Dharwad News: ಧಾರವಾಡ: ಹುಬ್ಬಳ್ಳಿಯಲ್ಲಿ ಕರ್ತವ್ಯ ನೀರತ ಎ ಎಸ್ ಐ ಸಾವು ಹಿನ್ನಲೆ, ಸಚಿವ ಸಂತೋಷ್ ಲಾಡ್ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂತಹ ಸಾವು ಆಗಬಾರದು. ನಾವು ಕೂಡಾ ಭೇಟಿ ನೀಡಿದ್ದೆವು, ಪೋಲಿಸ್ ಕಮಿಷನರ್ ಕೂಡಾ ಭೇಟಿ ನೀಡಿದ್ದರು ಆಸ್ಪತ್ರೆಗೆ. ಭಗವಂತ ಎ ಎಸ್ ಐ ಕುಟುಂಬಕ್ಕೆ ಧೈರ್ಯ ಕೊಡಲಿ. ಜಿಲ್ಲಾಡಳಿತದಿಂದ ನಾವು ಅವರಿಗೆ ಧೈರ್ಯ ಹೇಳುತ್ತೇವೆ. ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದು ಧಾರವಾಡದಲ್ಲಿ ಸಂತೋಷ್ ಲಾಡ್ ಹೇಳಿದ್ದಾರೆ.
ಇನ್ನು ಮುನಿರತ್ನ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಮುನಿರತ್ನ ವಿಚಾರದಲ್ಲಿ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ. ಯಾರೇ ಆಗಲಿ ಈ ರೀತಿ ಪದ ಬಳಕೆ ಮಾಡಬಾರದು. ಜನಪ್ರತಿನಿಧಿಯೇ ಆಗಿರಲಿ ಯಾರೇ ಇರಲಿ. ಮುನಿರತ್ನ ಧ್ವನಿ ಓರಿಜನಲ್ ಇದೆಯಾ, ನಕಲಿಯಾ ಮುಂದೆ ಗೊತ್ತಾಗುತ್ತದೆ. ದೂರಿನ ಆಧಾರದಲ್ಲಿ ಈ ಬಂಧನ ಆಗಿದೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಈ ರೀತಿ ಪದ ಬಳಕೆ ಮಾಡಬಾರದು ಎಂದಿದ್ದಾರೆ.
ಅವಸರದಲ್ಲಿ ಬಂಧನವೆಂದು ಬಿಜೆಪಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಬೆಳಗ್ಗೆ ಬಂಧನ ಮಾಡಿದ್ರೆ ಬೇಗ ಮಾಡಿದ್ರು ಅಂತಾರೆ. ಲೇಟಾಗಿ ಬಂಧನ ಮಾಡಿದ್ರೆ ಲೇಟ್ ಅಂತಾರೆ. ಯಾವಾಗ ಬಂಧನ ಮಾಡಬೇಕು ಅಂತಾ ಬಿಜೆಪಿಯವರನ್ನೇ ಕೇಳಬೇಕು. ಅವರಿಗೆ ಬರೆದು ಕೊಡಲು ಹೇಳಬೇಕು. ಐಪಿಸಿ ಸೆಕ್ಷನ್ ಗಳನ್ನು ತಿದ್ದುಪಡಿ ಮಾಡಿ ಕೊಡೊಕೆ ಹೇಳಬೇಡಿ ಎಂದು ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.