Spiritual: ತಾವು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕು. ಬೇಕಾದಾಗ, ಬೇಕಾದ್ದನ್ನು ಖರೀದಿಸುವಷ್ಟು ತಮ್ಮಲ್ಲಿ ಹಣವಿರಬೇಕು. ಐಷಾರಾಮಿ ಬದುಕು ತಮ್ಮದಾಗಬೇಕು ಎಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ, ನೀವು ಕೆಲವು ಗುಣಗಳನ್ನು ಹೊಂದಿರಬೇಕು.
ದುಷ್ಚಟಗಳಿಂದ ದೂರವಿರುವವರು: ದುಷ್ಚಟಗಳು ಅಂದ್ರೆ, ಹೆಣ್ಣು ಮಕ್ಕಳನ್ನು ಗೌರವಿಸದಿರುವುದು, ತಂದೆ ತಾಯಿಗೆ ಬೆಲೆ ಕೊಡದಿರುವುದು, ಮಕ್ಕಳನ್ನು ಪ್ರೀತಿಸದೇ ಇರುವುದು, ಹಿರಿಯರ ಬಗ್ಗೆ ಕಾಳಜಿ ಇಲ್ಲದಿರುವುದು, ಮದ್ಯ ಸೇವನೆ, ಸಿಗರೇಟ್ ಸೇವನೆ ಮಾಡುವುದು. ಕಳ್ಳತನ, ದರೋಡೆ ಮಾಡುವುದು. ಇತ್ಯಾದಿ ಚಟಗಳು ದುಷ್ಚಟಗಳಾಗಿದೆ. ಇವೆಲ್ಲದರಿಂದ ದೂರವಿದ್ದು, ತಮ್ಮಷ್ಟಕ್ಕೆ ತಾವು ಜೀವಿಸುವ, ಬೇರೆಯವರಿಗೆ ತೊಂದರೆ ಕೊಡದೇ ಬದುಕುವ ಮನುಷ್ಯರ ಮೇಲೆ ಲಕ್ಷ್ಮೀ ದೇವಿ ಕೃಪೆ ತೋರುತ್ತಾಳೆ.
ಜೀವನದಲ್ಲಿ ನಿಯತ್ತಾಗಿ ಇರುವವರು: ಲಂಚ ಪಡಿಯದೇ, ಬೇರೆಯವರ ದುಡ್ಡಿಗೆ ಆಸೆ ಪಡದೇ, ಇನ್ನೊಬ್ಬರ ಜೀವನವನ್ನು ಹಾಳು ಮಾಡದೇ, ನಿಯತ್ತಾಗಿ ದುಡಿದು ಜೀವನ ಮಾಡುವವರು ಲಕ್ಷ್ಮೀ ದೇವಿಯ ಕೃಪೆಗೆ ಪಾಾತ್ರರಾಗುತ್ತಾರೆ. ಆದರೆ ಇಂದಿನ ಕಾಲದಲ್ಲಿ ಇಂಥವರೇ ಸುಖವಾಗಿ ಇದ್ದಾರೆ ಎಂದು ನೀವು ಹೇಳಬಹುದು. ಆದರೆ ಒಂದಲ್ಲ ಒಂದು ದಿನ ಆ ಸುಖದ ಸುಪ್ಪತಿಗೆಯಿಂದ ಲಕ್ಷ್ಮೀ ದೇವಿ ಅಂಥವರನ್ನು ಇಳಿಸಿಯೇ ಇಳಿಸುತ್ತಾಳೆ. ಹಾಗಾಗಿ ಜೀವನದಲ್ಲಿ ನಿಯತ್ತಾಗಿ ಇರುವುದು ತುಂಬಾ ಮುಖ್ಯ.
ಸ್ವಚ್ಛವಾಗಿ ಇರುವವರು: ಮನೆಯಲ್ಲಿ ಸ್ವಚ್ಛತೆ ಕಾಪಾಡುವವರು, ತಾವು ಕೆಲಸ ಮಾಡುವ ಸ್ಥಳದಲ್ಲಿ ಸ್ವಚ್ಛವಾಗಿ ಇರುವವರು, ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಿ, ಶುದ್ಧತೆ ಕಾಪಾಡಿಕೊಳ್ಳುವವರು. ಸ್ವಚ್ಛವಾದ ಬಟ್ಟೆ ಧರಿಸುವವರು. ಇಂಥವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಇನ್ನು ಕೊಳಕಾಗಿ ಬಟ್ಟೆ ಧರಿಸುವವರು, ಸ್ನಾನ ಮಾಡದೇ ಗಬ್ಬು ಗಬ್ಬಾಗಿ ಇರುವವರು, ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದವರ ಮನೆಯಲ್ಲಿ ದರಿದ್ರ ಲಕ್ಷ್ಮೀ ವಾಸವಾಗಿರುತ್ತಾಳೆ.
ಶಿಸ್ತು ಹೊಂದಿರುವವರು: ಜೀವನದಲ್ಲಿ ಶಿಸ್ತಾಗಿ ಇರುವವರು. ಬೇಗ ಏಳುವವರು, ತಮ್ಮ ಕೆಲಸವನ್ನು ಶಿಸ್ತಿನಿಂದ ಮಾಡುವವರು. ಆಲಸ್ಯವಿಲ್ಲದೇ, ಅಚ್ಚುಕಟ್ಟಾಗಿ ಇರುವವರು ಆರ್ಥಿಕವಾಗಿ ಉತ್ತಮವಾಗಿರುತ್ತಾರೆ. ವಿದ್ಯಾರ್ಥಿಗಳು ಶಿಸ್ತಿನಿಂದ ಇದ್ದು, ಓದಿದರೆ, ಅಂಥವರರು ಕೂಡ ಭವಿಷ್ಯದಲ್ಲಿ ಆರ್ಥಿಕವಾಗಿ ಉತ್ತಮವಾಗಿರುತ್ತಾರೆ.
ಹಣಕ್ಕೆ ಗೌರವಿಸುವವರು: ಕಂಡಕಂಡದ್ಧನ್ನು ಕೊಂಡುಕೊಳ್ಳುವ, ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುವ, ಹಣವಿದೆ ಎಂದು ಜಂಬ ಪಡುವ ಮನುಷ್ಯರನ್ನು ಲಕ್ಷ್ಮೀ ದೇವಿ ಇಷ್ಟಪಡುವುದಿಲ್ಲ. ಹಾಗಾಗಿಯೇ ಕೆಲ ದಿನಗಳಲ್ಲಿ ಅಂಥವರು ಆರ್ಥಿಕವಾಗಿ, ಬಲಹೀನವಾಗುತ್ತಾರೆ. ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ.