state news
ಸಕಲೇಶಪುರ(ಮಾ.1): ಮಂಗಳವಾರ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದ ಅವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಜಾದ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯದಲ್ಲಿ ಕಣ್ಣು, ಕಿವಿ, ಮೂಗಿಲ್ಲದ ಸರ್ಕಾರ ಆಡಳಿತ ನಡೆಸುತ್ತಿದೆ. ಬಿಜೆಪಿ ದುರಾಡಳಿತದ ಪರಿಣಾಮ ಬಡ, ಮದ್ಯಮವರ್ಗ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಿದ ಎಲ್ಲ ಯೋಜನೆಗಳನ್ನು ಮೊಟಕುಗೊಳಿಸುವ ಮೂಲಕ ಬಡವರ ವಿರೋಧಿ ಧೋರಣೆಗಳನ್ನು ಅನುಸರಿಸಿಕೊಂಡು ಬರುತ್ತಿದೆ ಎಂದರು.
ಆದ್ದರಿಂದ, ಈ ದುಷ್ಟ ಸರ್ಕಾರದ ಸಂಹಾರವಾಗ ಬೇಕಾದರೆ ಜನರು ಜಾಗೃತರಾಗುವ ಅಗತ್ಯವಿದೆ. ದೇವರು ವರ, ಶಾಪ ಯಾವುದನ್ನು ನೀಡುವುದಿಲ್ಲ ಅವಕಾಶ ಮಾತ್ರ ಕಲ್ಪಿಸುತ್ತಾನೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಕ್ಷೇತ್ರದ ಮತದಾರರು ಬಳಸಿಕೊಳ್ಳ ಬೇಕು. ಬಿಜೆಪಿ ನಾಯಕರು ಈಗ ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ಮೃದುವಾಗಿ ಮಾತನಾಡುತ್ತಿದೆ. ಅವರು ಅಧಿಕಾರ ನಡೆಸುತ್ತಿದ್ದ ವೇಳೆ ಬಿಜೆಪಿ ವರಿಷ್ಠರು ಅವರಿಗೆ ನೀಡಿದ ಕಿರುಕುಳವನ್ನು ಜನರು ಮರೆಯಬಾರದು.
‘ಕರ್ನಾಟಕ ಸರ್ಕಾರ ಇಡಿ ದೇಶದಲ್ಲಿ ಭ್ರಷ್ಟಚಾರದ ಕೇಂದ್ರ ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಅಮಿತ್ ಷಾ ಸಹ ರಾಜ್ಯದಲ್ಲಿ ಭಷ್ಟಚಾರ ನಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಈಶ್ವರಪ್ಪ ಎಂಬ ಮಂತ್ರಿ ತನ್ನ ಕಾರ್ಯಕರ್ತನ ಹತ್ತಿರವೆ ಹಣ ಕೇಳಿ ಕಾರ್ಯಕರ್ತ ನೇಣು ಹಾಕಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಸಿದ್ದನ್ನು ಜನರು ಗಮನಿಸಿದ್ದಾರೆ. ಇನ್ನೂ ಎಚ್.ಡಿ ಕುಮಾರಸ್ವಾಮಿ ಕುಟುಂಬದೊಳಗಿನ ಕಲಹದಲ್ಲಿ ಸಿಲುಕಿ ಹೈರಾಣಾಗಿದ್ದರೆ ಅವರಿಗೆ ಸದ್ಯ ವಿಶ್ರಾಂತಿಯ ಅಗತ್ಯವಿದೆ. ಹಾಸನಕ್ಕೆ ರೇವಣ್ಣನೇ ಸುಪ್ರೀಮ್ ಇವರ ಅಂದ ದರ್ಭಾರ್ ತೊಲಗಿಸಲು ಈಗ ಕಾಲಕೂಡಿ ಬಂದಿದೆ ಎಂದರು. ನಾಡಿನ ಜನರ ನೋವು ಕೇಳುವ ಉದ್ದೇಶದಿಂದ ಪ್ರಜಾಧ್ವನಿ ಯಾತ್ರೆ ನಡೆಸುವ ವೇಳೆ ರಾಜ್ಯದ ಎಲ್ಲೇಡೆ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಬೆಂಬಲಿಸುತ್ತಿರುವುದು ಸ್ವಷ್ಟವಾಗಿ ಗೋಚರಿಸುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್,10 ಕೆ.ಜಿ ಪುಕ್ಕಟೆ ಅಕ್ಕಿ, ಮಹಿಳೆಯರಿಗೆ ತಿಂಗಳಿಗೆ 2000 ಸಾವಿರ ಹಣ ಖಚಿತವಾಗಿ ನೀಡಲಾಗುವುದು. ಈ ಭರವಸೆಗಳನ್ನು ಈಡೇರಿಸದಿದ್ದರೆ ಮುಂದೆ ಎಂದು ನಿಮ್ಮೇದರು ಬರುವುದೆ ಇಲ್ಲ.
