Monday, August 4, 2025

Latest Posts

BJP: ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೇ ಶುರುವಾಯ್ತಾ ರಾಜೀನಾಮೆ ಪರ್ವ?

- Advertisement -

ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭಗೊಂಡಿದೆ. ಧಾರವಾಡ ಮಾಹಾನಗರ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಹನಮಂತಪ್ಪ ದೊಡ್ಡಮನಿ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ಪ್ರಾಥಮಿಕ ಸದಸ್ಯತ್ವ  ಸ್ಥಾನಕ್ಕೆ ಹನಮಂತಪ್ಪ ದೊಡ್ಡಮನಿ ರಾಜೀನಾಮೆ ಸಲ್ಲಿಸಿದ್ದಾರೆ. ವಾಟ್ಸಪ್ ಮೂಲಕ ಹು-ಧಾ ಮಾಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಕಪಟಕರ್ ಅವರಿಗೆ ರಾಜೀನಾಮೆ ಮಾಹಿತಿಯನ್ನು ರವಾನಿಸಿದ್ದಾರೆ. ಪಕ್ಷದ ಕೆಲವರು ನಡೆದುಕೊಂಡ ರೀತಿಯಿಂದ ಬೇಸತ್ತು ರಾಜೀನಾಮೆ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಹನುಮಂತಪ್ಪ ದೊಡ್ಡಮನಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಆಪ್ತರಾಗಿದ್ದಾರೆ. ಪ್ರದೀಪ ಶೆಟ್ಟರ್ ಅಸಮಾಧಾನ ಬೆನ್ನಲ್ಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.

ನಾಯಕರ ಅಸಮಾಧಾನ:                                                                                                   *ಬಿಜೆಪಿಯಲ್ಲಿ ಸದ್ದಿಲ್ಲದೆ ಅತೃಪ್ತರ ಬಣ ಒಂದಾಗ್ತಿದೆ. ಇಂಥದ್ದೊಂದು ಬೆಳವಣಿಗೆ ಬಿಜೆಪಿಯಲ್ಲಿ ಜೋರಾಗಿಯೇ ನಡೆದಿದೆ.ಮೊನ್ನೆ ಮಾಜಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಅತೃಪ್ತಿ ವ್ಯಕ್ತಪಡಿಸಿದ್ದರು.

*ಈಗ ಪ್ರದೀಪ್ ಶೆಟ್ಟರ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ನಾಳೆ ಮತ್ತಿನ್ಯಾರು ಅನ್ನೋ ಪ್ರಶ್ನೆ ಬಿಜೆಪಿ ಹಿರಿಯ ನಾಯಕರನ್ನು ಕಾಡಲಾರಂಭಿಸಿದೆ.

ಲಿಂಗಾಯತ ಪ್ರಬಲ ಅಸ್ತ್ರ : ಬಿಜೆಪಿಯಲ್ಲಿ ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಎತ್ತಿಕಟ್ತಿದಾರೆ ಅನ್ನೋ ಮಾತು ಕೇಳಿಬಂದಿದೆ. ಬಿಜೆಪಿ ನಾಯಕರಿಂದ ಲಿಂಗಾಯತರಿಗೆ ಅನ್ಯಾಯ ಅನ್ನೋದೇ ಪ್ರಬಲ ಅಸ್ತ್ರವಾಗಿದೆ. ಲೋಕ ಚುನಾವಣೆಯಲ್ಲಿ ಲಿಂಗಾಯತರಿಗೇ ಅತಿ ಹೆಚ್ಚು ಟಿಕೆಟ್ ನೀಡಲು ಪಟ್ಟು ಹಿಡಿಯಲಾಗಿದೆ ಎನ್ನಲಾಗಿದೆ.

ಇದು ಲಿಂಗಾಯತರಿಗೆ ಟಿಕೆಟ್ ನೀಡುವಂತೆ ಒತ್ತಡನಾ?                                                            ಧಾರವಾಡ ಕ್ಷೇತ್ರದಲ್ಲಿಯೂ ಲಿಂಗಾಯತರಿಗೆ ಟಿಕೆಟ್ ಗೆ ಒತ್ತಡ ಹೇರಲಾಗುತ್ತಿದೆ. ಆ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸ್ಥಳೀಯ ನಾಯಕರು ಸೆಡ್ಡು ಹೊಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಹೈಕಮಾಂಡ್ ಮೌನ? ಜಗದೀಶ್ ಶೆಟ್ಟರ್ ಪಕ್ಷಾಂತರದ ನಂತರ ಬಿಜೆಪಿ ಒಡೆದ ಮನೆಯಾಗಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಒಂದರ ನಂತರ ಮತ್ತೊಂದು ಆಘಾತವಾಗಲಾರಂಭಿಸಿವೆ. ಇಷ್ಟೆಲ್ಲಾ ನಡೆದ್ರೂ ಬಿಜೆಪಿ ಹೈಕಮಾಂಡ್ ಮೌನಕ್ಕೆ ಜಾರಿದೆ. ಅತೃಪ್ತಿ ಶಮನಗೊಳಿಸಿದಿದ್ರೆ ತಾರಕ ಸ್ವರೂಪ ಪಡೆಯೋ ಎಲ್ಲ ಸಾಧ್ಯತೆಗಳಿವೆ.

Lokayukta: ಮಿನಿ ವಿಧಾನಸೌಧದ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ದಾಳಿ..!

 

HK Patil: ಮೋಡ ಬಿತ್ತನೆ ಕುರಿತು ಮುಖ್ಯಮಂತ್ರಿಗಳಿಗೆ ವಿಶ್ವಾಸ ಮೂಡಿಸುತ್ತೇನೆ..!

Clouds: ಹಾವೇರಿಯಲ್ಲಿ ಬರಗಾಲ ನಿವಾರಣೆಗೆ ಮೋಡ ಬಿತ್ತನೆ..!

- Advertisement -

Latest Posts

Don't Miss