Wednesday, October 15, 2025

Latest Posts

ತೂಕ ಇಳಿಸಲು ಆಪರೇಷನ್ ಮೊರೆ ಹೋಗಿ ಜೀವ ಕಳೆದುಕೊಂಡ ಬಿಜೆಪಿ ನಾಯಕನ ಸಹೋದರಿ

- Advertisement -

Lucknow: ಲಖ್ನೋನಲ್ಲಿ ರಾಜಕೀಯ ವ್ಯಕ್ತಿಯ ಸಹೋದರಿಯೋರ್ವಳು ತೂಕ ಇಳಿಸಲು ಆಪರೇಷನ್ ಆಸರೆ ಪಡೆದು, ಜೀವ ಕಳೆದುಕ“ಂಡಿದ್ದಾಳೆ.

ಇಲ್ಲಿನ ನಿವಾಸಿ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಅರವಿಂದ್ ಮಾರ್ವಾಡಿ ಎಂಬುವವರ ಸಹೋದರಿಯಾಗಿದ್ದ ರಜನಿ ಎಂಬಾಕೆ ಉತ್ತರಪ್ರದೇಶದ ಮೀರತ್‌ನ ನ್ಯೂಟಿಮಾ ಎಂಬ ಆಸ್ಪತ್ರೆಯಲ್ಲಿ ತೂಕ ಇಳಿಸುವ ಆಪರೇಷನ್ ಮಾಡಿಸಿಕ“ಂಡಿದ್ದಾರೆ. ಆದರೆ ಈ ಆಪರೇಷನ್ ನಡೆಸಿದ ವೈದ್ಯ ರಿಷಿ ಸಿಂಘಾಲ್ ನಿರ್ಲಕ್ಷ್ಯದಿಂದ ರಜನಿ ಸಾವನ್ನಪ್ಪಿದ್ದಾಳೆಂದು ಆಕೆಯ ಮನೆಯವರು ಆರೋಪಿಸಿದ್ದಾರೆ.

ಘಟನೆ ಬಳಿಕ ಪೋಲೀಸ್ ಸ್ಟೇಷನ್ ಬಳಿ ರಜನಿ ಮನೆಯವರು, ರಾಜಕಾರಣಿಗಳು ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದು, ರಜನಿ ಸಾವಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಿಸಿದ್ದು, ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗ“ಂಡಿದ್ದಾರೆ.

- Advertisement -

Latest Posts

Don't Miss