ನುಡಿದಂತೆ ನಡೆಯುವುದು ಕಾಂಗ್ರೆಸ್ ಮಾತ್ರ. ಹಿಂದೇ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು. ಬಿಜೆಪಿ ಹಿಂದೂ ಮುಸ್ಲಿಂ ಎಂದು ಸಮಾಜ ಇಬ್ಬಾಗ ಮಾಡಲು ಹೋರಟರೆ. ನಾವು ಎಲ್ಲ ಸಮೂದಾಯಗಳು ಒಂದು ಎನ್ನುವ ಮೂಲಕ ಸಮಾಜದಲ್ಲಿ ಸ್ವಾಸ್ಥö್ಯ ಕಾಪಾಡುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದೆವೆ. ಮುಸಲ್ಮಾನರೇನು ಮನುಷ್ಯರಲ್ಲವ ಯತ್ನಾಳ ಮುಸ್ಲಿಂರ ಮತವೇ ಬೇಡ ಎನ್ನುತ್ತಾರಲ್ಲ ಇವರು ದೇಶದ ಪ್ರಜೆಗಳಲ್ಲವ ಎಂದರು. ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದ ಕಾರಣ ನಮ್ಮ ಆಡಳಿತದ ಅವಧಿಯಲ್ಲಿ ಅನುಷ್ಠಾನಕ್ಕೆ ತಂದ ಕಾರ್ಯಕ್ರಮಗಳನ್ನು ಇಲ್ಲಿ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ.
ಮಾಜಿ ಸಂಸದ ದ್ರುವನಾರಾಯಣ ಮಾತನಾಡಿ, ಸಕಲೇಶಪುರ-ಆಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ವಿಫಲವಾಗಿದೆ. ನಮಗೂ ಒಮ್ಮೆ ಅವಕಾಶ ನೀಡಿ. ಪಕ್ಷ ಅಧಿಕಾರದಲ್ಲಿದ್ದ ವೇಳೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದೆವೆ. ಅಭಿವೃದ್ದಿಯನ್ನೆ ಮಾನದಂಡವನ್ನಾಗಿ ಇಟ್ಟುಕೊಂಡು ಕೆಲಸಮಾಡಿರುವುದು ಕಾಂಗ್ರೆಸ್ ಪಕ್ಷ. ನಮಗೆ ಜಾತಿ,ಮತದ ಬಗ್ಗೆ ನಂಬಿಕೆ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ ವೇಳೆ ದಿನದಲಿತರ ಉದ್ದಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದು 165 ಭರವಸೆ ನೀಡಿ ಸಂಪೂರ್ಣ ಭರವಸೆಗಳನ್ನು ಈಡೇರಿಸಿದ ಇತಿಹಾಸದಲ್ಲಿ ಮೊದಲ ಸರ್ಕಾರ ನಮ್ಮದು. ಆದ್ದರಿಂದ, ನಮಗೂಮ್ಮೆ ಅವಕಾಶ ನೀಡುವ ಮೂಲಕ ಅಭಿವೃದ್ದಿ ಎಂದರೇನೆAದು ತೊರಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.