರೇಮಠ ಅವರ ಮನೆಯನ್ನು ಬಿಜೆಪಿಯವರು ಪ್ರಚಾರದ ಸರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಎಷ್ಟು ಜನ ಹಿಂದೂಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿಲ್ಲ, ಅವರ ಬಗ್ಗೆ ಯಾಕೆ ಮಾಡನಾಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನಾಲಾಯಕ್ ಎಂಬ ಪದ ಬಳಸಿದ ಬಿಜೆಪಿ ಅಧ್ಯಕ್ಷ ವಿ.ವೈ.ವಿಜಯೇಂದ್ರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವ ಸಂತೋಷ ಲಾಡ್, ನನ್ನ ನಾಲಾಯಕ್ ಎನ್ನುವುದಕ್ಕೆ ನೀವು ಯಾರು? ನನ್ನನ್ನು ಬಿಡಿ ಸಿಎಂ ಅವರಿಗೆ ನಾಲಾಯಕ್ ಎಂದಿರುವುದು ಅಕ್ಷಮ್ಯ ಆ ಮಾತನ್ನು ವಾಪಾಸ್ ತೆಗೆದುಕೊಳ್ಳಬೇಕು. ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕೆಂದು ತಾಕೀತು ಮಾಡಿದರು.

ನೀವು ಮೊದಲ ಬಾರಿ ಶಾಸಕರಾಗಿದ್ದೀರ, ನೀವು ಅಧ್ಯಕ್ಷರಾಗಿದ್ದು ತಂದೆಯಿಂದಲೇ ಹೊರತು, ನಿಮ್ಮ ಕೊಡುಗೆ ಏನಿಲ್ಲ, ನೀವು ಯಡಿಯೂರಪ್ಪ ಎಂಬ ಹೆಸರಿನಲ್ಲಿದ್ದೀರಿ, ಆ ನಾಮಾಂಕಿತ ಬಿಟ್ಟರೆ ನಿಮಗೆ ಯಾವುದೇ ಗೌರವವಿಲ್ಲ, ನಿಮ್ಮ ತಂದೆ ನಡೆದು ಬಂದ ಹಾದಿಯನ್ನು ಒಂದು ಸಾರಿ ಗಮನಿಸಿ ಎಂದು ಕುಟುಕಿದರು.

ನೇಹಾ ಪ್ರಕರಣ ಅನಿರೀಕ್ಷಿತ ಆಗಿದ್ದು, ಕಾನೂನು ಏನ ಕ್ರಮ ಕೈಗೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ. ನಿರಂಜನ ಹಿರೇಮಠ ಅವರೇ ಮಗಳ ಸಾವಿನಲ್ಲಿ ರಾಜಕಾರಣ ಮಾಡಬೇಡಿ, ನಿಮಗೆ ಆಗಿರುವ ದುಃಖ ನಮಗೂ ಆಗಿದೆ ಎಂದರು.

ಗರಗದಲ್ಲೂ ಸ್ವಯಂ ಪ್ರೇರಣೆಯ ಬಂದ್: ನೇಹಾ ಕುಟುಂಬದ ಪರ ನಿಂತ ಹಿಂದೂ ಕಾರ್ಯಕರ್ತರು

ನಾಮಪತ್ರ ವಾಪಸ್ ಪಡೆದಿದ್ದೇನೆ, ಆದ್ರೆ ಧರ್ಮಯುದ್ಧದಿಂದ ಹಿಂದೆ ಸರಿಯುವುದಿಲ್ಲ: ದಿಂಗಾಲೇಶ್ವರ

ಮುಸ್ಲಿಂ ವ್ಯಾಪಾರಸ್ಥರಿಂದ ಹುಬ್ಬಳ್ಳಿ ಬಂದ್: ಬಿಕೋ ಎನ್ನುತ್ತಿದೆ ಹುಬ್ಬಳ್ಳಿಯ ಮಾರ್ಕೆಟ್..!

- Advertisement -

Latest Posts

Don't Miss