Wednesday, August 6, 2025

Latest Posts

ಬಿಜೆಪಿ, ಆರ್.ಎಸ್.ಎಸ್ ವಿಷ ಬೀಜ ಬಿತ್ತುವ ಕಾರ್ಯವನ್ನು ಮಾಡ್ತಿದೆ: ಪ್ರಿಯಾಂಕ ಖರ್ಗೆ ಆಕ್ರೋಶ

- Advertisement -

Hubli News: ಹುಬ್ಬಳ್ಳಿ: ಶಾಲೆಯ ನೀರಿನ ಟ್ಯಾಂಕ್ ನಲ್ಲಿ ವಿಷ ಹಾಕಿದ ಪ್ರಕರಣದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್‌ ವಿಷ ಬಿಜ ಬಿತ್ತೋ ಕೆಲಸ ಮಾಡುತ್ತಿದೆ. ಶಾಲೆ ಮುಖ್ಯೋಪಾಧ್ಯಾಯನ ವರ್ಗಾವಣೆಗೆ ವಿಷ ಹಾಕ್ತಾರೆ. ಇವರೇನು ಮನುಷ್ಯರಾ.? ಎಂದು ಸಚಿವ ಪ್ರಿಯಾಂಕಾ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯಾಕೆ ಬಿಜೆಪಿಯವರು ಈ ಘಟನೆ ಬಗ್ಗೆ ಮಾತನಾಡುತ್ತಿಲ್ಲಾ. ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯವನ್ನು ಮಾಡುತ್ತಿದೆ ಎಂದರು.

ರಾಹುಲ್ ಗಾಂಧಿಗೆ ಸುಪ್ರೀಂ ತರಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚೀನಾದವರು ಬಂದಿದ್ದಾರೆ, ಅಂತ ಗಡಿಬಾಗದ ಹಳ್ಳಿ ಜನ ಹೇಳ್ತಿದ್ದಾರೆ. ಆ ಭಾಗದ ಸಂಸದರು ಕೂಡಾ ಹೇಳ್ತಿದ್ದಾರೆ. ಬಿಜೆಪಿಯವರಿಂದ ನಾವು ದೇಶಪ್ರೇಮ ಕಲಿಬೇಕಿಲ್ಲಾ ಎಂದು ಅವರು ಹೇಳಿದರು.

ಬಾಗಲಕೋಟ ಜಿಲ್ಲೆಯಲ್ಲಿ ಶಿಕ್ಷಕಿ ಜಾತಿ ನಿಂಧನೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಾತಿ ನಿಂದನೆ ಮಾಡೋ ಹಕ್ಕು ಸಂವಿಧಾನ ಯಾರಿಗೂ ಕೊಟ್ಟಿಲ್ಲಾ. ಅದು ಸರ್ಕಾರಿ ನೌಕರರು ಇರಲಿ, ಯಾರೇ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

Latest Posts

Don't Miss