Thursday, July 31, 2025

Latest Posts

ದ್ರಾವಿಡ್ ಮನೆಗೆ ಬಿಜೆಪಿ ನಾಯಕರ ದಂಡು

- Advertisement -

ರಾಷ್ಟ್ರೀಯ ಐಕ್ಯತಾ ಅಭಿಯಾನ ಜನಸಂಪರ್ಕ ಹಿನ್ನೆಲೆಯಲ್ಲಿ ಕನ್ನಡಿಗ, “ಭಾರತದ ಗೋಡೆ” ಎಂದೇ ಖ್ಯಾತಿಯಾದ ಭಾರತದ ಹೆಮ್ಮೆಯ ಕ್ರಿಕೆಟ್ ಆಟಗಾರ ಶ್ರೀ ರಾಹುಲ್ ದ್ರಾವಿಡ್ ಮನೆಗೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿತ್ತು. ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ 370 ನೇ ವಿಧಿ ರದ್ಧತಿ ಕುರಿತು, ಜಮ್ಮು-ಕಾಶ್ಮೀರ ಅಭಿವೃದ್ಧಿ ಕುರಿತಂತೆ ಅಭಿಪ್ರಾಯ ಹಾಗೂ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ, ರಾಜ್ಯ ಅಧ್ಯಕ್ಷರಾದ ಶ್ರೀ ನಳೀನ ಕುಮಾರ ಕಟೀಲ, ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದಗೌಡ, ಉಸ್ತುವಾರಿ ಶ್ರೀ ಮುರುಳೀಧರ ರಾವ್ ಸೇರಿದಂತೆ ಮತ್ತೀತರು ಉಪಸ್ಥಿತರಿದ್ದರು.

- Advertisement -

Latest Posts

Don't Miss