ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್, ತನ್ನ ಹೊಸ ಮನೆಗೆ ಪ್ರಧಾನಿ ಮೋದಿಯವರ ಹೆಸರನ್ನಿಟ್ಟಿದ್ದಾರೆ. ಮಾಲೂರು ನಗರದ ವೈಟ್ ಗಾರ್ಡನ್ ಬಡಾವಣೆಯಲ್ಲಿ ಐಷಾರಾಮಿ ಮನೆ ನಿರ್ಮಾಣವಾಗಿದ್ದು, ನಿನ್ನೆ ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಮೂಲಕ ಹೂಡಿ ವಿಜಯ್ ಕುಮಾರ್ ಮಾಲೂರು ತಾಲೂಕಿನಲ್ಲಿ ಟಿಕೆಟ್ ಗಾಗಿ ಲಾಭಿ ಮುಂದುವರೆಸಿದ್ದಾರೆ. ಈಗಾಗಲೇ ಮಾಲೂರು ಬಿಜೆಪಿ ಟಿಕೆಟ್ ಗಾಗಿ ಹಲವರು ಲಾಭಿ ನಡೆಸ್ತಿರುವ ವೇಳೆಯಲ್ಲಿ, ಹೂಡಿ ವಿಜಯ್ ಕುಮಾರ್ ಮಾಲೂರು ನಗರದಲ್ಲೆ ಮನೆ ನಿರ್ಮಾಣ ಮಾಡಿದ್ದು, ಇನ್ನು ದಿನನಿತ್ಯ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ಸೂಚನೆ ನೀಡಿದ್ದಾರೆ.
ಗುಜರಾತ್ ನ 18ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ
ಗೃಹ ಪ್ರವೇಶ ಕಾರ್ಯಕ್ರಮ ಹೆಸರಲ್ಲಿ ಭರ್ಜರಿ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದು ಮಾಂಡೌಸ್ ಸೈಕ್ಲೋನ್ ಜಡಿ ಮಳೆಯ ನಡುವೆಯೂ, ಮನೆ ಎದುರು ಜರ್ಮನ್ ಶೆಡ್ ನಿರ್ಮಾಣ ಮಾಡಿ, ಸಾವಿರಾರು ಮಹಿಳೆಯರಿಗೆ, ಬಳೆಶಾಸ್ತ್ರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್, ಪ್ರಧಾನಿ ಮೋದಿಯವರ ಅಭಿಮಾನಿಯಾಗಿ ನಮ್ಮ ಮನೆಗೆ ಅವರ ಹೆಸರಿಟ್ಟಿದ್ದೇನೆ. ಟಿಕೆಟ್ ಲಾಭಿಗಾಗಿ ಮನೆ ನಿರ್ಮಾಣ ಮಾಡಿಲ್ಲ, ಸ್ಥಳೀಯರಿಗೆ ದಿನನಿತ್ಯ ಸಂಪರ್ಕದಲ್ಲಿರಲು ಮನೆ ನಿರ್ಮಾಣ ಮಾಡಿರುವೆ. ಮಾಲೂರು ಬಿಜೆಪಿ ಟಿಕೆಟ್ ನನಗೆ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.