Political News :ಬಿಜೆಪಿ ನಾಯಕರು ಸದನದ ಬಾವಿಗಿಳಿದು ವಿಧೇಯಕ ಪತ್ರ ಹಾಗು ಬಿಲ್ ಗಳನ್ನು ಹರಿದು ಡೆಪ್ಯುಟಿ ಸ್ಪೀಕರ್ ಮೇಲೆ ಬಿಸಾಕಿದ್ದರು. ಈ ಕಾರಣದಿಂದ ಬಿಜೆಪಿ ನಾಯಕರ 10 ಹೆಸರುಗಳನ್ನು ನಮೂದಿಸಿ ಸ್ಪೀಕರ್ ಯು.ಟಿ ಖಾದರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈ ಕಾರಣದಿಂದ ಜುಲೈ 20 ಗುರುವಾರ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ನಿರತರಾದರು.
ಪ್ರತಿಭಟನೆ ನಂತರ ಬಿಜೆಪಿ ನಾಯುಕರು ರಾಜ್ಯಪಾಲರಿಗೆ ಸರಕಾರದ ವಿರುದ್ಧ ದೂರು ನೀಡಲು ಮುಂದಾಗಿ,. ಪಾದಯಾತ್ರೆಯ ಮೂಲಕ ವಿಧಾನ ಸೌಧದಿಂದ ರಾಜ ಭವನಕ್ಕೆ ತೆರಳಿ ಅಲ್ಲಿ ರಾಜ್ಯ ಪಾಲರಿಗೆ ದೂರನ್ನು ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಟ್ಲರ್ ಆಡಳಿತ, ಪ್ರತಿಪಕ್ಷದ ಧ್ವನಿಯನ್ನು ಕುಗ್ಗಿಸುವ ನಿರ್ಧಾರಗಳನ್ನು ಖಂಡಿಸಿ, ಜನರ ಧ್ವನಿಯಾಗಿ ಸದನದಲ್ಲಿ ಪ್ರಶ್ನಿಸುತ್ತಿದ್ದ ಶಾಸಕರನ್ನು ಅಮಾನತುಗೊಳಿಸಿರುವ ಬಗ್ಗೆ ಹಾಗೂ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಉಲ್ಲೇಖಿಸಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿತು.
CT Ravi: ಸಭಾಧ್ಯಕ್ಷರ ಏಕಪಕ್ಷೀಯ ವರ್ತನೆ ಕುರಿತು ಗವರ್ನರ್ ರಿಗೆ ವಿವರ
DK Shivakumar ವಿಧಾನಸೌಧದ ಆವರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ: