ಬೆಂಗಳೂರು: ವಿಶ್ವಾಸಮತ ಯಾಚನೆಗೆ ಸೋಮವಾರ ಮುಹೂರ್ತ ನಿಗದಿಯಾಗಿದ್ದು ಇದರಲ್ಲಿ ಬಿಜೆಪಿ ಗೆಲುವು ಸಾಧಿಸಿರೋದು ಖಚಿತ ಅಂತ ಬಿಜೆಪಿ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಶಾಸಕರು ತಂಗಿರುವ ಯಲಹಂಕ ಬಳಿಯ ರಮಡ ರೆಸಾರ್ಟ್ ಬಳಿ ಮಾತನಾಡಿದ ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯಕ್, ವಿಧಾಸಭೆಯಲ್ಲಿ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ನಮ್ಮದೇ, ಹೀಗಾಗಿ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗ್ತಾರೆ ಅಂತ ವಿಶ್ವಾಸವ್ಯಕ್ತಪಡಿಸಿದ್ರು.
ಇನ್ನು ಬಳಿಕ ಮಾತನಾಡಿದ ಶಾಸಕ ಬೆಳ್ಳಿ ಪ್ರಕಾಶ್, ನಾವು ನಮ್ಮ ಕ್ಷೇತ್ರ ತೊರೆದು 15 ದಿನಗಳಾಗ್ತಾ ಬಂತು.ಆದರೂ ನಾವು ಸ್ಥಳೀಯರ ಜೊತೆ ಸಂಪರ್ಕದಲ್ಲಿದ್ದೇವೆ. ಕ್ಷೇತ್ರದಲ್ಲಿ ನಾವಿಲ್ಲ ಅನ್ನೋದು ಹೊರತುಪಡಿಸಿ ಎಲ್ಲಾ ಕೆಲಸಗಳಾಗ್ತಿದೆ. ಇನ್ನು ಸೋಮವಾರ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರೋದು ಸಾಬೀತಾಗುತ್ತದೆ ಅಂತ ಶಾಸಕ ಪ್ರಕಾಶ್ ಇದೇ ವೇಳೆ ಹೇಳಿದ್ರು.