Wednesday, December 11, 2024

Coalition Government

ಕೊನೇ ಕ್ಷಣದಲ್ಲಿ ರಾಜ್ಯದ ಜನತೆಗೆ ಕುಮಾರಸ್ವಾಮಿ ಗಿಫ್ಟ್..!

ಬೆಂಗಳೂರು: ಸರ್ಕಾರ ಪತನವಾಗಿರುವ ಬೆನ್ನಲ್ಲೇ ಹಂಗಾಮಿ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರೋ ಕುಮಾರಸ್ವಾಮಿ ಇದೀಗ ತಮ್ಮ ಸ್ಥಾನದಿಂದ ಕೆಳೆಗಿಳಿಯುವ ಕೊನೇ ಕ್ಷಣದಲ್ಲಿ ರಾಜ್ಯದ ಜನರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಸಿಎಂ ತಮ್ಮ ಆಡಳಿತಾವಧಿಯ ಕೊನೆಯ ಅಧಿಸೂಚನೆ ಹೊರಡಿಸಿದ್ದಾರೆ. ರಾಜ್ಯದ ಜನರಿಗೆ ಗಿಫ್ಟ್ ನೀಡ್ತೇನೆ ಅಂತ ಅಧಿಕಾರಕ್ಕೇರಿದ ಆರಂಭದ ದಿನಗಳಲ್ಲಿ ಹೇಳಿದ್ದ...

‘ಎಲ್ಲಾ ಮುಗಿದ ಮೇಲೆ ಇನ್ಯಾವ ಮೈತ್ರಿ’- ಕಾಂಗ್ರೆಸ್ ಮುಖಂಡರ ಬೇಸರ

ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಇದೀಗ ಸಮ್ಮಿಶ್ರ ಸರ್ಕಾರ ಪತನವಾಗಿರೋ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಬೇಕೋ ಬೇಡವೋ ಎನ್ನುವ ಬಗ್ಗೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸ್ತಿದ್ರೆ, ಕೆಲವರು ಎಲ್ಲಾ ಮುಗಿದ ಮೇಲೆ ಇನ್ಯಾವ ಮೈತ್ರಿ ಅಂತ ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ...

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಎದೆನೋವಿಗೆ ಮುಂಬೈನಲ್ಲಿ ಚಿಕಿತ್ಸೆ ಪಡೆದ ಕೈ ಶಾಸಕ ಶ್ರೀಮಂತ್ ಪಾಟೀಲ್..!

ಬೆಂಗಳೂರು: ನಿನ್ನೆ ರಾತ್ರಿವರೆಗೂ ಕಾಂಗ್ರೆಸ್ ನಾಯಕರಿಗೆ ಸಾಥ್ ನೀಡಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ದಿಢೀರನೆ ಮುಂಬೈ ಸೇರಿದ್ದಾರೆ. ಶ್ರೀಮಂತ್ ಪಾಟೀಲ್ ರವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ವಿಶ್ವಾಸಮತಕ್ಕೆ ಹಾಜರಾಗಲಿದ್ದ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇಂದು ಮುಂಬೈನಲ್ಲಿ...

ನಂಬರ್ ಗೇಮ್ ನಿಂದ ಹೊರಗುಳಿದ ಶಾಸಕರ್ಯಾರು…?

ಬೆಂಗಳೂರು: ಇಂದಿನ ವಿಶ್ವಾಸಮತ ಯಾಚನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಗೈರಾಗಿದ್ದಾರೆ. ಈ ಮೂಲಕ ತಾವು ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರ ಬದಲಿಸಲ್ಲ ಅನ್ನೋ ಮಾತಿಗೆ ಬದ್ಧರಾಗಿದ್ದಾರೆ. ಆದ್ರೆ ಕೊನೆ ಕ್ಷಣದಲ್ಲಿ ಅತೃಪ್ತರು ಮನಸ್ಸು ಬದಲಿಸಿ ಬರುತ್ತಾರೇನೋ ಎಂಬ ವಿಶ್ವಾಸದಲ್ಲಿದ್ದ ದೋಸ್ತಿಗಳಿಗೆ ನಿರಾಶೆಯಾಗಿದೆ. ಇದೀಗ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಂಡನೆಯಾಗುತ್ತಿದ್ದು, ಇನ್ನೇನು ಕೆಲವೇ...

