- Advertisement -
ಕರ್ನಾಟಕ ಟಿವಿ : ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದಿಚುಂಚನಗಿರಿ ಒಕ್ಕಲಿಗ ಸಂಸ್ಥಾನ ಮಠದ ನಿರ್ಮಲಾನಂದ ಶ್ರೀಗಳನ್ನ ಭೇಟಿಯಾದ್ರು. ಬೆಂಗಳೂರಿನ ವಿಜಯನಗರದಲ್ಲಿರುವ ಮಠಕ್ಕೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ್ರು.. ಇದೇ ವೇಳೆ ಪಕ್ಷದ ಅಧ್ಯಕ್ಷರಿಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಸಚಿವ ವಿ ಸೋಮಣ್ಣ, ಕಾರ್ಪೋರೇಟರ್ ದಾಸೇಗೌಡ ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ಸಾಥ್ ನೀಡಿದ್ರು.
ನಾನು ಮಠದ ಹಳೆಯ ವಿದ್ಯಾರ್ಥಿ – ನಳಿನ್ ಕುಮಾರ್ ಕಟೀಲು
ಅಧಿಕಾರದಲ್ಲಿ ಇವವರು ಇಲ್ಲದಿರುವವರು ಒಕ್ಕಲಿಗ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯೋದು ಮಾಮೂಲಿ. ಅದೇ ರೀತಿ ನಳಿನ್ ಕುಮಾರ್ ಕಟೀಲ್ ಬಂದಿದ್ದಾರೆ ಅಂತ ಎಲ್ರೂ ಭಾವಿಸಿದ್ರು. ಆದ್ರೆ ಭೇಟಿ ವೇಳೆ ನಾನೂ ಮಠದ ವಿದ್ಯಾರ್ಥಿಯಾಗಿದ್ದೆ ಅನ್ನುವ ಮೂಲಕ ನಳಿನ್ ಕುಮಾರ್ ಕಟೀಲ್ ಮಠದ ಜೊತೆಗಿನ ಸಂಬಂಧವನ್ನ ಬಿಚ್ಚಿಟ್ರು.
- Advertisement -