- Advertisement -
state news
ಮಂಡ್ಯ(ಮಾ.1): ಬಿಜೆಪಿ ಕಾರ್ಯಕರ್ತರ ಸಭೆ ಮಂಡ್ಯದಲ್ಲಿ ಬಿಜೆಪಿ ಗದ್ದುಗೆಗಾಗಿ ಕಸರತ್ತು ನಡೆದಿದೆ. ಮಂಡ್ಯ ನಗರದ ಹೊಸಹಳ್ಳಿಯ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆದಿದೆ. ಮಂಡ್ಯ ಟಿಕೆಟ್ ಆಕಾಂಕ್ಷಿ ಅಶೋಕ್ ಜಯರಾಮ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ಕೊಡಲಾಯಿತು. ಈ ವೇಳೆ ಬಿಜೆಪಿಗೆ ಹಲವರು ಸೇರ್ಪಡೆಯಾಗಿದ್ದು, ಸಭೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಶುರುವಾಗಲಿದೆ. ಹೀಗಾಗಿ ಎಲ್ಲಾ ಪಕ್ಷಗಳಲ್ಲೂ ತೀವ್ರತರವಾದ ಪೈಪೋಟಿ ನಡೆಯುತ್ತಿದ್ದು, ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಚುನಾವಣಾ ಹವಾ ಇನ್ನೂ ಜೋರಾಗಲಿದೆ ಎನ್ನುವುದು ಸತ್ಯ.
- Advertisement -