ವಿಧಾನಸಭೆಯಲ್ಲಿಂದು ವಿಶ್ವಾಸಮತ ಯಾಚನೆ- ನಂಬರ್ ಗೇಮ್ ನಲ್ಲಿ ಗೆಲ್ಲೋದ್ಯಾರು..?

ಬೆಂಗಳೂರು: ಇಂದು ಸರ್ಕಾರದ ಅಳಿವು ಉಳಿವಿಗಾಗಿ ನಡೆಯುವ ವಿಶ್ವಾಸಮತಯಾಚನೆಗೆ ದೇಶವೇ ಕಾತುರದಿಂದ ಕಾಯುತ್ತಿದೆ. ಒಂದು ವರ್ಷಗಳ ಕಾಲ ಸರಾಗವಾಗಿ ಆಡಳಿತ ನಡೆಸಿದ್ದ ಮೈತ್ರಿ ಸರ್ಕಾರಕ್ಕೆ ಇಂದು ಪತನಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು, ಬಿಜೆಪಿ ಗೆಲುವು ನಮ್ಮದೇ ಅನ್ನೋ ವಿಶ್ವಾಸದಲ್ಲಿದೆ. ವಿಧಾನಸಭೆಯಲ್ಲಿ ಇವತ್ತು ಸಿಎಂ ಎಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿದ್ದು, ಕಾಂಗ್ರೆಸ್ -ಜೆಡಿಎಸ್...

ಸುಪ್ರೀಂಕೋರ್ಟ್ ತೀರ್ಪಿಗೆ ದಿನೇಶ್ ಗುಂಡೂರಾವ್ ಅಸಮಾಧಾನ

ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತು ಇಂದು ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಟ್ವೀಟ್ ಮಾಡಿರುವ ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅತೃಪ್ತ ಶಾಸಕರು ವಿಪ್ ಉಲ್ಲಂಘನೆ ಮಾಡಲು ಸಹಕಾರಿಯಾಗಲೆಂದೇ ಸುಪ್ರೀಂ ಕೋರ್ಟ್ ಆದೇಶ ನೀಡಿದಂತಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ. ಬಳಿಕ ಮತ್ತೊಂದು ಟ್ವೀಟ್...

‘ನನಗೆ ಯಾವ ನಿಂಬೆಹಣ್ಣೂ ಬೇಡ- ತಂದೆ ತಾಯಿ ಆಶೀರ್ವಾದ ಸಾಕು’- ಸಚಿವ ರೇವಣ್ಣ

ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟಿಗೆ ತಾವು ಕಾರಣ ಅನ್ನೋ ಆರೋಪಕ್ಕೆ ಇಂದು ಸಚಿವ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಕೊಟ್ಟಿರುವ ಕೆಲಸವನ್ನು ನಾನು ಮಾಡ್ತಿದ್ದೇನೆ ಹೊರತು ಬೇರೆ ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಅಂತ ಹೇಳಿದರು. ಅಲ್ಲದೆ ತಮ್ಮ ಮೇಲೆ ದೈವ ಹಾಗೂ ತಂದೆ ತಾಯಿ ಆಶೀರ್ವಾದ ಇದೆ ಹೀಗಾಗಿ ನನಗೆ ಯಾವ ನಿಂಬೆಹಣ್ಣೂ...

‘ವಿಶ್ವಾಸಮತಕ್ಕೆ ನಾವು ಹಾಜರಾಗಲ್ಲ’- ಅತೃಪ್ತರ ಖಡಕ್ ಸಂದೇಶ…!

