Wednesday, October 29, 2025

Latest Posts

ಸಿದ್ದರಾಮಯ್ಯ ಕಾರಿನಲ್ಲಿ ಬಿಜೆಪಿ ನಾಯಕ ರವಿಕುಮಾರ್!

- Advertisement -

ರಾಜ್ಯ ರಾಜಕೀಯದಲ್ಲಿ ಇದೀಗ ಆರ್‌ಎಸ್‌ಎಸ್‌ ವಿಚಾರ ರಾಜಕೀಯ ರಂಗು ಪಡೆದುಕೊಂಡಿದೆ. ಕಾಂಗ್ರೆಸ್‌, ಬಿಜೆಪಿ ನಾಯಕರ ನಡುವೆ ಆರೋಪ–ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ಹಿನ್ನೆಲೆ, ಆರ್‌ಎಸ್‌ಎಸ್‌ನಿಂದ ಬಂದಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ನಡೆದ ಅಚ್ಚರಿ ಕ್ಷಣವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ರವಿಕುಮಾರ್ ಅವರು ಇಂದು ಸಿಎಂ ನಿವಾಸ ‘ಕಾವೇರಿ’ಯಿಂದ ಸಿದ್ದರಾಮಯ್ಯನವರ ಕಾರಿನಲ್ಲೇ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಸಿಎಂ ಅವರ ಹಿಂಬದಿ ಸೀಟಿನಲ್ಲಿ ಕುಳಿತು ಆತ್ಮೀಯವಾಗಿ ಮಾತನಾಡುತ್ತ ಬಂದಿರುವುದನ್ನು ಮಾಧ್ಯಮ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸಾಮಾನ್ಯವಾಗಿ ಸಿಎಂ ಕಾರಿನಲ್ಲಿ ಸಚಿವ ಅಶೋಕ್ ಪಟ್ಟಣ, ಭೈರತಿ ಸುರೇಶ್ ಅಥವಾ ಜಮೀರ್ ಅಹ್ಮದ್ ಖಾನ್ ಅವರಂತಹ ಕಾಂಗ್ರೆಸ್ ಮುಖಂಡರು ಕಾಣಿಸಿಕೊಳ್ಳುವರು.

ಆದರೆ ಇಂದು ಕಾರಿನಲ್ಲಿ ವಿಪಕ್ಷದ ಶಾಸಕ ರವಿಕುಮಾರ್ ಸಿಎಂ ಜೊತೆಗೆ ಕಾಣಿಸಿಕೊಂಡಿರುವುದು ರಾಜಕೀಯ ಕುತೂಹಲ ಹುಟ್ಟಿಸಿದೆ. ರಾಜಕೀಯದಲ್ಲಿ ಶಾಶ್ವತ ಮಿತ್ರ – ಶತ್ರು ಎಂಬುದು ಇಲ್ಲವೆಂಬ ನಿಜವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಆದರೆ ಸಿದ್ದರಾಮಯ್ಯನವರ ವಿರುದ್ಧ ತೀವ್ರ ಟೀಕೆ ನಡೆಸುತ್ತಿದ್ದ ರವಿಕುಮಾರ್ ಅವರು ಅವರ ಕಾರಿನಲ್ಲಿ ಪ್ರಯಾಣಿಸಿದ್ದೇ ಅಪರೂಪದ ಘಟನೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಇದೀಗ ಎಲ್ಲರ ಮುಂದಿರುವ ಪ್ರಶ್ನೆ ಏನೆಂದರೆ ರವಿಕುಮಾರ್ ಸಿಎಂ ನಿವಾಸಕ್ಕೆ ಏಕೆ ಹೋಗಿದ್ದರು? ಅವರು ಸಿಎಂ ಕಾರಿನಲ್ಲೇ ವಿಧಾನಸೌಧಕ್ಕೆ ಏಕೆ ಬಂದರು? ಮೂಲಗಳ ಪ್ರಕಾರ, ಯಾವುದೋ ಆಡಳಿತಾತ್ಮಕ ಅಥವಾ ವೈಯಕ್ತಿಕ ವಿಚಾರದ ಸಲುವಾಗಿ ಸಿಎಂ ಅವರನ್ನು ಭೇಟಿ ಮಾಡಲು ತೆರಳಿದ್ದು ಸಾಧ್ಯ ಎಂದು ಅಂದಾಜಿಸಲಾಗಿದೆ. ಆದರೆ ಅಧಿಕೃತ ಸ್ಪಷ್ಟನೆ ಇನ್ನೂ ದೊರಕಿಲ್ಲ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss