Sunday, March 3, 2024

Latest Posts

‘ಕುದುರೆ ವ್ಯಾಪಾರ ಮಾಡ್ತಿರೋ ಸಿಎಂ ರಾಜೀನಾಮೆ ನೀಡಬೇಕು’- ಶಾಸಕ ಬೊಮ್ಮಾಯಿ

- Advertisement -

ಬೆಂಗಳೂರು: ಶಾಸಕರ ರಾಜೀನಾಮೆಯಿಂದಾಗಿ ಅಭದ್ರಗೊಂಡಿರೋ ಮೈತ್ರಿ ಸರ್ಕಾರ ನೈತಿಕ ಬಲ ಕಳೆದುಕೊಂಡಿದೆ. ಅನುಭವಿ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡೋ ಮೂಲಕ ಕುದುರೆ ವ್ಯಾಪಾರ ಮಾಡ್ತಿರೋ ಸಿಎಂ ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು ಅಂತ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ಈಗಾಗಲೇ ರಾಜೀನಾಮೆ ನೀಡಿರುವವರೆಲ್ಲರೂ ಅನುಭವಿ ಶಾಸಕರು. ಅವರೆಲ್ಲರಿಗೂ ಈಗ ಸಚಿವ ಸ್ಥಾನ. ಆಫರ್ ನೀಡಲು ಯತ್ನಿಸುತ್ತಿದ್ದಾರೆ. ಈ ಮೂಲಕ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ. ಅಲ್ಲದೆ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಬೆದರಿಕೆ ಹಾಕುತ್ತಿದ್ದಾರೆ. ಆದ್ರೆ ಸ್ವಯಂ ಪ್ರೇರಿತ ರಾಜೀನಾಮೆಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ಪ್ರಜಾಪ್ರಭುತ್ವ ಮಾರ್ಗವಾಗಿ ಕೂಡಲೇ ರಾಜೀನಾಮೆ ನೀಡಬೇಕು ಅಂತ ಬೊಮ್ಮಾಯಿ ಒತ್ತಾಯಿಸಿದ್ರು.

ಯಾರಾಗ್ತಾರೆ ಮುಂದಿನ ಸಿಎಂ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Q0csvcKK3qc
- Advertisement -

Latest Posts

Don't Miss