Tuesday, May 21, 2024

Latest Posts

ಗರಗದಲ್ಲೂ ಸ್ವಯಂ ಪ್ರೇರಣೆಯ ಬಂದ್: ನೇಹಾ ಕುಟುಂಬದ ಪರ ನಿಂತ ಹಿಂದೂ ಕಾರ್ಯಕರ್ತರು

- Advertisement -

Dharwad News: ಧಾರವಾಡ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ, ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲೂ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ನೇಹಾ ಕುಟುಂಬದ ಬೆನ್ನಿಗೆ ನಿಂತಿದ್ದಾರೆ.

ಗರಗ ಗ್ರಾಮದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗ್ರಾಮದಲ್ಲಿ ನೇಹಾ ಭಾವಚಿತ್ರ ಮೆರವಣಿಗೆ ಮಾಡಿ ಕೊನೆಗೆ ಗ್ರಾಮದ ಬಸ್ ನಿಲ್ದಾಣದ ವೃತ್ತದಲ್ಲಿ ನೇಹಾಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಮಾಜಿ ಶಾಸಕ ಅಮೃತ ದೇಸಾಯಿ ಕೂಡ ಈ ಮೆರವಣಿಗೆಯಲ್ಲಿ ಪಾಲ್ಗೊಂಡು, ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ. ನೇಹಾಳನ್ನು ಕ್ರೂರವಾಗಿ ಹತ್ಯೆ ಮಾಡಿದ ಫಯಾಜ್‌ನಿಗೆ ಉಗ್ರ ಶಿಕ್ಷೆಯಾಗಬೇಕು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಬೆಳಿಗ್ಗೆಯಿಂದಲೇ ಗರಗ ಗ್ರಾಮದ ಅಂಗಡಿಕಾರರು ಈ ಮೆರವಣಿಗೆಗೆ ಬೆಂಬಲಿಸಿ ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ಮುಸ್ಲಿಂ ವ್ಯಾಪಾರಸ್ಥರಿಂದ ಹುಬ್ಬಳ್ಳಿ ಬಂದ್: ಬಿಕೋ ಎನ್ನುತ್ತಿದೆ ಹುಬ್ಬಳ್ಳಿಯ ಮಾರ್ಕೆಟ್..!

ನೇಹಾ ಕೊಲೆಗಾರರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ: ಸ್ವಪಕ್ಷದ ಕಾರ್ಪೊರೇಟರ್ನಿಂದಲೇ ಆರೋಪ

ನೇಹಾ ಹತ್ಯೆ ಖಂಡಿಸಿ ಬಿಜೆಪಿ Protest: ಸಿದ್ರಾಮುಲ್ಲಾಖಾನ್‌ಗೆ ಧಿಕ್ಕಾರ ಅಂದ ಪ್ರತಿಭಟನಾಕಾರರು..

- Advertisement -

Latest Posts

Don't Miss