ನವದೆಹಲಿ: ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವಂತೆ ಒತ್ತಾಯ ಮಾಡುವಂತಿಲ್ಲ ಅನ್ನೋ ಸುಪ್ರೀಂ ತೀರ್ಪಿನ ಬಳಿಕ ಅತೃಪ್ತ ಶಾಸಕರ ನಿಲುವಿಗೆ ಮತ್ತಷ್ಟು ಬಲ ಸಿಕ್ಕಿದೆ. ಯಾವುದೇ ಕಾರಣಕ್ಕೂ ನಾವು ನಾಳೆ ವಿಶ್ವಾಸಮತಕ್ಕೆ ಹಾಜರಾಗೋದಿಲ್ಲ ಅಂತ ದೋಸ್ತಿಗಳಿಗೆ ಸಂದೇಶ ರವಾನಿಸಿದ್ದಾರೆ. ವಿಪ್ ಉಲ್ಲಂಘನೆ ಕುರಿತು ಇಷ್ಟು ದಿನ ತಲೆಕೆಡಿಸಿಕೊಂಡಿದ್ದ ಅತೃಪ್ತ ಶಾಸಕರು ಇದೀಗ ತಮ್ಮ ನಿರ್ಧಾರದಿಂದ ಹಿಂದೆ...

‘ಮಂಗನ ಟೋಪಿ ಹಾಕಿಸಿಕೊಂಡು ಅನರ್ಹತೆ ಅಸ್ತ್ರಕ್ಕೆ ಗುರಿಯಾಬೇಡಿ’- ಅತೃಪ್ತರಿಗೆ ಡಿಕೆಶಿ ಮನವಿ

ಬೆಂಗಳೂರು: ಅತೃಪ್ತ ಶಾಸಕರು ಬಿಜೆಪಿಯ ಮಂಗನ ಟೋಪಿ ಹಾಕಿಸಿಕೊಳ್ಳದೆ ಎಚ್ಚರವಹಿಸಿ ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ ಅಂತ ಸಚಿವ ಡಿಕೆಶಿ ಅತೃಪ್ತ ಶಾಸಕರಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಸುಪ್ರೀಂಕೋರ್ಟ್ ಸ್ಪೀಕರ್ ಅಧಿಕಾರವನ್ನು ಎತ್ತಿಹಿಡಿದಿದೆ. ಅತೃಪ್ತ ಶಾಸಕರು ಅಧಿವೇಶನಕ್ಕೆ ಬರಬಹುದು, ಬಿಡಬಹುದು ಅದು ಅವರಿಗೆ ಬಿಟ್ಟದ್ದು. ಆದರೆ ಪಕ್ಷದ ಕೈಯಲ್ಲಿ ವಿಪ್...

ಸುಪ್ರೀಂಕೋರ್ಟ್ ತೀರ್ಪು- ಪರಿಣಾಮ ಯಾರ ಮೇಲೆ..?

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಕುರಿತು ಮಧ್ಯಂತರ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಇದೀಗ ದೋಸ್ತಿಗಳ ಎದೆಬಡಿತ ಹೆಚ್ಚಾಗಿದೆ ನಾಳೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಏನಾಗುತ್ತೋ ಅನ್ನೋ ಭೀತಿ ಶುರುವಾಗಿದ್ದು, ಇತ್ತ ಬಿಜೆಪಿ, ದೋಸ್ತಿ ಸರ್ಕಾರ ಪತನ ಖಚಿತ ಅಂತ ಈಗಾಗಲೇ ಬೀಗುತ್ತಿದೆ. ಅತೃಪ್ತರ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪು ಮೇಲ್ನೋಟಕ್ಕೆ...
- Advertisement -spot_img

Latest News

ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದರೂ ದುರುದ್ದೇಶಪೂರ್ವಕವಾಗಿ ಲಾಠಿ ಪ್ರಹಾರ ಮಾಡಿದ್ದಾರೆಂದ ಗಾಯಾಳು

Dharwad News: ಧಾರವಾಡ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಲಾಠಿ ಚಾರ್ಜ್ ನಡೆದಿದ್ದು, ಈ ವೇಳೆ ಗಾಯಗೊಂಡಿದ್ದ ನಾಗಪ್ಪ ಮುಮ್ಮಿಗಟ್ಟಿ ಎಂಬುವವರು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದಾರೆ. ಪಂಚಮಸಾಲಿ ಮೀಸಲಾತಿಗಾಗಿ...
- Advertisement -spot_img